

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ – ಮಳೆಬರದೆ ರೈತನ ಬದುಕು ಹಸನಾಗದು ಜೀವ ಸಂಕುಲಕ್ಕೆ ಪರಿಸರಕ್ಕೆ ಮಳೆ ಒಂದು ವರವಿದ್ದಂತೆ ಆದರೆ ಅದೇ ಮಳೆ ಒಮ್ಮೊಮ್ಮೆ ಅನ್ನದಾತನ ಬದುಕಿಗೆ ಕಂಟಕವಾಗಿಬಿಡುವುದು ತೆರೆದಿಟ್ಟ ಸತ್ಯವಾಗಿದೆ.
ರಾಜ್ಯಕ್ಕೆ ಝ ಬಾರಿ ಮುಂಗಾರು ತಡವಾಗಿ ಪ್ರವೇಶಿಸಿದೆ. ಕಳೆದ ಜುಲೈ ತಿಂಗಳಲ್ಲಿ ವಿವಿಧ ಪ್ರದೇಶದಲ್ಲಿ ಒಂದಷ್ಟು ಅವಾಂತರ ಸೃಷ್ಟಿಸಿತ್ತು. ಅದೃಷ್ಟವಶಾತ್ ಯಲ್ಲಾಪುರ ತಾಲೂಕಿನಲ್ಲಿ ಮಳೆಯಿಂದಾಗಿ ದೊಡ್ಡ ಪ್ರಮಾಣದ ದುರಂತ ಸಂಭವಿಸಿರಲಿಲ್ಲ ಆದಾಗ್ಯು ತಾಲೂಕಿನ ಕೆಲವು ಪ್ರದೇಶಗಳಲ್ಲಿ ಮಳೆ ರಾಯ ತನ್ನ ರೌಧ್ರಾವತಾರ ತೋರಿದ್ದಾನೆ.

ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಾಗೀನಕಟ್ಟ ಗ್ರಾಮದಲ್ಲಿ ಸ.ನಂ 36 ರ ಖಾತೆದಾರಳಾದ ಶ್ರೀಮತಿ ಟಿ ಕೋಮಾರ ಅವರಿಗೆ ಸೇರಿದ ಅಡಿಕೆ ತೋಟವು ಹಳ್ಞ ಹರಿಯುವ ರಭಸಕ್ಕೆ ಹಳ್ಳದ ತಟದಲ್ಲಿದ್ದ ಸುಮಾರು 100 ಕ್ಕು ಅಧಿಕ ಅಡಿಕೆ ಮರಗಳು ಧರಾಶಾಯಿಯಾಗಿ ಬರೊಬ್ಬರಿ 8 ಅಡಿ ಆಳದ ವರೆಗೆ ಕುಸಿದಿದ್ದು 15 ಗುಂಟೆಯಷ್ಟು ತೋಟದ ಜಾಗವನ್ನು ಹರಿಯುತ್ತಿರುವ ಹಳ್ಳ ಆಪೋಷಣ ತೆಗೆದುಕೊಂಡಿದೆ.

ದೇಶಕ್ಕೆ ಅನ್ನವಿಕ್ಕುವ ರೈತನ ಕೃಷಿ ಕಾರ್ಯದ ಹೋರಾಟದ ಬದುಕಿನಲ್ಲಿ ಹಲವು ಸಮಸ್ಯೆಗಳ ನಡುವೆ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಹೊಸ ಸಮಸ್ಯೆಗಳು ಸೇರ್ಪಡೆಯಾಗುತ್ತಿರುವುದು ವಿಷಾಧದ ಸಂಗತಿಯಾಗಿದೆ.
ಬೀಜ,ಗೊಬ್ಬರ, ಮಳೆ, ಕೆಲಸದಾಳುಗಳಿಗೆ ಕೊಡುವ ಕೂಲಿ ಹಣ, ಬೆಳೆದ ಬೆಳೆಯನ್ನು ಕಾಡು ಪ್ರಾಣಿಗಳಿಂದ ರೋಗರುಜಿನಗಳಿಂದ ರಕ್ಷಿಸಿ ಹಗಲುರಾತ್ರಿ ನಿದ್ರೆಗೆಟ್ಡು ಬೆಳೆ ಕಾದು ಮಾರುಕಟ್ಟೆಗೆ ತರುವಷ್ಡರಲ್ಲಿ ಜೀವಹೋಗಿ ಬಂದಂತಾಗಿರುತ್ತದೆ ಅಂತಹ ಸಮಯದಲ್ಲಿ ನಿಗದಿತ ಬೆಲೆ ಸಿಕ್ಕರೆ ಪುಣ್ಯ ಇಲ್ಲ ಅಲ್ಲಿಯು ರೈತನಿಗೆ ನಿರಾಶೆ ಕಾದಿದ್ದರೆ ಬಂದ ದಾರಿಗೆ ಸುಂಕವಿಲ್ಲವೆಂದು ಸಿಕ್ಕಷ್ಟು ಬೆಲೆಗೆ ಬೆಳೆ ಮಾರಬೇಕು ಇಷ್ಟೆಲ್ಲಾ ಗೊಂದಲದ ನಡುವೆ ಪ್ರಕೃತಿ ಮುನಿದು ಅವಾಂತರ ಸೃಷ್ಡಿಸಿದರೆ ಕೃಷಿಕನ ಕಥೆ ಏನಾಗಬೇಡ.

ಸರ್ಕಾರ ಇಂತಹ ಗಂಭೀರ ಸಮಸ್ಯೆಗಳ ಕಡೆಗೆ ತಕ್ಷಣ ಸ್ಪಂದಿಸಿ ಪರಿಹಾರ ನೀಡುವುದು ಮತ್ತು ಇಂತಹ ಅವಘಡ ಸಂಭವಿಸದಂತೆ ಹಳ್ಳದ ಬದಿಗೆ ತೊಟಕ್ಕೆ ದಕ್ಕೆಯಾಗದಂತೆ ಕಲ್ಲಿನ ಕಟ್ಟಡ ವನ್ನು ಸಿಮೆಂಟ್ ಮತ್ತು ಕಬ್ಬಿಣ ಬಳಸಿ ಗಟ್ಟಿ ಮುಟ್ಟಾಗಿ ಕಟ್ಟಿಕೊಟ್ಡಲ್ಲಿ ರೈತ ಇನ್ನಷ್ಟು ಹುಮ್ಮಸ್ಸಿನಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲ್ಲಿದ್ದಾನೆ ಎಂಬುದು ಹಿರಿಯ ರೈತರ ಅಭಿಪ್ರಾಯವಾಗಿದೆ.
ಏನಾದರು ದುರ್ಘಟನೆ ಸಂಭವಿಸಿ ಯಾರಾದರು ನಿಧನಹೊಂದಿದರೆ ತಕ್ಷಣ ಜನಪ್ರತಿನಿಧಿಗಳು ಅಥವ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಪರಿಹಾರ ಮೊತ್ತದ ಚೆಕ್ ನೀಡಿ ಧೈರ್ಯ ತುಂಬುವಂತೆ
ರೈತ ತಾನು ಬೆಳೆದ ಬೆಳೆಗಳನ್ನು ಮಕ್ಕಳಂತೆ ಸಾಕಿ ಬಹು ವರ್ಷಗಳಿಂದ ಕಾಪಾಡಿಕೊಂಡು ಬಂದು ಇಂತಹ ಅವಘಡದಿಂದ ನಾಶವಾದರೆ ಸಾಂತ್ವಾನ ಹೇಳಲು ಜನಪ್ರತಿನಿಧಿಗಳು ಅಥವಾ ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಹಾರದ ಮೊತ್ತ ರೈತನ ಕೈಗೆ ನೀಡಿ ಧೈರ್ಯ ತುಂಬುವ ಕೆಲಸವಾಗಬೇಕಿದೆ ಎಂಬುದು ಹಲವು ಕೃಷಿಕರ ಮಾತಾಗಿದೆ.
ಕಳೆದ ತಿಂಗಳು ಸುರಿದ ಬಾರಿ ಮಳೆಗೆ ನಮ್ಮ ತೋಟದ ಬದಿ ಹಳ್ಳದ ನೀರು ರಭಸವಾಗಿ ಹರಿಯಲಾರಂಭಿಸಿ ಒಂದಷ್ಟು ತೋಟ ಕೊಚ್ಚಿ ಹೋಗಿದೆ. ನೂರಕ್ಕು ಅಧಿಕ ಅಡಿಕೆ ಮರ ನೆಲಸಮವಾಗಿದೆ ಇಂತಹ ಅವಘಡಗಳು ಭವಿಸದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಹಳ್ಳದ ಬದಿಯತೋಟದ ಸಾಲಿಗೆ ಕಲ್ಲಿನ ತಡೆಗೋಡೆ ನಿರ್ಮಿಸಬೇಕು ಅದಕ್ಕೆ ಕನಿಷ್ಡ ಎಂದರು 10 ಲಕ್ಷದಷ್ಟು ಹಣ ಬೇಕು ಮತ್ತು ಸಾಮಾಗ್ರಿಗಳನ್ನು ಸಹ ತಲೆಮೇಲೆ ಹೊತ್ತು ಸಾಗಿಸಬೇಕಿದೆ. ಇದೆಲ್ಲವನ್ನು ಮಾಡಲು ಸರ್ಕಾರ ರೈತರ ಸಂಕಷ್ಟಕ್ಕೆ ಮುಂದಾಗಿ ಸಹಾಯ ಹಸ್ತ ಚಾಚಬೇಕಿದೆ.
ಟಿ.ಕೋಮಾರ
ಕೃಷಿಕರು ಬಾಗಿನಕಟ್ಟ
ಘಟನೆ ನಡೆದ ವಿಚಾರ ತಿಳಿದು ಸ್ಥಳಕ್ಕೆ ತೆರಳಿ ವಸ್ತು ಸ್ಥಿತಿ ಪರಿಶೀಲಿಸಿ ನನ್ನ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇನೆ.
ಈಶ್ವರ ಪಟಗಾರ
ಗ್ರಾಮ ಆಡಳಿತ ಅಧಿಕಾರಿ







Prathidvani Yellapura