Breaking News

ಚುನಾವಣೆಯಲ್ಲಿ ದುಡಿದ ಸರ್ವರಿಗು ಸಾಸ್ಟಾಂಗ ನಮನಗಳು – ವಿ.ಎಸ್.ಪಾಟೀಲ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ. : ಚುನಾವಣೆಯಲ್ಲಿ ಸೋಲು-ಗೆಲುವು ಸಹಜ ಪ್ರಕ್ರಿಯೆ. ಸೋತೆನೆಂಬ ಭಾವದಲ್ಲಿ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರ ನೋವಿಗೆ ನಾನು ಚಿರಋಣಿಯಾಗಿದ್ದೇನೆ. ಪಕ್ಷವೊಂದು ದೋಣಿಯಿದ್ದಂತೆ, ನಾವೆಲ್ಲರೂ ಅದರಲ್ಲಿ ಪಯಣಿಸುತ್ತಿದ್ದೇವೆ. ನಾವೇ ದೋಣಿಗೆ ತೂತು ಮಾಡಿದರೆ ಎಲ್ಲರೂ ಮುಳುಗಬೇಕಾಗುತ್ತದೆ. ನಮ್ಮೊಂದಿಗೆ ಪಕ್ಷವೂ ಸಹ. ಇದರರ್ಥ ಚುನಾವಣೆಗೂ ಮುನ್ನಾ ಬಿ-ಫಾರ್ಮ ಕೊಡುವ ವಿಚಾರದಲ್ಲಿ ಪರ-ವಿರೋಧವಿರಬೇಕೇ ಹೊರತು ನೀಡಿದ ನಂತರವಲ್ಲ ಎಂಬುದನ್ನು ಮನಗಾಣಬೇಕಿದೆ. ಬರಲಿರುವ ತಾ.ಪಂ ಮತ್ತು ಜಿ.ಪಂ ಚುನಾವಣೆಯಲ್ಲಿ ಎಲ್ಲಾ ನೋವನ್ನು ಮರೆತು ಪಕ್ಷ ಸಂಘಟಿಸಿ ಕಾರ್ಯಕರ್ತರನ್ನು ನಾಯಕರನ್ನಾಗಿಸಬೇಕಿದೆ ಎಂದು ಎಂದು ಮಾಜಿ ಶಾಸಕ, ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿಯೂ ಆದ ವಿ.ಎಸ್.ಪಾಟೀಲ್ ಹೇಳಿದರು.


ಅವರು ಪಟ್ಟಣದ ಅಡಿಕೆ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.


ಚುನಾವಣೆಯಲ್ಲಾದ ಸೋಲಿನಿಂದ ನಾನಂತೂ ಕುಗ್ಗಿಲ್ಲ, ಕಾಂಗ್ರೆಸ್ ಪಕ್ಷ ಬಡವರ ಪಕ್ಷವಾಗಿದ್ದು ಬಡವರ ಸೇವೆಗೆ ಸದಾ ಸಿದ್ಧವಿದೆ. ನಮ್ಮ ಕಾರ್ಯಕರ್ತರು ಚುನಾವಣೆ ಸಂದರ್ಭದಲ್ಲಿ ಜನತೆಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಚುನಾವಣೆಯಲ್ಲಿ ದುಡಿದ ಸರ್ವರಿಗೂ ಶಿರಸಾಷ್ಟಾಂಗ ನಮಿಸುತ್ತೇನೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿನಾಥÀ ಗಾಂವ್ಕರ್ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯಾಗಿದ್ದ ವಿ.ಎಸ್.ಪಾಟೀಲ್ ಅತ್ಯಂತ ಕಡಿಮೆ ಮತಗಳ ಅಂತರದಿAದ ಸೋತಿರುವುದು ಜಿಲ್ಲೆಯೇ ಬೇಸರ ಪಡುವ ಸಂಗತಿಯಾಗಿದೆ. ಗೆಲ್ಲುವ ಕ್ಷೇತ್ರಗಳ ಪೈಕಿ ಯಲ್ಲಾಪುರ ವಿಧಾನಸಭಾ ಕ್ಷೇತ್ರ ಪ್ರಮುಖ ಸ್ಥಾನದಲ್ಲಿತ್ತು. ಆದರೂ ಈ ಸೋಲು ಏಕೆ ಆಯಿತೆಂಬುದರ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆಯಲ್ಲದೇ ಇದಕ್ಕೆ ಕಾರಣವನ್ನು ಕಂಡುಕೊಳ್ಳಬೇಕಿದೆ ಎಂದರು.


ರಾಜ್ಯದಲ್ಲಿ ಆಡಳಿತದಲ್ಲಿರುವ ನಮ್ಮ ಪಕ್ಷದ ಸರ್ಕಾರ ವಿ.ಎಸ್.ಪಾಟೀಲರಿಗೆ ಯೋಗ್ಯ ಸ್ಥಾನಮಾನವನ್ನು ನೀಡಿ ಮನ್ನಣೆ, ಗೌರವಗಳನ್ನು ನೀಡುತ್ತದೆಯಲ್ಲದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಅವರನ್ನು ಪಕ್ಷದ ನಾಯಕನೆಂದು ಪರಿಗಣಿಸಿ ಪೂರ್ಣ ಸ್ವಾತಂತ್ರವನ್ನೂ ನೀಡುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು.


ಹಿರಿಯರಾದ ಎನ್.ಕೆ.ಭಟ್ಟ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್ಟ, ಸರಸ್ಚತಿ ಗುನಗಾ, ಎಂ.ಕೆ.ಭಟ್ಟ ಯಡಳ್ಳಿ, ಜಿಲ್ಲಾ ಹಿಂದುಳಿದ ಘಟಕದ ಅಧ್ಯಕ್ಷ ರವಿ ನಾಯ್ಕ, ರಾಮಾ ಹೆಗಡೆ ಕಬ್ಬಿನಗದ್ದೆ ಮತ್ತಿತರರು ವಿ.ಎಸ್.ಪಾಟೀಲರ ಸೋಲಿನ ಕುರಿತಾದ ಪರಾಮರ್ಶೆ ನಡೆಸಿದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ್, ಡಿ.ಸಿ.ಸಿ ಸದಸ್ಯ ಉಲ್ಲಾಸ ಶಾನಭಾಗ, ಕೆಪಿಸಿಸಿ ಸದಸ್ಯ ದಿಲೀಪ ರೋಖಡೆ, ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ನೆತ್ರೇಕರ್, ಪ್ರಮುಖರಾದ ಎಂ.ಜಿ.ಭಟ್ಟ, ಪ.ಪಂ ಸದಸ್ಯೆ ನರ್ಮದಾ ನಾಯ್ಕ, ನರಸಿಂಹ ನಾಯ್ಕ, ಜಿ.ಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಹಾಸಣಗಿ, ಕಾಸಿಮ್ ಸಾಬ್ ಮುಂಡಗೋಡು, ಅನಿಲ ಮರಾಠೆ, ಅನಿಲ್ ನಾಯ್ಕ ಇಡಗುಂದಿ ಮತ್ತಿತರರು ವೇದಿಕೆಯಲ್ಲಿದ್ದರು.
ವಿಶ್ವೇಶ್ವರ ಜೋಷಿ ಸ್ವಾಗತಿಸಿದರು. ನಗರ ಘಟಕಾಧ್ಯಕ್ಷ ರವಿಚಂದ್ರ ನಾಯ್ಕ ನಿರ್ವಹಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *