
ಯಲ್ಲಾಪುರ : ತಾಲೂಕಿನ ಮದನೂರಿನಲ್ಲಿ ನಡೆದ ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ ಖಂಡಿಸಿ, ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆಗೆ ಆಗ್ರಹಿಸಿ ತಾಲೂಕು ಬಿಜೆಪಿ ಘಟಕವು ಗುರುವಾರ ರಾತ್ರಿ ಪಟ್ಟಣದ ತಿಲಕ ಚೌಕಿನಿಂದ ಅಂಬೇಡ್ಕರ್ ವೃತ್ತದ ವರೆಗೆ ಪಂಜಿನ ಮೆರವಣಿಗೆ ನಡೆಸಿತು.

ಅಂಬೇಡ್ಕರ್ ವೃತ್ತದಲ್ಲಿ ಹೇಯ ಕೃತ್ಯವನ್ನು ಖಂಡಿಸಿ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ ‘ ಮದ್ನೂರಿನ ಘಟನೆ ಹಿಂದೂ ಸಮಾಜಕ್ಕೆ ಹಾಕಿದ ಸವಾಲು, ಇದನ್ನು ಹಿಂದೂ ಸಮಾಜ ಸಮರ್ಥವಾಗಿ ಎದುರಿಸಲು ಸಿದ್ಧವಾಗಿದೆ. ಯಲ್ಲಾಪುರದಲ್ಲಿ ಪೈಶಾಚಿಕ ಕೃತ್ಯ ನಡೆದಾಗ ದೂರು ನೀಡಲು ಸಾಧ್ಯವಾಗದ ಪರೀಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಭಯಾನಕ ವಾತಾವರಣ ನಿರ್ಮಾಣವಾಗಿದೆ. ರಾಜ್ಯದ ಉದ್ದಗಲಕ್ಕೂ ಮತಾಂಧರಿಗೆ ಬೆಂಬಲ ನೀಡುವ ಕಾಂಗ್ರೆಸ್ ಆಡಳಿತ , ಶಾಸಕರು, ಅಧಿಕಾರಶಾಹಿ ಇರುವುದೇ ಇದಕ್ಕೆ ಕಾರಣ. ಮೈಮರೆತರೆ ಘಟನೆ ಮರೆ ಮಾಚಿ ಹೋಗುತ್ತದೆ.ರಾಜ್ಯ ಸರಕಾರ ಸೂಕ್ತವಾಗಿ ಸ್ಪಂಧಿಸಬೇಕು’ ಎಂದರು.

ವೆಂಕಟ್ರಮ ಬೆಳ್ಳಿ ಮಾತನಾಡಿ ಮದ್ನೂರಿನಲ್ಲಿ ನಡೆದ ಘಟನೆ ಮಕ್ಕಳನ್ನು ಶಾಲೆಗೆ ಕಳಿಸಲು ಹೆದರುವ ಪರಿಸ್ಥಿತಿ ಬಂದಿದೆ. ಹಿಂದೆ ಬಿಹಾರ, ಉತ್ತರ ಪ್ರದೇಶ ಗೂಂಡಾ ರಾಜ್ಯ ಎಂದು ಹೇಳಲಾಗುತ್ತಿತ್ತು. ಆದರೆ ಇಂದು ಅದು ಸಜ್ಜನ ರಾಜ್ಯವಾಗಿ ಹೊರ ಹೊಮ್ಮಿದೆ. ಸಜ್ಜನರ ರಾಜ್ಯವಾಗಿದ್ದ ಕರ್ನಾಟಕದಲ್ಲಿ ಇಂದು ಗೂಂಡಾ ರಾಜ್ಯವಾಗಿದೆ. ಪೊಲೀಸರು ಸರಿಯಾಗ ಕಾರ್ಯ ನಿರ್ವಹಿಸಲಾಗುತ್ತಿಲ್ಲ. ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ’ ಎಂದರು

ಎಸ್.ಸಿ.ಮೋರ್ಚಾ ಅಧ್ಯಕ್ಷೆ ಶ್ಯಾಮಿಲಿಪಾಟಣಕರ ಮಾತನಾಡಿ ಹೇಯಕೃತ್ಯದ ಕುರಿತು ಬೀದಿಗೆ ಇಳಿಯುವ ಪರೀಸ್ಥಿತಿ ನಿರ್ಮಾಣವಾಗಿದೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲವಾಗಿದೆ. ಸರಕಾರ ಸೂಕ್ತ ರಕ್ಷಣೆ ನೀಡುವ ಕಾರ್ಯ ಮಾಡಬೇಕು’ ಎಂದರು.

ರಾಮು ನಾಯ್ಕ್, ಉಮೇಶ್ ಭಾಗ್ವತ್, ಗೋಪಾಲಕೃಷ್ಣ ಗಾಂವ್ಕರ್, ಕಲ್ಪನಾ ನಾಯ್ಕ್, ನಟರಾಜ ಗೌಡರ್, ಸೋಮೇಶ್ವರ ನಾಯ್ಕ, ರಾಘವೇಂದ್ರ ಭಟ್ಟ,ನಾಗರಾಜ ಕೌಡಿಕೆರೆ, ರಜತ ಬದ್ದಿ, ಆದಿತ್ಯ ಗುಡಿಗಾರ, ರವಿ ದೇವಡಿಗ, ವಿನೋದ ತಳೇಕರ್, ವಿ.ಎನ್. ಭಟ್ಟ ಇತರರಿದ್ದರು
ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು, ಕಾರ್ಯದರ್ಶಿ ರವಿ ಕೈಟ್ಕರ್ ನಿರೂಪಿಸಿದರು. ಮಹಿಳಾ ಮೋರ್ಚಾ ಅಧ್ಯಕ್ಷೆ ಶೃತಿ ಹೆಗಡೆ ವಂದಿಸಿದರು.




.
Prathidvani Yellapura