



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪರಿಸರ ಸಕಲ ಜೀವರಾಶಿಗು ಅತ್ಯವಶ್ಯಕವಾಗಿದೆ. ಅರಣ್ಯ ಸಂರಕ್ಷಣೆಯಿಂದ ಭೂಮಿಗೆ ಮಳೆ ಬೀಳಲು ಮನುಷ್ಯನಿಗೆ ಆರೋಗ್ಯಕರ ಗಾಳಿ ಸೇವನೆಗೆ, ಕಾಡು ಪ್ರಾಣಿಗಳ ಸಂತತಿ ಉಳಿಸಲು ಒಟ್ಟಿನಲ್ಲಿ ಆರೋಗ್ಯಕರ ಭೂಮಿಯ ವಾತಾವರಣಕ್ಕೆ ಅರಣ್ಯ ಉಳಿಸಿ ಬೆಳೆಸುವುದು ಅವಶ್ಯಕವಾಗಿದೆ ಎಂದು ಇಡಗುಂದಿ ವಲಯಾರಣ್ಯಾಧಿಕಾರಿ ಶಿಲ್ಪ ನಾಯ್ಕ್ ಶಾಲಾ ಮಕ್ಕಳಿಗೆ ವನಮಹೋತ್ಸವದ ಮಹತ್ವ ವಿವರಿಸಿದರು.
ಅವರು ತಾಲೂಕಿನ ಮಾಗೋಡು ಕಾಲೋನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಡಗುಂದಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಿಡ ನೆಟ್ಟು ವನಮಹೋತ್ಸವ ಆಚರಿಸುವುದರೊದಿಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಇಡಗುಂದಿ ಅರಣ್ಯ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿ ಶರಣಬಸು ದೇವರ, ಗ್ರಾಮಾರಣ್ಯ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್, ಎಸ್ ಡಿ ಎಂ ಸಿ ಅಧ್ಯಕ್ಷ ನರಸಿಂಹ ಭಟ್ , ಶಾಲಾ ಮುಖ್ಯೋಪಾಧ್ಯಾಯರಾದ ಶಶಿಕಲಾ ಹೆಗಡೆ, ಸಹ ಶಿಕ್ಷಕರಾದ ಶೈಲಾ ಭಟ್, ವಿನಾಯಕ ಎಸ್ ,ಡಿ ಎಂ ಸಿ ಸದಸ್ಯರು ಪಾಲಕರು, ಪೋಷಕರು ,ಊರಿನ ನಾಗರಿಕರು ವಿದ್ಯಾರ್ಥಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಗಿಡ ನೆಟ್ಟು ಸಂಭ್ರಮಿಸಿದರು.

Prathidvani Yellapura