Breaking News

ಭಕ್ತಿಭಾವದಲ್ಲಿ ಆಚರಣೆಯಾದ ಯಲ್ಲಾಪುರದ ಶ್ರೀರಾಮನವಮಿ

ಕಾಳಮ್ಮನಗರದ ಸಾಯಿನಾಥ ಮಂದಿರದಲ್ಲಿ ಶ್ರೀರಾಮನವಮಿ‌ ಪ್ರಯುಕ್ತ ವಿಶೇಷ ಪೂಜೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ………


ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ವಿವಿದೆಡೆಯಲ್ಲಿ ಶ್ರೀರಾಮನವಮಿ ಅತ್ಯಂತ ಶ್ರದ್ದಾ ಭಕ್ತಿಯಿಂದ ಜರುಗಿತು.
        ಕಾಳಮ್ಮನಗರದ ಸಾಯಿನಾಥ ಮಂದಿರದಲ್ಲಿ ಸಾಯಿನಾಥ ಮಂದಿರದ ಪ್ರಧಾನ ಅರ್ಚಕ ಪ್ರಸಾದ ಭಟ್ಟರ ನೇತೃತ್ವದಲ್ಲಿ  ಸತತ ಆರು ದಿನಗಳಿಂದ ವಿಶೇಷ ಪೂಜಾ ವಿಧಿಗಳು ನಡೆಯಿತು. ಪ್ರತಿನಿತ್ಯ ಸಹಸ್ರಾರು ದೀಪಗಳನ್ನು ಹಚ್ಚಿ ಸಾಯಿನಾಥನನ್ನು ಭಜಿಸಿ ಭಕ್ತರು ಸಂತುಷ್ಟರಾದರು.

ಯಲ್ಲಾಪುರದಲ್ಲಿ ನಡೆದ ಶ್ರೀರಾಮನವಮಿ ವಿಡಿಯೋ ದೃಶ್ಯಾವಳಿ ಪ್ರತಿಧ್ವನಿ ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಿ ಮತ್ತು ಚಾನಲ್ ಗೆ ಸಬ್ ಸ್ಕ್ರೈಬ್ ಆಗಿ
ಸಾಯಿನಾಥನ ಸಾನಿದ್ಯವೆಲ್ಲ ದೀಪಗಳಿಂದ ಅಲಂಕೃತ


         ಪಟ್ಟಣದ ತಿಲಕ್ ಚೌಕ್ ನಲ್ಲಿ ಪ್ರತಿವರ್ಷದಂತೆ ಈ ವರ್ಷವು ಶ್ರೀರಾಮನವಮಿಯನ್ನು ತಿಲಕ್ ಪರಿವಾರ ಮತ್ತು ಬಳಗದ ವತಿಯಿಂದ ಆಚರಿಸಲಾಯಿತು. ಭಕ್ತರಿಗೆ ಪಾನಕ ಪ್ರಸಾದ ವಿತರಿಸಲಾಯಿತು.

ತಿಲಕ್ ಚೌಕ್ ನ ಅರಳಿ ಕಟ್ಟೆಯಲ್ಲಿ ಶ್ರೀರಾಮನವಮಿಯ ಪೂಜಾ ವಿಶೇಷ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *