


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಪಟ್ಟಣದಲ್ಲಿ 20 ಕ್ಕು ಅಧಿಕ ಕಡೆಗಳಲ್ಲಿ ಚೌತಿ ಗಣಪನ ಪ್ರತಿಷ್ಟಾಪನೆಯಾಗಿದೆ.
https://youtu.be/EQW8cvAI1H0?si=tSh0buDDpyF-Z98s
✡️ ದೇಶ ವಿದೇಶದಲ್ಲಿರುವ ಯಲ್ಲಾಪುರದವರಿಗೆ ಕುಳಿತಲ್ಲೆ ತನ್ನೂರಿನ ಗಣಪತಿಗಳ ನೋಡುವ ಸೌಭಾಗ್ಯ
🛑 ಪ್ರತಿಧ್ವನಿ ಯೂಟ್ಯೂಬ್ ಚಾನಲ್ಗೆ ಸಬ್ ಸ್ಕ್ರೈಬ್ ಆಗಿ ಬೆಲ್ ಬಟನ್ ಒತ್ತಿ ಕಮೆಂಟ್ ಮಾಡಿ ಶೇರ್ ಮಾಡಿ.
ಅತ್ಯಂತ ಹಳೆಯ ಸಮಿತಿಗಳಲ್ಲಿ ಒಂದಾದ ತಿಲಕ್ ಚೌಕ್ ನ ಪ್ರತಿಷ್ಠಿತ ಸಾರ್ವಜನಿಕ ಗಜಾನನೋತ್ಸವ ಸಮಿತಿ ಆವಾರದಲ್ಲಿ ಸುಂದರವಾದ ಬಂಗಾರದ ಅರಮನೆಯಲ್ಲಿ ವಿರಾಜಮಾನನಾದ ಗಣಪತಿಯ ಸೌಂದರ್ಯ ನೋಡುಗರನ್ನ ತನ್ನತ್ತ ಸೆಳೆಯುತ್ತಿದೆ. ಅಳಿವಿನಂಚಿಗೆ ತಲುಪದಂತೆ ಹೆಚ್ಚಿನ ಮುತುವರ್ಜಿ ವಹಿಸುತ್ತಿರುವ ಹಾನ್೯ಬಿಲ್ ಮರಿಗಳಿಗೆ ಆಹಾರ ಉಣಿಸುವ ರೀತಿ ಅಲಂಕರಿಸಿರುವ ಅರಣ್ಯ ಇಲಾಖೆಯ ಪರಿಸರ ಸ್ನೇಹಿ ಗಣಪತಿ ಜಾಗೃತಿಯ ಸಂದೇಶ ಸಾರುತ್ತಿರುವುದು ವಿಶೇಷವಾಗಿದೆ. ಕಾಳಮ್ಮ ನಗರದಲ್ಲಿ ಶಿಲ್ಪ ಕಲಾಕೃತಿಗಳ ವೈಭವದೊಳಗೆ ಗಣೇಶನ ನೋಡುವುದೆ ಸ್ವರ್ಗದಂತಿದೆ, ಅಂಬೇಡ್ಕರ್ ಗಲ್ಲಿ ಶ್ವೇತ ಗಣಪ,ಮಂಜುನಾಥ ನಗರದ ಸಿಂಹಾಸನರೂಡ ಗಣಪ, ಹೆಸ್ಕಾಂ ಕಚೇರಿಯ ಕಾಮಧೇನು ಗಣಪ, ತಟಗಾರ ಕ್ರಾಸ್ ಅರಮನೆ ಗಣಪ, ವಿನಾಯಕ ನಗರದ ನಂಧಿ ವಾಹನ ಗಣಪ, ಕಟ್ಟಿಗೆ ಡಿಪೊ,ಬಸ್ ನಿಲ್ದಾಣ, ಪಟ್ಟಣಪಂಚಾಯತ,ನೂತನನಗೆ,ಪೊಲೀಸ್ ವಸತಿಗೃಹ ಸಂಕೀರ್ಣ, ನಾಯ್ಕನಕೆರೆ, ಜಿ.ಪಂ ನಲ್ಲಿ ಶ್ರೀಧರ ಸಂಜೀವ ಕೆರೆಕರ ಬಾಲಕನ ಕೈಲಿ ಅರಳಿದ ಮುದ್ದುಗಣಪ,ಕೊಂಡೆಮನೆ ರಸ್ತೆಯ ಗಣಪ ಇನ್ನು ಹಲವು ಗಣಪತಿಗಳ ನೋಡುವುದೆ ಸೌಭಾಗ್ಯದಂತಿದೆ.
Prathidvani Yellapura