Breaking News

ಯಲ್ಲಾಪುರ ಕ್ಷೇತ್ರ ಚುನಾವಣಾಧಿಕಾರಿ ತುರ್ತು ಸುದ್ದಿಗೋಷ್ಟಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ………….


ಪ್ರತಿಧ್ವನಿ,ಯಲ್ಲಾಪುರ : ಚುನಾವಣಾ ಆಯೋಗ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಿಸಿದ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಿದ್ದು ನ್ಯಾಯಸಮ್ಮತ ಮತದಾನ ಪ್ರಕ್ರಿಯೆಗೆ ಎಲ್ಲಾ ರೀತಿಯ ವ್ಯವಸ್ಥೆ ಗಳನ್ನು ಚುನಾವಣಾ ಆಯೋಗದ ನಿರ್ದೇಶನದಲ್ಲಿ ಕೈಗೊಳ್ಳಲಾಗುತ್ತಿದ್ದು ಯಾವುದೆ ಗೊಂದಲವಿಲ್ಲದೆ ಯಶಸ್ವಿಯಾಗಿ ಚುನಾವಣೆ ನಡೆಸಲು ಸಕಲ ಸಿದ್ದತೆ ಕೈಗೊಳ್ಳಲಾಗುತ್ತಿದೆ ಎಂದು ಕ್ಷೇತ್ರ ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ ಹೇಳಿದರು.
ಅವರು ಪಟ್ಟಣದ ತಹಶಿಲ್ದಾರ್ ಕಚೇರಿಯಲ್ಲಿ ತುರ್ತಾಗಿ ಕರೆಯಲಾದ ಚುನಾವಣೆ ನೀತಿಸಂಹಿತೆ ಕುರಿತ ಮಾಹಿತಿ ನೀಡುವ ಸುದ್ದಿಗೋಷ್ಟಿಯಲ್ಲಿ ಹೇಳಿದರು.


ತಾಲೂಕಿನಲ್ಲಿ 96 ಮತಗಟ್ಟೆಗಳಿದ್ದು ಅವುಗಳಲ್ಲಿ ಗ್ರಾಮೀಣ ಭಾಗದಲ್ಲಿ 78 ಹಾಗೂ 18 ಮತಗಟ್ಟೆಗಳು ನಗರಪ್ರದೇಶದಲ್ಲಿವೆ. 1499 ಯುವ ಮತದಾರರು, 703 ಮಂದಿ ವಿಶೇಷ ಚೇತನ ಮತದಾರರಿದ್ದಾರೆ. 80 ವರ್ಷ ಮೀರಿದ 1388 ಮತದಾರರಿದ್ದು ಚುನಾವಣಾ ಆಯೋಗದ ನೂತನ ನಿರ್ದೇಶನದಂತೆ ಮನೆಯಿಂದಲೇ ಮತ ಚಲಾಯಿಸುವ (ಪೋಸ್ಟಲ್ ವೋಟ್) ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪುರುಷ ಮತದಾರರ ಸಂಖ್ಯೆ 32,795 ಹಾಗೂ 32,669 ಮಹಿಳಾ ಮತದಾರರು ಸೇರಿದಂತೆ ಒಟ್ಟು ತಾಲೂಕಿನಲ್ಲಿ 65,464 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.


ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವಂತಹ ಕಾನೂನು ಬಾಹಿರ ಚಟುವಟಿಕೆಗಳೇನಾದರೂ ಕಂಡು ಬಂದಲ್ಲಿ ಅಥವಾ ಇನ್ನಿತರೆ ಯಾವುದೇ ಮಾಹಿತಿಗಳನ್ನು ನೀಡಬೇಕಾದರೆ ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುವ “ಚುನಾವಣಾ ಸಹಾಯವಾಣಿ” ತೆರೆಯಲಾಗಿದ್ದು 9902571927 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. ಕ್ಷೇತ್ರದಾದ್ಯಂತ ಐದು ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದ್ದು ತಾಲೂಕಿನ ಕಿರವತ್ತಿಯಲ್ಲಿ ತಪಾಸಣಾ ಕೇಂದ್ರವಿದೆ ಎಂದು ತಾಲೂಕು ದಂಡಾಧಿಕಾರಿ ಶಂಕರಪ್ಪ ಹೇಳಿದರು.

ಆತ್ಮೀಯ ಓದುಗರ ಗಮನಕ್ಕೆ
ಪ್ರತಿಧ್ವನಿ ಯಲ್ಲಾಪುರ ನಿಮ್ಮಿಂದ ವಿಶೇಷ ಲೇಖನವನ್ನು ಆಹ್ವಾನಿಸುತ್ತಿದೆ. ಪ್ರಸಕ್ತ ವಿದ್ಯಮಾನಗಳು, ಪ್ರೇಕ್ಷಣೀಯ ಸ್ಥಳಗಳ ಮಾಹಿತಿ, ಇನ್ನಿತರ ಪ್ರಮುಖ ವಿಷಯಗಳ ಕುರಿತು ನೀವು ಬರೆಯಲು ಪ್ರಾರಂಭಿಸಿ ನಿಮ್ಮ ಲೇಖನವನ್ನು ನಮ್ಮ ಪ್ರತಿಧ್ವನಿ ಯಲ್ಲಾಪುರ ವೆಬ್ ನಲ್ಲಿ ಪ್ರಕಟಿಸಲಾಗುವುದು.
>> ನಿಮ್ಮ ಲೇಖನ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತೆ ಮತ್ತು ಜಾಗೃತಗೊಳಿಸುವಂತಿರಬೇಕು.
>>>ಯಾವುದೆ ವ್ಯಕ್ತಿ, ಧರ್ಮ, ಜಾತಿ, ಸಂಘ ಸಂಸ್ಥೆಗಳ ಹಾಗು ರಾಜಕೀಯ ಪಕ್ಷ ಅಥವ ವ್ಯಕ್ತಿಗಳ ಭಾವನೆಗೆ ದಕ್ಕೆಯಾಗುವಂತಿರಬಾರದು.
>>>ಮೊಬೈಲ್ ನಲ್ಲೆ ಟೈಪ್ ಮಾಡಿ ಕಳಿಸಬೇಕು.
>>>ನಿಮ್ಮ ಹೆಸರು, ವಿಳಾಸ, ಮತ್ತು ನಿಮ್ಮ ಭಾವಚಿತ್ರ ಕಡ್ಡಾಯವಾಗಿ ಕಳಿಸಬೇಕು.
>>>ನಿಮ್ಮ ಲೇಖನವನ್ನು ” ಪ್ರತಿಧ್ವನಿ ಯಲ್ಲಾಪುರ ಅತಿಥಿ ಬರಹ” ದ ಅಡಿಯಲ್ಲಿ ಪ್ರಕಟಿಸಲಾಗುವುದು.
>>>ವಿ.ಸೂ<<< ನಿಮ್ಮ ಲೇಖನ ಯಾವಾಗ ಪ್ರಕಟಿಸಬೇಕು ಅಥವ ಬೇಡವೊ ಎಂಬ ನಿರ್ಧಾರ ಪ್ರತಿಧ್ವನಿ ಸಂಪಾದಕರ ಇಚ್ಚೆಯಾಗಿರುತ್ತದೆ.
ಮತ್ತೇಕೆ ತಡ ನೀವು ಬರೆಯಿರಿ
ಈ ವಾಟ್ಸಪ್ ಸಂಖ್ಯೆಗೆ ಕಳುಹಿಸಿ
9113096085, 8088255121

ತ್ವರೆ ಮಾಡಿ ಯಾರಿಗೆ ಗೊತ್ತು ನಿಮ್ಮಲ್ಲೆ ಹೆಸರಾಂತ ಕ್ರಿಕೇಟರ್ ಸಚ್ಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಇರಬಹುದು ಮತ್ತೇಕೆ ತಡ ಈಗಲೆ ನೊಂದಾಯಿಸಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *