


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಬಹು ದೀರ್ಘ ಕಾಲದ ನಂತರ ಯಲ್ಲಾಪುರ ತಾಲೂಕು ವಿಶ್ವ ಹಿಂದೂ ಪರಿಷತ್ ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು ಪ್ರಖರ ಹಿಂದುತ್ವವಾದಿ ತಳ್ಳೀಕೆರೆ ಗಜಾನನ ನಾಯ್ಕ್ ಅಧ್ಯಕ್ಷರಾಗಿ ಮತ್ತು ಉತ್ಸಾಹಿ ಯುವಕ ಗ್ರಾಮದೇವಿ ಕನ್ಸಟ್ರಕ್ಷನ್ ಮಾಲಿಕ ವಿಶಾಲ್ ವಾಳಂಬಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ವಿ.ಹಿಂ.ಪ ಸಂಚಾಲಕ ಗಣಪತಿ ಭಟ್ ಅಧ್ಯಕ್ಷತೆಯಲ್ಲಿ ರಾಜ್ಯ ಉಪಾಧ್ಯಕ್ಷ ಗಂಗಾಧರ ಭಟ್ ಹಾಗು ಜಿಲ್ಲಾಧ್ಯಕ್ಷ ಎಸ್.ಎನ್.ಭಟ್ ಏಕಾನ್, ಜಿಲ್ಲಾ ಉಪಾಧ್ಯಕ್ಷ ಕೇಶವ ಮರಾಠಿ ಉಪಸ್ಥಿತಿಯಲ್ಲಿ ಸದಸ್ಯ ಅನಂತಗಾಂವ್ಕರ್, ಬಜರಂಗದಳ ಸದಸ್ಯರು ಮತ್ತು ದುರ್ಗಾವಾಹಿನಿ ಮಹಿಳಾ ಸದಸ್ಯರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ವಿಶ್ವ ಹಿಂದೂ ಪರಿಷತ್ ಯಲ್ಲಾಪುರ ತಾಲೂಕು ಪದಾಧಿಕಾರಿ ಮಂಡಳಿ ಈ ಕೆಳಗಿನಂತಿದೆ
ತಾಲೂಕು ಅಧ್ಯಕ್ಷ ಗಜಾನನ ನಾಯ್ಕ ತಳ್ಳಿಕೇರಿ ಉಪಾಧ್ಯಕ್ಷ ಗುರು ಭಟ್ಟ ಹಾಸಣಗಿ, ಕಾರ್ಯದರ್ಶಿಯಾಗಿ ವಿಶಾಲ ವಾಳಂಬಿ, ಸಹಕಾರ್ಯದರ್ಶಿ ಕೇಶವ ಗಾಂವ್ಕರ್/ಗಿರೀಶ ಭಾಗ್ವತ್,
ಮಹಿಳಾ ಪ್ರಮುಖರಾಗಿ ವಿನುತಾ ಭಟ್ಟ, ಸಹ ಪ್ರಮುಖರಾಗಿ ವಿದ್ಯಾ ಭಟ್ಟ, ಸತ್ಸಂಗ ಪ್ರಮುಖರಾಗಿ ರಚನಾ ಭಟ್ಟ, ಸರೋಜಾ ಹೆಗಡೆ, ದುರ್ಗಾವಾಹಿನಿ ಪ್ರಮುಖರಾಗಿ ಮಹಾದೇವಿ ಭಟ್ಟ ನಡಿಗೆಮನೆ, ಸಹ ಪ್ರಮುಖರಾಗಿ ದಮಯಂತಿ ಕೌವಡಿಕೇರಿ,
ನಗರ ಘಟಕ ಅಧ್ಯಕ್ಷರಾಗಿ ಅನಂತ ಗಾಂವ್ಕರ್, ಕಾರ್ಯದರ್ಶಿಯಾಗಿ ಅರುಣ ಶೆಟ್ಟಿ, ಸಹ ಕಾರ್ಯದರ್ಶಿಯಾಗಿ ವಿಜು ಆಚಾರಿ, ಪ್ರಭಾಕರ ನಾಯ್ಕ, ಸತ್ಸಂಗ ಪ್ರಮುಖರಗಿ ಕಲ್ಪನಾನಾಯ್ಕ ಕಲ್ಮಠ,
ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾಗಿ ನಾರಾಯಣ ನಾಯಕ, ಕೋಶಾಧ್ಯಕ್ಷರಾಗಿ ನಾಗರಾಜ ಮದ್ಗುಣಿ ಅಯ್ಕೆಯಾಗಿದ್ದಾರೆ.

ಹಿಂದುತ್ವದ ಆಧಾರಿತ ಸಕಲ ಕಾರ್ಯ ಚಟುವಟಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಮಾತೃ ಸ್ಥಾನ ತುಂಬ ಬಲ್ಲ ಬಲವಾದ ಸಂಘಟನೆಯಾಗಿದ್ದು ಇದರ ನೇತೃತ್ವ ವಹಿಸುವುದು ಸಹ ಗೌರವ ಘನತೆಯ ದ್ಯೋತಕವಾಗಿದ್ದು ಭವಿಷ್ಯದ ದಿನಗಳಲ್ಲಿ ಹಿಂದೂ ಧರ್ಮ ಸಂಘಟನೆಯ ಚಟುವಟಿಕೆಗಳು ಮತ್ತಷ್ಟು ಹೆಚ್ಚಲಿ ಎಂದು ವಿವಿಧ ಹಿಂದೂಪರ ಸಂಘಟನೆಗಳು ಪ್ರಮುಖರು ಆಶಿಸಿದ್ದಾರೆ.
Prathidvani Yellapura