
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಯಲ್ಲಾಪುರ : 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸ್ಥಳೀಯ ವಾಯ್.ಟಿ.ಎಸ್.ಎಸ್. ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಕು. ನಚಿಕೇತ ನಾಗಪ್ಪ ಮರಾಠಿ ಈತ 625 ಕ್ಕೆ 623 (99.68%) ಅಂಕ ಗಳಿಸಿ ಶಾಲೆಗೆ ಪ್ರಥಮ, ರಾಜ್ಯಕ್ಕೆ 3ನೇ ಸ್ಥಾನ, ಕು. ಧನ್ಯಾ ನಾರಾಯಣ ಹೆಗಡೆ 625 ಕ್ಕೆ 622 (99.52%) ಅಂಕ ಗಳಿಸಿ ದ್ವಿತೀಯ, ರಾಜ್ಯಕ್ಕೆ 4ನೇ ಸ್ಥಾನ ಕು. ಸಿರಿ ರಾಯನಗೌಡ್ರ 625 ಕ್ಕೆ 610 (97.6%) ಗಳಿಸಿ ಶಾಲೆಗೆ ತೃತೀಯ ಸ್ಥಾನ ಪಡೆದಿರುತ್ತಾರೆ.

ಕು. ಮಹಮ್ಮದ ಸಾಧಿಕ್ ರಿತ್ತಿ 603(96.48%), ಪ್ರೀತಮ್ ಬಸಪ್ಪ ಉಗ್ನಿಕೇರಿ 602 (96.32%), ಸೋನಲ್ ಸಂತೋಷ ಜಾಧವ 600 (96%), ಶಶಾಂಕ್ ದತ್ತಾತ್ರೇಯ ಭಟ್ಟ 597 (95.52%), ಸಿದ್ಧಾರ್ಥ ಪ್ರಶಾಂತ ಜಾಧವ 597(95.52%), ಕು. ಅಂಕಿತ ರಾಜಕುಮಾರ ಹೊಸಮನಿ 594 (95.04%) ಪಡೆದು ಪರೀಕ್ಷೆಗೆ ಕುಳಿತ 46 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಬೋಧಕ ಭೋದಕೇತರ ಸಿಬ್ಬಂದಿಗಳಿಗೆ. ವಿದ್ಯಾರ್ಥಿಗಳಿಗೆ ಅವರ ಪೋಷಕರಿಗೆ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಅಧಕ್ಷ,ಉಪಾಧ್ಯಕ್ಷ, ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ.




Prathidvani Yellapura