Breaking News

ಸರ್ಕಾರಿ ಅಧಿಕಾರಿಯ  ಸಾರ್ಥಕ ಕಾರ್ಯ- ಕಚೇರಿ ಎದುರಲ್ಲೆ ಪ್ರಾಣಿ ಪಕ್ಷಿಗಳಿಗೆ ನೀರು ಪೂರೈಕೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಜಿಲ್ಲಾ ಪಂಚಾಯತ ಇಂಜಿನಿಯರಿಂಗ್ ಉಪವಿಭಾಗ ಕಚೇರಿ ಎದುರಿನಲ್ಲಿ ಕೇಸರಿ,ಬಿಳಿ,ಹಸಿರು ಬಣ್ಣದ ವೃತ್ತಾಕಾರದ ತೊಟ್ಟಿ ಇಟ್ಟು ನೀರು ತುಂಬಿಸಲಾಗಿದೆ.

ಬಾಯಾರಿದ ಹಸು ಒಂದು ನೀರು ಕುಡಿದು ಧನ್ಯತೆ ಸಲ್ಲಿಸಿತೇನೊ ಎಂಬ ಭಾವ


      ದಿನೇ ದಿನೇ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು ಮನುಷ್ಯರಾದ ನಾವೆ ನಲುಗಿ ಹೋಗುತ್ತಿರುವಾಗ ಮೂಕ ಪ್ರಾಣಿ ಪಕ್ಷಿಗಳ ಪಾಡೇನು. ಈ ಪರಿಸ್ಥಿತಿ ಮನಗಂಡು ಜಿ.ಪಂ.ಇಂ.ಉ.ವಿ ಸಹಾಯಕ ಕಾರ್ಯಪಾಲಕ ಇಂಜನಿಯರ್ ಅಶೋಕ್ ಬಂಟ್  ತಮ್ಮ ಕಚೇರಿ ಮುಂಬಾಗದಲ್ಲಿ ಸಿಮೆಂಟ್ ತೊಟ್ಟಿಯೊಂದನ್ನು ನಿರ್ಮಿಸಿ ಪ್ರತಿನಿತ್ಯ ನೀರುತುಂಬಿಸುವ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಹಲವಾರು ಹಸು,ಕರು,ಎಮ್ಮೆಪಕ್ಷಿಗಳು ದಾಹತಣಿಸಿಕೊಳ್ಳುತ್ತಿವೆ.

     ಅಶೋಕ್ ಬಂಟ್ ಆಧ್ಯಾತ್ಮ ಮತ್ತು ಸಮಾಜಸೇವೆಯ ತುಡಿತ ಉಳ್ಳವರಾಗಿದ್ದಾರೆ. ಇವರಿಂದ ಇತರ ಇಲಾಖೆಗಳು ಮತ್ತು ಅಧಿಕಾರಿಗಳು  ಮನಸ್ಸು ಮಾಡಿ ತಮ್ಮತಮ್ಮ ಇಲಾಖೆ ಆವರಣದಲ್ಲಿ ಇಂತಹದ್ದೊಂದು ನೀರಿನ ವ್ಯವಸ್ಥೆ ಕಲ್ಪಿಸಿದರೆ ಮೂಕಪ್ರಾಣಿ ಮತ್ತು ಪಕ್ಷಿಗಳಿಗೆ ದಾಹ ನೀಗಿಸಿದ ಪುಣ್ಯ ಲಭಿಸಲಿದೆ ಎಂಬುದು ಪ್ರಾಣಿಪ್ರಿಯರ ಅನಿಸಿಕೆಯಾಗಿದೆ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *