
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ನೂತನ ನಗರ ಜಡ್ಡಿಯಲ್ಲಿ ಮನೆಯೊಂದಕ್ಕೆ ಬೆಂಕಿ ತಗುಲಿ ಹಲವು ವಸ್ತುಗಳು ಬೆಂಕಿಗಾಹುತಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.

ನಿವೃತ್ತ ಶಿಕ್ಷಕ ವಾದಿರಾಜ್ ನಾಗೇಶ್ ಕುರುಡೇಕರ್ ಎಂಬುವರಿಗೆ ಸೇರಿದ ಹಂಚಿನ ಮನೆ ಇದಾಗಿದ್ದು ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಘಟನೆ ನಡೆದಿದೆ. ಶನಿವಾರ ರಾತ್ರಿ ವೇಳೆ ಮನೆಯೊಳಗಿನಿಂದ ಹೊಗೆಬರಲು ಪ್ರಾರಂಭಿಸಿದ್ದು ಅಕ್ಕಪಕ್ಕದ ಮನೆಯವರಿಗೆ ಅನುಮಾನ ಬರಲು ಪ್ರಾರಂಭವಾಗಿದೆ. ನಂತರ ಹೊಗೆಯ ಪ್ರಮಾಣ ಹೆಚ್ಚಾಗಿ ಮನೆಯ ಹೊರ ಭಾಗಕ್ಕೆ ದಟ್ಟವಾದ ಹೊಗೆ ಕಾಣಿಸಿದಾಕ್ಷಣ ಮನೆಯೊಳಗೆ ಬೆಂಕಿ ಬಿದ್ದರುವುದು ಖಾತ್ರಿಯಾಗಿದೆ. ಆ ಕ್ಷಣಕ್ಕೆ ಏನು ತೋಚದೆ ಬಾಗಿಲನ್ನು ಒಡೆದು ಒಳ ನುಗ್ಗಿ ಆವರಿಸುತ್ತಿದ್ದ ಬೆಂಕಿಯನ್ನು ತಗ್ಗಿಸಲು ಸ್ಥಳೀಯ ಯುವಕರೆ ನೀರೆರಚಿ ತಣ್ಣಗಾಗಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರ ಕಾರ್ಯಾಚರಣೆಯಿಂದ ಸಂಪೂರ್ಣ ಬೆಂಕಿ ನಂದಿದ್ದು ಸಾಕಷ್ಟು ಗೃಹಬಳಕೆಯ ವಸ್ತುಗಳು ಬೆಂಕಿಗಾಹುತಿಯಾಗಿದೆ.

ಸ್ಥಳೀಯ ಯುವಕರು ಅಕ್ಕಪಕ್ಕದ ಮನೆಯವರ ಸಮಯ ಪ್ರಜ್ಞೆಯಿಂದ ಬೆಂಕಿಯಿಂದಾಗಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಮನೆಗೆ ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂದು ನಿಖರವಾಗಿ ತಿಳಿಯದಿದ್ದರು ಯಲ್ಲಾಪುರ ಪೊಲೀಸರು, ಹೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಕಿಡಿಗೇಡಿಗಳ ಕೃತ್ಯವೋ ? ವಿದ್ಯುತ್ ಶಾಟ್೯ ಸರ್ಕ್ಯೂಟ್ ಕಾರಣವೋ ,? ತಿಳಿಯಬೇಕಿದೆ.
ಮನೆಯಲ್ಲಿ ತುಂಬಿದ್ದ ಗ್ಯಾಸ್ ಸಿಲಿಂಡರ್ ಗಳಿದ್ದು ಬೆಂಕಿ ಇನ್ನಷ್ಟು ಆವರಿಸಿದ್ದರೆ ಬಾರಿ ಅವಘಡ ಸಂಭವಿಸುವ ಸಾದ್ಯತೆ ಇತ್ತು. ಬೆಂಕಿ ನಂದಿಸುವಲ್ಲಿ ಶ್ರಮಿಸಿದ ಸ್ಥಳೀಯ ವಾಡ್೯ ಸದಸ್ಯ ಅಲಿ ಮತ್ತು ಸ್ಥಳೀಯರು ಹಾಗು ಅಗ್ನಿಶಾಮಕ ದಳದವರಿಗೆ ಜನತೆ ಕೃತಜ್ಞತೆ ಸಲ್ಲಿಸಿದ್ದಾರೆ.
Prathidvani Yellapura