
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಸಾರಥ್ಯದಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ – ತಾಲ್ಲೂಕಿನ ಕಿರವತ್ತಿ ಸೊಸೈಟಿ ಚುನಾವಣೆ ದಿನಾಂಕ2 ರಂದು ನಡೆದಿದ್ದು ಸೊಸೈಟಿಯ12 ಸದಸ್ಯರು ಅವಿರೋಧ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಗೆಲುವಿನ ದಂಡಯಾತ್ರೆ ಮುಂದುವರೆಸಿದೆ

ರಾಜ್ಯದಲ್ಲಿ ಇತ್ತೀಚೆಗೆ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದ್ದು ಶುಭ ಶಕುನವೆಂಬಂತೆ ಯಲ್ಲಾಪುರ ಪಟ್ಟಣ ಪಂಚಾಯತ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದು ಇದೀಗ ಕಿರವತ್ತಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘ ನಿಯಮಿತ,
ಸೊಸೈಟಿ ಚುನಾವಣೆಯಲ್ಲಿಯು ಕಾಂಗ್ರೆಸ್ ಮೇಲುಗೈ ಸಾಧಿಸಿ 12 ಕಾಂಗ್ರೆಸ್ ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.
ಸಂಜಯ್ ವಿಠ್ಠಲ ಮಿರಾಶಿ, ಮುಬಾರಕ್ ಅಬ್ಬಿಗೆರೆ, ಹರುನ್ ಇಸ್ಮಾಯಿಲ್ ಶೇಖ್, ಪರಶುರಾಮ ಮಹದೇವ ಹರಿಜನ್, ಗಣಪತಿ ರಾಮ ಶಿರನಾಲ್ಕರ್, ನಾವು ಲಕ್ಕು ಪಟಕಾರೆ, ಮಹದೇವಿ ನಾಗೇಂದ್ರ ಮರಾಠಿ, ಹನುಮಂತ ಲಕ್ಷ್ಮಪ್ಪ ಸೋಮಾಪುರಕರ, ಫಾತೀಮ ಮೆಹಬೂಬ್ ಸಾಬ್ ಕಿರವತ್ತಿ, ಆಶಾ ಬಿ ಇಮಾಮ್ ಸಾಬ್ ತಟ್ಟೀಗೇರಿ, ಜಾಫರ್ ಹುಸೇನ್ ಸಾಬ್ ಒಂಟಿ ಹಾಗು ನೂರ್ ಅಹ್ಮದ್ ಸೈಯ್ಯದ್ ಅವಿರೋಧವಾಗಿ ಆಯ್ಕೆಯಾದ ಸದಸ್ಯರಾಗಿದ್ದಾರೆ.

ಭವಿಷ್ಯದಲ್ಲಿ ಕಿರವತ್ತಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘ ನಿಯಮಿತ, ಸೊಸೈಟಿ ಯಶಸ್ಸಿನ ಉತ್ತುಂಗಕ್ಕೆ ಏರಲಿ ಹಾಗು ಅವಿರೋಧ ಆಯ್ಕೆಯಾದ ಸದಸ್ಯರಿಗೆ ಯಲ್ಲಾಪುರ- ಮುಂಡಗೋಡು ವಿಧಾನಸಭೆ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್, ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ಸ್ಥಳೀಯ ಮುಖಂಡ ವಿಜಯ್ ಮಿರಾಶಿ ಮತ್ತು ಮುರಳಿ ಹೆಗಡೆ, ರಹಮತ್ ಅಬ್ಬಿಗೆರೆ, ರಾಘವೇಂದ್ರ ಗೊಂದಿ, ಬಾಬು ಸಿದ್ದಿ, ವಿಲ್ಸನ್ ಫರ್ನಾಂಡೀಸ್, ಮಹೇಶ್ ಗೋಕರ್ಣ, ಬಾಬಾ ಶೇಖ್, ಹಾಗು ನೂರ್ ಅಹ್ಮದ್ ಶೇಖ್ ಅವರು ಅಭಿನಂಧಿಸಿದ್ದಾರೆ.
Prathidvani Yellapura