
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಆರೋಗ್ಯ ದೇವಾಲಯ ಎಂಬ ಖ್ಯಾತಿ ಪಡೆದ ಸರ್ಕಾರಿ ಆಸ್ಪತ್ರೆಯ ಜನತಾಜನಾರ್ಧನನ ಸೇವೆಗೆ ಹೊಸತೊಂದು ಸೇವೆ ಸೇರ್ಪಡೆಯಾಗುವ ಕಾಲ ಸನ್ಹಿತವಾಗಿದೆ.
ಕೊರೊನ ನಂತರದಲ್ಲಿ ಆರೋಗ್ಯ ಕ್ಷೇತ್ರದ ಮಹತ್ವ ಕಟ್ಟ ಕಡೆಯ ವ್ಯಕ್ತಿಯಿಂದ ಹಿಡಿದು ಪ್ರದಾನಿವರೆಗು ಅರಿವಾಯಿತು.

ಈ ಹಿನ್ನೆಲೆಯಲ್ಲಿ ಆಗಿನ ಶಾಸಕರಾಗಿ ಸಚಿವರಾಗಿ ಅಧಿಕಾರದಲ್ಲಿದ್ದ ಈ ಗಿನ ಶಾಸಕ ಅರಬೈಲ್ ಶಿವರಾಮ ಹೆಬ್ಬಾರ್ ಆರೋಗ್ಯ ಕ್ಷೇತ್ರಕ್ಕೆ ಅಮೂಲಾಗ್ರ ಬದಲಾವಣೆ ತಂದರು. ಆ ಕಾರಣದಿಂದ ಯಲ್ಲಾಪುರ ಸರ್ಕಾರಿ ಆಸ್ಪತ್ರೆ ಸಾಮಾನ್ಯರ ಬಡವರ ಪಾಲಿನ ಆರೋಗ್ಯದೇಗುಲವೆಂದೇ ಖ್ಯಾತಿ ಪಡೆಯಿತು. ಡಯಾಲಿಸೀಸ್, ಸ್ಕ್ಯಾನಿಂಗ್, ಎಕ್ಸ್-ರೇ, ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ ಹಲವು ಸೇವೆಗಳು ಸರ್ಕಾರದಿಂದ, ಸಾರ್ವಜನಿಕ ಸಹಭಾಗಿತ್ವದಿಂದ ಪ್ರಾರಂಭವಾಯಿತು.


ಇದೀಗ ಮತ್ತೊಂದು ಸೇವೆ ಸೇರ್ಪಡೆ ಆಗುತ್ತಿದ್ದು ಯಲ್ಲಾಪುರ ತಾಲೂಕು ಸರ್ಕಾರಿ ಆಸ್ಪತ್ರೆ ಮತ್ತಷ್ಟು ಉನ್ನತ ಸ್ಥಾನಕ್ಕೇರುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐತಿಹಾಸಿಕ ಹೆಜ್ಜೆ ಇಟ್ಟು ” ಪುನಿತ್ ಹೃದಯ ಜ್ಯೋತಿ ” ಹೆಸರಿನ ಯೋಜನೆ ಶೀಘ್ರವಾಗಿ ಚಾಲನೆ ನೀಡಲಿದೆ
ಸಂತಸದ ವಿಚಾರವೆಂದರೆ 85 ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆ ಗಳಲ್ಲಿ ಅನುಷ್ಟಾನಕ್ಕೆ ಬರುತ್ತಿರುವ ಈ ಯೋಜನೆ ಉತ್ತರ ಕನ್ನಡ ಜಿಲ್ಲೆಯ ಎರಡು ಆಸ್ಪತ್ರೆಗೆ ಅವಕಾಶ ಸಿಕ್ಕಿದೆ ಅದರಲ್ಲಿ ಯಲ್ಲಾಪುರ ತಾಲೂಕು ಸರ್ಕಾರಿ ಆಸ್ಪತ್ರೆ ಸೇರಿರುವುದು ಈ ತಾಲೂಕಿನ ಮತ್ತು ಸುತ್ತಮುತ್ತಲಿನ ತಾಲೂಕಿನ ಎಲ್ಲಾ ವರ್ಗದ ಜನರ ಭಾಗ್ಯದ ಬಾಗಿಲು ತೆರೆದಂತಾಗಿದೆ.
ಪ್ರಯೋಜನವೇನು…???
ಒಂದುವೇಳೆ ಹೃದಯಕ್ಕೆ ಸಂಬಂಧಿಸಿದ ನೋವು ಕಂಡು ಬಂದಲ್ಲಿ ತಕ್ಷಣವೇ ಚಿಕಿತ್ಸೆ ನೀಡುವುದು ಅನಿವಾರ್ಯವಾಗಲಿದೆ. ಇಂತಹ ಗೋಲ್ಡನ್ ಅವರ್ ನಲ್ಲಿ ರೋಗಿಯು ಯಾವ ಸ್ಥಿತಿಯಲಿದ್ದಾನೆ ಎಂದು ತಿಳಿಯುವ ಅತ್ಯಾಧುನಿಕ ಯಂತ್ರ ಮತ್ತು ಮತ್ತಷ್ಟು ಕ್ಲಿಷ್ಟಕರ ಸನ್ನಿವೇಶಕ್ಕೆ ತಲುಪದಂತೆ ಚಿಕಿತ್ಸೆ ನೀಡುವುದು ಇದರೊಂದಿಗೆ “ಟೆನೆಸ್ಟೆಪ್ಲೇಸ್” ಎಂಬ ದುಬಾರಿ ಚುಚ್ಚುಮದ್ದು ನೀಡಲಾಗುವುದು ಈ ಚುಚ್ಚುಮದ್ದು ಖಾಸಗಿ ಆಸ್ಪತ್ರೆಗಳಲ್ಲಿ 30 ರಿಂದ 45 ಸಾವಿರ ಆಗಲಿದೆ.
ನಂತರ ಹತ್ತಿರದ ಹಬ್ ಆಗಿರುವ ಧಾರವಾಡದ ಎಸ್.ಡಿ.ಎಂ ನಾರಾಯಣ ಹಾಟ್೯ ಸೆಂಟರ್, ಕಿಮ್ಸ್ ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯಲಿದೆ.
ಇಂತಹ ಮಹತ್ತರವಾದ ಯೋಜನೆವ್ಯಾಪ್ತಿಗೆ ಯಲ್ಲಾಪುರ ತಾಲೂಕು ಸರ್ಕಾರಿ ಆಸ್ಪತ್ರೆ ಸೇರಿರುವುದು ಬಡ ಮದ್ಯಮ ವರ್ಗದವರಲ್ಲಿ ಧೈರ್ಯ ಬಂದಂತಾಗಿದೆ. ಎಲ್ಲಾ ವಿಚಾರಗಳಲ್ಲಿ ನಿರ್ಲಕ್ಷ್ಯ ವಾಗುತ್ತಿದ್ದ ಯಲ್ಲಾಪುರ ತಾಲೂಕಿಗೆ ಜೀವ ಸಂಜೀವಿನಿಯಾಗಿ ಪುನಿತ್ ಹೃದಯ ಜ್ಯೋತಿ ಯೋಜನೆ ತರುತ್ತಿರುವುದು ನಿರ್ಲಕ್ಷ್ಯ ಅನ್ನುವ ಅನಿಸಿಕೆಯಿಂದ ದೂರಾಗುತ್ತಿರುವ ಲಕ್ಷಣ ಗೋಚರಿಸುತ್ತಿದೆ.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರ ಪ್ರಯತ್ದದ ಫಲವಾಗಿ ತಾಲೂಕು ಸರ್ಕಾರಿ ಆಸ್ಪತ್ರೆ ಸಕಲ ಸೌಕರ್ಯ ಹೊಂದುತ್ತಿದ್ದು ಇದೀಗ ಸಿದ್ದರಾಮಯ್ಯ ನೇತೃತ್ವದ ರಾಜ್ಯಸರ್ಕಾರದ ಅಡಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾರ್ಗದರ್ಶನದಲ್ಲಿ ” ಪುನಿತ್ ಹೃದಯ ಜ್ಯೋತಿ ” ಯೋಜನೆಗೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆ ಆಯ್ಕೆ ಮಾಡಿರುವುದಕ್ಕೆ ಸಂತಸವಾಗಿದೆ. ಪಕ್ಷ ಯಾವುದಾದರೇನು ಜನರ ತೆರಿಗೆ ಹಣ ಜನಪರ ಕಾರ್ಯಗಳಿಗೆ ಬಳಕೆಯಾದರೆ ಅಂತಹ ಕಾರ್ಯ ಅಭಿನಂದನಾರ್ಹ ವಿಷಯವಾಗಿದೆ. ರಾಜ್ಯ ಸರ್ಕಾರನವನ್ನು ಅಭಿನಂದಿಸುತ್ತೇನೆ. ವಿಜಯ್ ಮಿರಾಶಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮಾಜಿ ಸದಸ್ಯ

” ಪುನಿತ್ ಹೃದಯ ಜ್ಯೋತಿ ” ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಇನ್ನಷ್ಟೆ ಲಭಿಸಬೇಕಿದೆ. ಒಟ್ಟಿನಲ್ಲಿ ಒಂದು ಉತ್ತಮ ಸೇವೆ ಜನತೆಗೆ ದೊರೆಯುತ್ತಿದ್ದು ನಮ್ಮ ಆಸ್ಪತ್ರೆಗೆ ಯೋಜನೆ ಬಂದಿರುವುದು ಮತ್ತಷ್ಟು ಬಲ ಬಂದಂತಾಗಿದೆ. ಮೇಲ್ನೋಟಕ್ಕೆ ತಿಳಿದಿರುವಂತೆ ದಾರವಾಡ ಹಬ್ ನಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಗಳೊಂದಿಗೆ ಸಂಪರ್ಕದಲ್ಲಿದ್ದು ಟೆಲಿ ಕಾನ್ಫರೆನ್ಸ್ ಮೂಲಕ ಹೃದಯಕ್ಕೆ ಸಂಬಂದಿಸಿದ ಚಿಕಿತ್ಸೆ
ನೀಡಬಹುದಾಗಿದೆ ಇದಲ್ಲದೆ ದುಬಾರಿ ಚುಚ್ಚುಮದ್ದು ಸಹ ಉಚಿವಾಗಿ ದೊರೆಯಲಿದೆ. ಡಾ,ನರೇಂದ್ರ ಪವಾರ್, ತಾಲೂಕು ಆರೋಗ್ಯಾಧಿಕಾರಿ ಮತ್ತು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ. ಯಲ್ಲಾಪುರ

ಶಾಸಕ ಶಿವರಾಮ ಹೆಬ್ಬಾರ್ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತ ಬಂದವರು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯನ್ನು ಜಿಲ್ಲೆಯಲ್ಲಿಯೆ ಮಾದರಿ ಆಸ್ಪತ್ರೆ ಮಾಡುತ್ತಾ ಸಾಗಿದ್ದಾರೆ ಈ ಮದ್ಯೆ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಹೃದಯ ಸೇವೆಗೆ ಯಲ್ಲಾಪುರ ಆಸ್ಪತ್ರೆ ಆಯ್ಕೆ ಮಾಡಿರುವುದು ಘಟ್ಟದ ಮೇಲಿನ ತಾಲೂಕಿಗೆ ಸಂದ ನ್ಯಾಯವಾಗಿದೆ. ಸುನಂದದಾಸ್ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ

ಯಲ್ಲಾಪುರ ಸರ್ಕಾರಿ ಆಸ್ಪತ್ರೆ ಬಡವರ ಪಾಲಿನ ಆಶಾಕಿರಣ ಅಗಲಿದ ನಟ ಪುನಿತ್ ರಾಜ್ ಕುಮಾರ್ ಹೆಸರಿನ ಹೃದಯ ಜ್ಯೋತಿ ಅನುಷ್ಠಾನಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಉದ್ದೇಶಕ್ಕೆ ನನ್ನ ಅಭಿನಂದನೆಗಳು. ಬಡವರು ದುರ್ಬಲರು ತಮ್ಮ ಆರೋಗ್ಯದ ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಸವಲತ್ತು ನೀಸಿ ಗಟ್ಟಿಗೊಳಿಸುತ್ತಿದೆ ಇಂತಹ ಜನಪರ ಯೋಜನೆಗಳನ್ನು ಯಾವುದೆ ಸರ್ಕಾರಗಳಾಡಿದರು ಅಭಿನಂದನೆಗೆ ಅರ್ಹರು. ಸತೀಶ್ ಶಿವಾನಂದ ನಾಯ್ಕ್, ಪಟ್ಟಣ ಪಂಚಾಯತ ಸದಸ್ಯರು
Prathidvani Yellapura