
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭಾರತ ಸರ್ಕಾರ ನವದೆಹಲಿ. ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಪರಿಷತ್ತು ಹಾಗೂ ವಿಕಾಸನ ಕೇಂದ್ರ ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಾರ್ಯಾಲಯ ಶಿರಸಿ ಶೈಕ್ಷಣಿಕ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಯಲ್ಲಾಪುರ ಮುಂಡಗೋಡ ಹಳಿಯಾಳ ಜೋಯಿಡಾ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಹೋಲಿ ರೋಜರಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ಬಳಗ ಯಲ್ಲಾಪುರ ಹಮ್ಮಿಕೊಂಡಿರುವ ವಿಜ್ಞಾನ ಶಿಕ್ಷಕರಿಗಾಗಿ ಕಡಿಮೆ ವೆಚ್ಚದ ಶಿಕ್ಷಣ ಪರಿಕರಗಳ ತಯಾರಿಕೆ ಮೂಲಕ ವಿಜ್ಞಾನ ಸಂವಹನ ಮೂರು ದಿನದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.

ನಾಲ್ಕು ತಾಲೂಕುಗಳ ಒಟ್ಟು 80 ಶಿಕ್ಷಕರು ಈ ಕಾರ್ಯಗಾರದ ಪ್ರಯೋಜನ ಪಡೆದಿದ್ದು 30 ಕ್ಕು ಹೆಚ್ಚು ಮಾದರಿಗಳನ್ನು ಶಿಕ್ಷಕರೆ ತಮ್ಮ ಕೈಯಲ್ಲಿ ತಯಾರಿಸಿ ಸೈ ಎನಿಸಿಕೊಂಡಿದ್ದಾರೆ.

. ರಾಘವೇಂದ್ರ ಮಿಸಾಳೆ ಶಿಕ್ಷಕರಿಗೆ ಸರಳವಾಗಿ ಪಾಠೋಪಕರಣಗಳು ಮತ್ತು ಮಾದರಿಗಳನ್ನು ತಯಾರಿಸುವ ಕಾರ್ಯಕಾರವನ್ನ ನಡೆಸಿಕೊಟ್ಟರು. ಹೋಲಿರೋಜರಿ ಶಿಕ್ಷಕ ವಿಜ್ಞಾನ ಪ್ರೇಮಿ ರಾಜಶೇಖರ್ ನೇತೃತ್ವದಲ್ಲಿ ಯಲ್ಲಾಪುರ ವಿಜ್ಞಾನ ಬಳಗದ ಸದಸ್ಯರು ಕಾರ್ಯಕ್ರಮದಲ್ಲಿ ಸಂಘಟಕರಾಗಿ ಕಾರ್ಯನಿರ್ವಹಿಸಿದರು.


ಆತ್ಮೀಯರೆ
ಜನವರಿ 22 ರಂದು ಭವ್ಯ ಭಾರತದ ಸ್ವರ್ಣದಿನ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಮಂದಿರ ಲೋಕಾರ್ಪಣೆ. ಈ ಪುಣ್ಯದಿನವನ್ನು ಭವಿಷ್ಯದಲ್ಲಿ ಮತ್ತಷ್ಟು ನೆನಪಾಗುವಂತೆ ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಉಳಿಸಲು *” ಪ್ರತಿಧ್ವನಿ ಯಲ್ಲಾಪುರ ” ಶ್ರೀ ರಾಮೋತ್ಸವ ಹೆಸರಿನಲ್ಲಿ ರಾಮಯಣದ ಪಾತ್ರಗಳನ್ನು ವೇದಿಕೆಯ ಮೇಲೆ ಒಟ್ಟಿಗೆ ತಂದು ಸನಾತನ ಸಂಸ್ಕೃತಿಯ ವೈಭವ ಕಾಣುವ ವ್ಯವಸ್ಥೆ ಮಾಡುವ ಪ್ರಯತ್ನ ಮಾಡಲಾಗುತ್ತಿದ್ದು ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹ ಇರಲೆಂದು ಆಶಿಸುತ್ತೇನೆ. ಭರತ ಖಂಡವೆ ಹೆಮ್ಮೆಯಿಂದ ಸಂಭ್ರಮಿಸುವ ಪ್ರಭು ಶ್ರೀರಾಮನ ಮಂದಿರ ಅಯೋಧ್ಯೆಯಲ್ಲಿ ಜನವರಿ ,22 ರಂದು ಲೋಕಾರ್ಪಣೆ ಮಾಡುತ್ತಿದ್ದು ಈ ದಿನವನ್ನು ಅವಿಸ್ಮರಣೀಯವಾಗಿಸಲು *ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ಮತ್ತು ಯೂಟ್ಯೂಬ್ ಚಾನಲ್* ಆಯೋಜನೆಯಲ್ಲಿ ತಾಲೂಕು ಮಟ್ಟದ ಛದ್ಮ ವೇಷ ಸ್ಪರ್ಧೆ ಆಯೋಜಿಸುತ್ತಿದೆ. ನಿಯಮಗಳನುಸಾರ ಸ್ಪರ್ಧೆಯಲ್ಲಿ ಭಾಗವಹಿಸಿ ನಗದು ಹಾಗು ವಿಶೇಷ ಬಹುಮಾನ ನಿಮ್ಮದಾಗಿಸಿಕೊಳ್ಳಿ.
ಸ್ಪರ್ಧೆ ವಿವರ
- ರಾಮಾಯಣಕ್ಕೆ ಸಂಭಂದಿಸಿದ ಪಾತ್ರಗಳನ್ನು ಮಾತ್ರ ವೇಷವಾಗಿ ಬಳಸಬೇಕು.
- ಸ್ಪರ್ಧಾಳು ಕಡ್ಡಾಯವಾಗಿ ಯಲ್ಲಾಪುರ ತಾಲೂಕಿನವರಾಗಿರಬೇಕು.
- ಸ್ಪರ್ಧೆಯಲ್ಲಿ ಪ್ರಾಪರ್ಟೀಸ್ ಬಳಸಬಹುದು
- ಸ್ಪರ್ಧಾಳುವಿನ ವಯಸ್ಸು 5 ರಿಂದ15 ವರ್ಷದೊಳಗಿನವರಾಗಿರಬೇಕು.
- ಸ್ಪರ್ಧಿಯ ಭಾವಚಿತ್ರ, ಮಾಡುವ ಪಾತ್ರದ ವೇಷ ಧರಿಸಿದ ಭಾವಚಿತ್ರ, ಪೂರ್ಣ ವಿಳಾಸ ಮತ್ತು ಫೋಟೋ ಅನ್ನು ಕೆಳಗೆ ನಮೂದಿಸಿದ ದೂರವಾಣಿ ಸಂಖ್ಯೆಗೆ ವಾಟ್ಸಪ್ ಮೂಲಕ ದಿನಾಂಕ 11-01-2024 ರ ಒಳಗಾಗಿ ಕಳುಹಿಸಬೇಕು.
- ಆಯ್ಕೆಯಾದವರಿಗೆ 15-01-2024 ರಂದು ತಿಳಿಸಲಾಗುವುದು
- 22-01-2024 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಂದು ಆಯ್ಕೆಯಾದ ಸ್ಪರ್ಧಿಗಳಿಗೆ ವೇದಿಕೆಯಲ್ಲಿ ಸ್ಪರ್ಧೆ ಏರ್ಪಡಿಸಲಾಗುವುದು.
- ಪ್ರಥಮ ಬಹುಮಾನ – 5555
ದ್ವಿತೀಯ ಬಹುಮಾನ – 3333
ತೃತೀಯ ಬಹುಮಾನ - 2222
ಚತುರ್ಥ ಬಹುಮಾನ – 1111
ಪಂಚಮ ಬಹುಮಾನ – 555
ವೇದಿಕೆಯ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ನೆನಪಿನ ಕಾಣಿಕೆ ನೀಡಲಾಗುವುದು - ಸ್ಪರ್ಧಿಗಳು ವೇಷಭೂಷಣ ಪ್ರಾಪರ್ಟಿ ಅಥವ ಅಲಂಕಾರಕ್ಕೆ ಅವರೆ ವ್ಯವಸ್ಥೆ ಮಾಡಿಕೊಳ್ಳಬೇಕು.
- ಪ್ರವೇಶ ಶುಲ್ಕ 200/- ( ಎರಡು ನೂರು ರೂಪಾಯಿಗಳು )
- ವೇದಿಕೆ ಸ್ಪರ್ಧೆಗೆ ಆಯ್ಕೆಯಾದವರು ಮಾತ್ರ ಪ್ರವೇಶ ಶುಲ್ಕ ಭರಿಸ ತಕ್ಕದ್ದು
- ವೇದಿಕೆ ಸ್ಪರ್ಧೆ ಸಮಯ ಸ್ಥಳ ಸ್ಪರ್ಧೆ ನಿಯಮಗಳನ್ನು ಮುಂದೇ ತಿಳಿಸಲಾಗುವುದು.
ಮತ್ತೇಕೆ ತಡ ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ
ಯಲ್ಲಾಪುರದಲ್ಲಿ ರಾಮಾಯಣ ಪಾತ್ರಗಳ ದರ್ಶನ
ಬನ್ನಿ ಸನಾತನ ಸಂಸ್ಕೃತಿಯನ್ನು ಸಂಭ್ರಮಿಸೋಣ.
ಹಿಂದು ಸನಾತನ ಸಂಸ್ಕೃತಿಗೆ ನನ್ನದೊಂದು ನಮನವಿರಲಿ
ಧನ್ಯವಾದಗಳು
ಶ್ಯಾಮಲಾ ನಾಗೇಶ್
ಪ್ರದಾನ ಸಂಪಾದಕಿ
ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್
ಯಲ್ಲಾಪುರ
ನಿಮ್ಮ ಹೆಸರು ನೊಂದಾಯಿಸಿ ಭಾವಚಿತ್ರ ಕಳಿಸಲು ವಾಟ್ಸಪ್ ಸಂಖ್ಯೆ
9113096085 – ಕೇಬಲ್ ನಾಗೇಶ್
🚩 ” ಶ್ರೀರಾಮ ಜಯ ರಾಮ ಜಯ ಜಯ ರಾಮ “ 🚩
Prathidvani Yellapura