
ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಪ್ರತಿಷ್ಟಿತ ವಿದ್ಯಾಸಂಸ್ಥೆ ಪ್ರತಿ ವರ್ಷದಂತೆ ಈ ವರ್ಷವು ಕ್ರೀಡಾ ಮಹೋತ್ಸವವನ್ನು ಅತ್ಯಂತ ವಿಜ್ರಂಭಣೆಯಿಂದ ಆಯೋಜಿಸಿದ್ದು ಪಿ.ಎಸ್.ಐ ಶ್ಯಾಮ್ ಪಾವಸ್ಕರ್ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಕ್ರೀಡೆಯಲ್ಲಿ ಸ್ಪೂರ್ತಿ ಇರಲಿ ಸ್ಪರ್ಧಾ ಮನೋಭಾವದಲ್ಲಿ ಬೆರೆತು ಪಾಲ್ಗೊಳ್ಳಿ. ನೀವು ತರುವ ಕೀರ್ತಿ ಕೇವಲ ನಿಮಗಷ್ಟೆ ಸೀಮಿತವಲ್ಲ ಶಾಲೆಯು ಸೇರಿ ಸಮಸ್ತ ಊರಿಗೆ ಸಲ್ಲುವ ಗೌರವವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕೋಶಾಧ್ಯಕ್ಷ ಸದಾನಂದ ದೇಸಾಯಿ ಮಾತನಾಡಿ ನಿಮ್ಮನ್ನು ನೋಡಿದರೆ ನನ್ನನ್ನು ನಾನು ಅಂದಿನ ದಿನಗಳಲ್ಲಿ ಕಂಡಂತೆ ಭಾಸವಾಗುತ್ತದೆ. ಕ್ರೀಡಾದಿನಗಳು ಮತ್ತೆ ನೆನಪಾಗುತ್ತವೆ ಎಂದು ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿದರು.

ರಾಷ್ಟ್ರ ಮಟ್ಟದ ಕ್ರೀಡಾಸ್ಪರ್ಧೆಗೆ ಆಯ್ಕೆಯಾದ ಶ್ರೀದೇವಿ ನಾಯಕ್ ನೇತೃತ್ವದಲ್ಲಿ ವಿವಿಧ ಹಂತದ ಕ್ರೀಡೆಗಳಲ್ಲಿ ಸಾದನೆಗೈದು ಕೀರ್ತಿ ತಂದ ಸಿರಿಲ್ ಸಿದ್ದಿ, ಚೇತನ ಎಲ್, ಭವಾನಿ ಎಲ್, ಮೇದಾ ಹೆಗಡೆ, ಸ್ವಾತಿ ನಾಯ್ಕ್, ಜಯಶ್ರೀ ಮರಾಠಿ, ಅಶ್ವಿನಿ ಶೇಟ್, ಗಿರೀಶ್ ಭಾಗ್ವತ್ ಕ್ರೀಡಾ ಜ್ಯೋತಿ ಹೊತ್ತುತಂದರು.

ಪ್ರತಾಪ, ಸುಭಾಷ್, ಬಹದ್ದೂರ್, ಸರ್ದಾರ್ ಎಂಬ ನಾಲ್ಕು ತಂಡಗಳಾಗಿ ಕ್ರೀಡಾಪಟುಗಳನ್ನು ವಿಂಗಡಿಸಿದ್ದು ಪಥಸಂಚಲನ ನಡೆಸಿದರು. 13 ವೈಯಕ್ತಿಕ ಕ್ರೀಡೆ ಮತ್ತು 7 ಗುಂಪು ಆಟಗಳು ನಡೆಯಲಿದೆ.

ದೈಹಿಕ ಶಿಕ್ಷಕ ಗಂಗಾ ನಾಯಕ್ ನಿರ್ದೇಶನದಲ್ಲಿ ಎಲ್ಲಾ ಕ್ರೀಡೆಗಳು ಜರುಗಲಿದ್ದು ಶಿಕ್ಷಕ ವರ್ಗ ಸಂಪೂರ್ಣ ಸಹಕರಿಸಲಿದ್ದಾರೆ.




ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರು, ಎಲ್ಲಾ ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



ಆತ್ಮೀಯರೆ
ಜನವರಿ 22 ರಂದು ಭವ್ಯ ಭಾರತದ ಸ್ವರ್ಣದಿನ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಮಂದಿರ ಲೋಕಾರ್ಪಣೆ. ಈ ಪುಣ್ಯದಿನವನ್ನು ಭವಿಷ್ಯದಲ್ಲಿ ಮತ್ತಷ್ಟು ನೆನಪಾಗುವಂತೆ ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಉಳಿಸಲು *” ಪ್ರತಿಧ್ವನಿ ಯಲ್ಲಾಪುರ ” ಶ್ರೀ ರಾಮೋತ್ಸವ ಹೆಸರಿನಲ್ಲಿ ರಾಮಯಣದ ಪಾತ್ರಗಳನ್ನು ವೇದಿಕೆಯ ಮೇಲೆ ಒಟ್ಟಿಗೆ ತಂದು ಸನಾತನ ಸಂಸ್ಕೃತಿಯ ವೈಭವ ಕಾಣುವ ವ್ಯವಸ್ಥೆ ಮಾಡುವ ಪ್ರಯತ್ನ ಮಾಡಲಾಗುತ್ತಿದ್ದು ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹ ಇರಲೆಂದು ಆಶಿಸುತ್ತೇನೆ. ಭರತ ಖಂಡವೆ ಹೆಮ್ಮೆಯಿಂದ ಸಂಭ್ರಮಿಸುವ ಪ್ರಭು ಶ್ರೀರಾಮನ ಮಂದಿರ ಅಯೋಧ್ಯೆಯಲ್ಲಿ ಜನವರಿ ,22 ರಂದು ಲೋಕಾರ್ಪಣೆ ಮಾಡುತ್ತಿದ್ದು ಈ ದಿನವನ್ನು ಅವಿಸ್ಮರಣೀಯವಾಗಿಸಲು *ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ಮತ್ತು ಯೂಟ್ಯೂಬ್ ಚಾನಲ್* ಆಯೋಜನೆಯಲ್ಲಿ ತಾಲೂಕು ಮಟ್ಟದ ಛದ್ಮ ವೇಷ ಸ್ಪರ್ಧೆ ಆಯೋಜಿಸುತ್ತಿದೆ. ನಿಯಮಗಳನುಸಾರ ಸ್ಪರ್ಧೆಯಲ್ಲಿ ಭಾಗವಹಿಸಿ ನಗದು ಹಾಗು ವಿಶೇಷ ಬಹುಮಾನ ನಿಮ್ಮದಾಗಿಸಿಕೊಳ್ಳಿ.
ಸ್ಪರ್ಧೆ ವಿವರ
- ರಾಮಾಯಣಕ್ಕೆ ಸಂಭಂದಿಸಿದ ಪಾತ್ರಗಳನ್ನು ಮಾತ್ರ ವೇಷವಾಗಿ ಬಳಸಬೇಕು.
- ಸ್ಪರ್ಧಾಳು ಕಡ್ಡಾಯವಾಗಿ ಯಲ್ಲಾಪುರ ತಾಲೂಕಿನವರಾಗಿರಬೇಕು.
- ಸ್ಪರ್ಧೆಯಲ್ಲಿ ಪ್ರಾಪರ್ಟೀಸ್ ಬಳಸಬಹುದು
- ಸ್ಪರ್ಧಾಳುವಿನ ವಯಸ್ಸು 5 ರಿಂದ15 ವರ್ಷದೊಳಗಿನವರಾಗಿರಬೇಕು.
- ಸ್ಪರ್ಧಿಯ ಭಾವಚಿತ್ರ, ಮಾಡುವ ಪಾತ್ರದ ವೇಷ ಧರಿಸಿದ ಭಾವಚಿತ್ರ, ಪೂರ್ಣ ವಿಳಾಸ ಮತ್ತು ಫೋಟೋ ಅನ್ನು ಕೆಳಗೆ ನಮೂದಿಸಿದ ದೂರವಾಣಿ ಸಂಖ್ಯೆಗೆ ವಾಟ್ಸಪ್ ಮೂಲಕ ದಿನಾಂಕ 11-01-2024 ರ ಒಳಗಾಗಿ ಕಳುಹಿಸಬೇಕು.
- ಆಯ್ಕೆಯಾದವರಿಗೆ 15-01-2024 ರಂದು ತಿಳಿಸಲಾಗುವುದು
- 22-01-2024 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಂದು ಆಯ್ಕೆಯಾದ ಸ್ಪರ್ಧಿಗಳಿಗೆ ವೇದಿಕೆಯಲ್ಲಿ ಸ್ಪರ್ಧೆ ಏರ್ಪಡಿಸಲಾಗುವುದು.
- ಪ್ರಥಮ ಬಹುಮಾನ – 5555
ದ್ವಿತೀಯ ಬಹುಮಾನ – 3333
ತೃತೀಯ ಬಹುಮಾನ - 2222
ಚತುರ್ಥ ಬಹುಮಾನ – 1111
ಪಂಚಮ ಬಹುಮಾನ – 555
ವೇದಿಕೆಯ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ನೆನಪಿನ ಕಾಣಿಕೆ ನೀಡಲಾಗುವುದು - ಸ್ಪರ್ಧಿಗಳು ವೇಷಭೂಷಣ ಪ್ರಾಪರ್ಟಿ ಅಥವ ಅಲಂಕಾರಕ್ಕೆ ಅವರೆ ವ್ಯವಸ್ಥೆ ಮಾಡಿಕೊಳ್ಳಬೇಕು.
- ಪ್ರವೇಶ ಶುಲ್ಕ 200/- ( ಎರಡು ನೂರು ರೂಪಾಯಿಗಳು )
- ವೇದಿಕೆ ಸ್ಪರ್ಧೆಗೆ ಆಯ್ಕೆಯಾದವರು ಮಾತ್ರ ಪಚರವೇಶ ಶುಲ್ಕ ಭರಿಸ ತಕ್ಕದ್ದು
- ವೇದಿಕೆ ಸ್ಪರ್ಧೆ ಸಮಯ ಸ್ಥಳ ಸ್ಪರ್ಧೆ ನಿಯಮಗಳನ್ನು ಮುಂದೇ ತಿಳಿಸಲಾಗುವುದು.
ಮತ್ತೇಕೆ ತಡ ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ
ಯಲ್ಲಾಪುರದಲ್ಲಿ ರಾಮಾಯಣ ಪಾತ್ರಗಳ ದರ್ಶನ
ಬನ್ನಿ ಸನಾತನ ಸಂಸ್ಕೃತಿಯನ್ನು ಸಂಭ್ರಮಿಸೋಣ.
ಹಿಂದು ಸನಾತನ ಸಂಸ್ಕೃತಿಗೆ ನನ್ನದೊಂದು ನಮನವಿರಲಿ
ಧನ್ಯವಾದಗಳು
ಶ್ಯಾಮಲಾ ನಾಗೇಶ್
ಪ್ರದಾನ ಸಂಪಾದಕಿ
ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್
ಯಲ್ಲಾಪುರ
ನಿಮ್ಮ ಹೆಸರು ನೊಂದಾಯಿಸಿ ಭಾವಚಿತ್ರ ಕಳಿಸಲು ವಾಟ್ಸಪ್ ಸಂಖ್ಯೆ
9113096085 – ಕೇಬಲ್ ನಾಗೇಶ್
🚩 ” ಶ್ರೀರಾಮ ಜಯ ರಾಮ ಜಯ ಜಯ ರಾಮ “ 🚩
Prathidvani Yellapura