Breaking News

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ಮಂಚಿಕೇರಿಯಲ್ಲಿ ನಡೆದ ಉಪನ್ಯಾಸ ಮತ್ತು ಕವಿಗೋಷ್ಟಿ ಕಾರ್ಯಕ್ರಮ

ಪ್ರತಿಧ್ವನಿ,ಯಲ್ಲಾಪುರ: . `ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದು, ಸಾಹಿತ್ಯದ ಓದಿನ ಅಭ್ಯಾಸ ಕಡಿಮೆಯಾಗುತ್ತಿದೆ. ಸಾಹಿತ್ಯದ ಓದು ನಮ್ಮ ದೃಷ್ಟಿಕೋನವನ್ನು ವಿಶಾಲಗೊಳಿಸುತ್ತದೆ. ಸರಿಯಾದ ಆಲೋಚನಾ ಕ್ರಮವನ್ನು ರೂಪಿಸುತ್ತದೆ.  ಎಂದು ಹಿರಿಯ ಸಹಕಾರಿ ಆರ್.ಎನ್.ಹೆಗಡೆ ಗೋರ್ಸಗದ್ದೆ ಹೇಳಿದರು.
ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಮಂಚಿಕೇರಿ ಘಟಕ ಮಂಚಿಕೇರಿಯ ಹಾಸಣಗಿ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆಯೋಜಿಸಿದ ಉಪನ್ಯಾಸ ಮತ್ತು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು .
ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ತಾಲ್ಲೂಕಾಧ್ಯಕ್ಷ ಜಿ. ಎಸ್. ಗಾಂವ್ಕರ ಮಾತನಾಡಿ, `ಕಲೆ, ಸಾಹಿತ್ಯ, ಸಂಸ್ಕೃತಿಗಳು ನಮಗೆ ನೆಮ್ಮದಿ ನೀಡುತ್ತವೆ. ಸಾಹಿತ್ಯ ಬದುಕಿನಲ್ಲಿ ಸಾಗಬೇಕಾದ ದಾರಿಯನ್ನು ನಿರ್ದೇಶಿಸುತ್ತದೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಡಾ. ರವೀಂದ್ರ ಜಿ ಭಾರತದ ಇತಿಹಾಸದ ಕುರಿತು ಉಪನ್ಯಾಸ ನೀಡಿದರು.
ಪ್ರಾಧ್ಯಾಪಕ ಡಾ. ಕೆ.ಸಿ.ನಾಗೇಶ ಭಟ್ಟ ಸಾಹಿತ್ಯದಲ್ಲಿ ಭಾರತೀಯತೆ ಕುರಿತು ಉಪನ್ಯಾಸ ನೀಡಿ ಭಾರತೀಯ ಸಂಸ್ಕೃತಿ ಮತ್ತು ಭಾರತೀಯ ಸಾಹಿತ್ಯ ಬೇರೆ ಬೇರೆ ಅಲ್ಲ. ನಮ್ಮ ಸಂಸ್ಕೃತಿ ಉಳಿದರೆ ಭಾರತ ಉಳಿಯುತ್ತದೆ ಎಂದರು.
ಸಿಂಧೂರ ಹೆಗಡೆ, ಆದ್ಯಾ ಹೆಗಡೆ, ಪದ್ಮಿನಿ ಶೇಟ್, ಸಾತ್ವಿಕ್, ಪರ್ಣಿಕಾ ಹೆಗಡೆ, ಪ್ರೇರಣಾ ಭಟ್ಟ, ಸನ್ನಿಧಿ ಹೆಗಡೆ, ದೀಪಿಕಾ ಭಟ್ಟ ಚಿಣ್ಣರ ಚಿಗುರು ಮಕ್ಕಳ ಕವಿಗೋಷ್ಠಿಯಲ್ಲಿ ಕವನ ವಾಚಿಸಿದರು. ಮಂಗಲಾ ಭಾಗ್ವತ, ರಾಜಲಕ್ಷಿಭಟ್, ಸುಜಾತಾ ದಂಟ್ಕಲ್, ಶರಾವತಿ ಶಿರ್ನಾಲಾ, ಅಕ್ಷಯ ಹೆಗಡೆ, ಲತಾ ಹೆಗಡೆ, ಸೌಮ್ಯಾ ನಾಯ್ಕ, ರಾಘವೇಂದ್ರ ಪಟಗಾರ, ದಾಕ್ಷಾಯಿಣಿ, ಉಷಾ ನಾಗರಾಜ್, ಜಯಪ್ರಕಾಶ ಹಬ್ಬು, ಸಾವಿತ್ರಿ ಮಾಸ್ಕೇರಿ, ವಿಮಲಾ ಭಾಗ್ವತ, ಪೂರ್ಣಿಮಾ ಹೆಗಡೆ, ನಾಗೇಶ ಹೊಸಳ್ಳಿ, ಶೋಭಾ ಭಟ್ಟ ಅನಿಲ್, ಉದಯಪ್ರಕಾಶ ಹಬ್ಬು ಹಿರಿಯರ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದರು.  
ಹಿರಿಯ ರಂಗಕರ್ಮಿ ಆರ್.ಎನ್. ಭಟ್ಟ ದುಂಡಿ, ಕೃಷ್ಣ ಪದಕಿ ಇದ್ದರು. ಅನಂತ ತಾಮ್ಹನ್ಕರ್ ಕವಿತೆಗಳನ್ನು ಅವಲೋಕಿಸಿದರು.
ಪುಷ್ಪಾ ಮಾಳಕೊಪ್ಪ ಸ್ವಾಗತಿಸಿದರು. ಶ್ರೀರಾಮ ಲಾಲಗುಳಿ ಪ್ರಸ್ತಾವಿಕವಾಗಿ ಮಾತನಾಡಿದರು. ಸುಜಾತಾ ಹೆಗಡೆ ಮತ್ತು ಆಶಾ ಶೆಟ್ಟಿ ನಿರ್ವಹಿಸಿದರು. ವಿನೇಶ ಮಾಳಕೊಪ್ಪ ವಂದಿಸಿದರು.  

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *