
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…….
ಪ್ರತಿಧ್ವನಿ, ಯಲ್ಲಾಪುರ : ಕಾಡ್ಗಿಚ್ಚಿನಿಂದ ಮನೆ ಸುಟ್ಟು ಬೀದಿಗೆಬಿದ್ದ ಆನಗೋಡಿನ ಸಿದ್ದಿ ಕುಟುಂಬಕ್ಕೆ ತಾತ್ಕಾಲಿಕ ಮನೆ ನಿರ್ಮಾಣಕ್ಕೆ ಸಚಿವ ಶಿವರಾಮ ಹೆಬ್ಬಾರ್ ಸಹಕರಿಸಿ ಆಸರೆಯಾಗಿದ್ದು ಸರ್ಕಾರದಿಂದ ಸಿಗಬೇಕಾದ ಪರಿಹಾರವನ್ನೂ ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.

ಕಳೆದೆರಡು ದಿನಗಳ ಹಿಂದೆ ತಾಲೂಕಿನ ಆನಗೋಡು ಪಂಚಾಯತ ವ್ಯಾಪ್ತಿಯ ನಾಗರಕಾನ ಗ್ರಾಮದ ನಿವಾಸಿ ಕೃಷ್ಣಾ ರಾಮಾ ಸಿದ್ದಿ ಎಂಬುವರ ವಾಸದ ಮನೆ ಕಾಡ್ಗಿಚ್ಚಿನ ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿತ್ತು.

ಮನೆ ಇಲ್ಲದೆ ಬೀದಿಗೆ ಬಿದ್ದ ಬದುಕಿಗೆ ಆಸರೆಯಾಗಿ ಸಚಿವ ಶಿವರಾಮ ಹೆಬ್ಬಾರ್ ತಾತ್ಕಾಲಿಕ ಮನೆ ನಿರ್ಮಾಣಕ್ಕೆ ಸಹಕರಿಸಿ 40 ಸಾವಿರ ಮೌಲ್ಯದ ಕಬ್ಬಿಣದ ಶೀಟುಗಳನ್ನು ಕೊಡಿಸಿದ್ದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಾ.ರವಿ ಭಟ್ಟ ಬರಗದ್ದೆ , ಆನಗೋಡು ಗ್ರಾ.ಪಂ ಅಧ್ಯಕ್ಷ ಪರಮೇಶ್ವರ ಗಾಂವ್ಕರ್ , ಸದಸ್ಯರಾದ ಮೀನಾಕ್ಷಿ ಭಟ್ಟ ಮತ್ತು ಕುಸುಮಾ ಸಿದ್ದಿ ಮೂಲಕ ಹಸ್ತಾಂತರಿಸಿ ಕೃಷ್ಣಾ ರಾಮಾ ಸಿದ್ದಿ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.
ಆತ್ಮೀಯ ಓದುಗರ ಗಮನಕ್ಕೆ
ಪ್ರತಿಧ್ವನಿ ಯಲ್ಲಾಪುರ ನಿಮ್ಮಿಂದ ವಿಶೇಷ ಲೇಖನವನ್ನು ಆಹ್ವಾನಿಸುತ್ತಿದೆ. ಪ್ರಸಕ್ತ ವಿದ್ಯಮಾನಗಳು, ಪ್ರೇಕ್ಷಣೀಯ ಸ್ಥಳಗಳ ಮಾಹಿತಿ, ಇನ್ನಿತರ ಪ್ರಮುಖ ವಿಷಯಗಳ ಕುರಿತು ನೀವು ಬರೆಯಲು ಪ್ರಾರಂಭಿಸಿ ನಿಮ್ಮ ಲೇಖನವನ್ನು ನಮ್ಮ ಪ್ರತಿಧ್ವನಿ ಯಲ್ಲಾಪುರ ವೆಬ್ ನಲ್ಲಿ ಪ್ರಕಟಿಸಲಾಗುವುದು.
>> ನಿಮ್ಮ ಲೇಖನ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತೆ ಮತ್ತು ಜಾಗೃತಗೊಳಿಸುವಂತಿರಬೇಕು.
>>>ಯಾವುದೆ ವ್ಯಕ್ತಿ, ಧರ್ಮ, ಜಾತಿ, ಸಂಘ ಸಂಸ್ಥೆಗಳ ಹಾಗು ರಾಜಕೀಯ ಪಕ್ಷ ಅಥವ ವ್ಯಕ್ತಿಗಳ ಭಾವನೆಗೆ ದಕ್ಕೆಯಾಗುವಂತಿರಬಾರದು.
>>>ಮೊಬೈಲ್ ನಲ್ಲೆ ಟೈಪ್ ಮಾಡಿ ಕಳಿಸಬೇಕು.
>>>ನಿಮ್ಮ ಹೆಸರು, ವಿಳಾಸ, ಮತ್ತು ನಿಮ್ಮ ಭಾವಚಿತ್ರ ಕಡ್ಡಾಯವಾಗಿ ಕಳಿಸಬೇಕು.
>>>ನಿಮ್ಮ ಲೇಖನವನ್ನು ” ಪ್ರತಿಧ್ವನಿ ಯಲ್ಲಾಪುರ ಅತಿಥಿ ಬರಹ” ದ ಅಡಿಯಲ್ಲಿ ಪ್ರಕಟಿಸಲಾಗುವುದು.
>>>ವಿ.ಸೂ<<< ನಿಮ್ಮ ಲೇಖನ ಯಾವಾಗ ಪ್ರಕಟಿಸಬೇಕು ಅಥವ ಬೇಡವೊ ಎಂಬ ನಿರ್ಧಾರ ಪ್ರತಿಧ್ವನಿ ಸಂಪಾದಕರ ಇಚ್ಚೆಯಾಗಿರುತ್ತದೆ.
ಮತ್ತೇಕೆ ತಡ ನೀವು ಬರೆಯಿರಿ
ಈ ವಾಟ್ಸಪ್ ಸಂಖ್ಯೆಗೆ ಕಳುಹಿಸಿ
9113096085, 8088255121

Prathidvani Yellapura