Breaking News

ಕಿರವತ್ತಿಯಲ್ಲಿ ಸಂಸ್ಕೃತಿ ಮಹಿಳಾ ಸೌಹಾರ್ಧ ಸಹಕಾರಿ ನೂತನ ಶಾಖೆ ಆರಂಭ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ –  ಕಳೆದೆರಡು ವರ್ಷಗಳ ಹಿಂದೆ ಹುಟ್ಟಿದ ಆರ್ಥಿಕ ಸಂಸ್ಥೆಯೊಂದು  ಯಶಸ್ವಿಯಾಗಿ  ಎರಡನೆ ಶಾಖೆಯನ್ನು ತೆರೆಯುವಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ ಸಂಸ್ಥೆಯ ಆರ್ಥಿಕ ಶಿಸ್ತು ಉತ್ತಮವಾಗಿದ್ದು. ಬೆಂಬಲಕ್ಕೆ ನಿಂತ ಮಿರಾಶಿಯವರಂತಹ ನಾಯಕರು ಇರುವಾಗ ಮತ್ತಷ್ಟು ಅಭಿವೃದ್ಧಿ ಸಾಧ್ಯವಿದೆ ಎಂದು ವಿಕಾಸ್ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ ಹೇಳಿದರು.


ಅವರು ತಾಲೂಕಿನ ಕಿರವತ್ತಿಯಲ್ಲಿ ಸಂಸ್ಕೃತಿ ಮಹಿಳಾ ಸೌಹಾರ್ಧ ಸಹಕಾರಿ ಸಂಘ ನಿಯಮಿತ.ದ ನೂತನ ಶಾಖೆ ಉದ್ಘಾಟನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸಂಸ್ಕೃತಿ ಮಹಿಳಾ ಸೌ,ಸ,ಸಂ,ನಿ ದ ಗೌರವಾಧ್ಯಕ್ಷೆ ವರ್ಷಾ ವಿಜಯ್ ಮಿರಾಶಿ ಶಾಖೆಯನ್ನು ಉದ್ಘಾಟಿಸಿದರು.
ಮಹಿಳೆಯರು ಆರ್ಥಿಕ ವಹಿವಾಟನ್ನು ಪುರುಷರಿಗಿಂತ ಉತ್ತಮವಾಗಿ ನಿಭಾಯಿಸುತ್ತಿದ್ದು ಭವಿಷ್ಯ ಶ್ರೇಯಸ್ಕರವಾಗಿರಲಿ ಎಂದು ಉನ್ನತಿ ಗೌಳಿ ಸಹಕಾರಿ ಸಂಘದ ಅಧ್ಯಕ್ಷ ಮಾಕು ಸೋನು ಕೋಕರೆ, ಪತ್ರಕರ್ತ ಕೇಬಲ್ ನಾಗೇಶ್ ಹೇಳಿದರು.


ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ, ಸೊಸೈಟಿ ಅಧ್ಯಕ್ಷ ಸಂಜಯ್ ಮಿರಾಶಿ, ಕಿರವತ್ತಿ ಗ್ರಾ.ಪಂ ಅಧ್ಯಕ್ಷೆ ಸಂಗೀತ ರೋಂಗು ಕೋಕರೆ, ಸದಸ್ಯ ರೆಹಮತ್ ಅಬ್ಬಿಗೆರೆ, ಎ.ಪಿ.ಎಂ.ಸಿ ಮಾಜಿ ಉಪಾಧ್ಯಕ್ಷ ರಾಘವೇಂದ್ರ ಗೊಂದಿ, ಸಂಸ್ಥೆಯ ಉಪಾಧ್ಯಕ್ಷೆ ಗೀತಾ ಗಣೇಶ ಪಾವಸ್ಕರ್, ಸ್ಥಳೀಯ ಪ್ರಮುಖರು, ಮಿರಾಶಿ ಅಭಿಮಾನಿಗಳು, ವಿವಿಧ ಮಹಿಳಾ ಸಂಘಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಮೇಘನಾ ತಿನೇಕರ್ ಪ್ರಾರ್ಥಿಸಿ, ವೀಣಾಕುಲಕರ್ಣಿ ಸ್ವಾಗತಿಸಿ, ಕೀರ್ತನ ವರದಿ ವಾಚಿಸಿ, ಪ್ರಗತಿ ವರದಿ ವಾಚಿಸಿ, ಜ್ಯೋತಿ ಪಾಟಣ್ಕರ್ ವಂದಿಸಿದರು.

ಈ ಶುಭ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷೆ ವರ್ಷಾ ಮಿರಾಶಿ ಅವರ ಜನ್ಮದಿನವನ್ನು ಸಂಸ್ಥೆಯ ವತಿಯಿಂದ ಆಚರಿಸಲಾಯಿತು. ಕೇಕ್ ಕತ್ತರಿಸಿ ಸರ್ವರಿಗು ಸಿಹಿ ಹಂಚಿದರು. ಪತ್ನಿಗೆ ಸಿಹಿ ತಿನಿಸುವ ಮೂಲಕ ವಿಜಯ್ ಮಿರಾಶಿ ಸಂಭ್ರಮ ಹಂಚಿಕೊಂಡರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *