Breaking News

ಸಮಾಜ ಸೇವೆ ಉಸಿರು ನಿಂತ ಮೇಲೂ ಹೆಸರು ಉಳಿಯಲು ಕಾರಣವಾಗುತ್ತದೆ-ಅನಂತಮೂರ್ತಿ ಹೆಗಡೆ.

ಯಲ್ಲಾಪುರ : ‘ಪುನೀತ್ ರಾಜಕುಮಾರ್ ಸಾವಿನ ನಂತರವು ಬದುಕಿರುವ ಮಹಾನ್ ಚೇತನರಾಗಿದ್ದಾರೆ. ಕಾರಣ ಅವರು ಸಮಾಜಕ್ಕೆ ನೀಡಿದ ಸೇವೆ ಅವರ ಮರಣದ ನಂತರವು ಇಂದಿಗು ಬದುಕಿಸಿದೆ. ನನಗೆ ಅವರೇ ಸ್ಪೂರ್ತಿ ಯಾಗಿದ್ದಾರೆ. ಅವರು ಸಮಾಜಕ್ಕೆ ನೀಡಿದ ಸೇವೆ ನೋಡಿ ಸಮಾಜ ಸೇವೆಯ ಮೂಲಕ ಉಸಿರುನಿಂತ ಮೇಲೂ ಹೆಸರು ಉಳಿಯಲು ಕಾರಣವಾಗುತ್ತದೆ ಎಂಬುದನ್ನು ಮನಗಂಡು ಸಮಾಜ ಸೇವೆಗೆ ಮುಂದಾಗಿದ್ದೇನೆ
ಎಂದು ಶಿರಸಿಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.

ಅವರು ತಮ್ಮ ಟ್ರಸ್ಟ ವತಿಯಿಂದ ತಾಲೂಕಿನ ಕಿರವತ್ತಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಶನಿವಾರ ಉದ್ಘಾಟಿಸಿ  ಮಾತನಾಡಿದರು,


‘ನಾನು ಮಾಡಿದ ಸೇವೆ ಸಮಾಜಕ್ಕೆ ಉಪಯೋಗವಾದರೆ ಮಾಡಿದ ಸೇವೆ ಸಾರ್ಥಕವಾಗುತ್ತದೆ. ಕುಡಿಯುವ ನೀರು ಆರೋಗ್ಯಕ್ಕೆ ಕಾರಣವಾಗುತ್ತದೆ ಎಂಬ ಕಾರಣದಿಂದ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ನೀಡುತ್ತಿದ್ದೇನೆ’ ಎಂದರು


ಹಿಂದೆ ಗುರು, ಮುಂದೆ ಗುರಿ ಇದ್ದರೆ ಜೀವನದಲ್ಲಿ ಸಾಧನೆ ಸಾಧ್ಯ. ಇಲ್ಲಿ ಉತ್ತಮ ಗುರುಗಳಿದ್ದಾರೆ. ಜೀವನದ ಗುರಿ ನೀವು ವಿದ್ಯಾರ್ಥಿಗಳು ಇಟ್ಟುಕೊಂಡು ಸಾಧನೆ ಮಾಡಿ. ಸಮಾಜದಲ್ಲಿ ದಾನಿಗಳು ಸಾಕಷ್ಟು ಇರಬಹುದು. ಆದರೆ ನೀಡಿದ ದಾನದ ಸದುಪಯೋಗವಾಗಬೇಕು. ಅಂದಾಗ ಮಾತ್ರ ಮಾಡಿದ ದಾನ ಶ್ರೇಷ್ಠತೆ ಪಡೆಯುತ್ತದೆ. ಅನಂತಮೂರ್ತಿ ಹೆಗಡೆ ಯಾವುದೇ ಪ್ರಚಾರದ ಬಯಕೆ ಇಲ್ಲದೇ ಸಮಾಜಮುಖಿ ಕಾರ್ಯಗಳಿಂದ ಜಿಲ್ಲೆಯ ಆಸ್ತಿಯಾಗಿದ್ದಾರೆ’ ಎಂದು ಬಿಜೆಪಿ ಮಂಡಲಾಧ್ಯಕ್ಷ ‘ಪ್ರಸಾದ ಹೆಗಡೆ ಹೇಳಿದರು.


ಪ್ರಮುಖರಾದ ಸೊಮೇಶ್ವರ ನಾಯ್ಕ, ಗಣೇಶ ಹೆಗಡೆ, ಅನಂತ ಮೂರ್ತಿಹೆಗಡೆ, ಪ್ರಸಾದ ಹೆಗಡೆ, ಗಣಪತಿ ಬೋಳಗುಡ್ಡೆ ವೇದಿಕೆಯಲ್ಲಿದ್ದರು. ಸಾಮಾಜಿಕ ಕಾರ್ಯಕರ್ತ ಸುಭಾಷ ಶೇಷಗಿರಿ ಮಾತನಾಡಿದರು.
ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು, ಉಪ ಪ್ರಾಂಶುಪಾಲ ಜನಾರ್ಧನ ಗಾಂವ್ಕರ್ ಸ್ವಾಗತಿಸಿದರು,ಶಿಕ್ಷಕ ಸತೀಶ ಯಲ್ಲಾಪುರ ನಿರೂಪಿಸಿದರು, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಜಯ ನಾಯಕ ವಂದಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *