
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಲ್ಲಿ ಮಳೆ ಆರ್ಭಟ ಕಡಿಮೆಯಾದರು ಮರ ಒಂದು ತುಂಡಾಗಿ ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದ ಘಟನೆ ಗುರುವಾರ ಬೆಳಗ್ಗೆ ಯಲ್ಲಾಪುರ ಶಿರಸಿ ರಸ್ತೆಯ ಸಂತೃಪ್ತಿ ಹೊಟೆಲ್ ಮುಂಬಾಗ ನಡೆದಿದೆ.

ಅದೃಷ್ಟವಶಾತ್ ಕಾರಿನಲ್ಲಿ ಯಾರು ಇರಲಿಲ್ಲ ಮರ ಬಿದ್ದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಕಾರು ಯಲ್ಲಾಪುರ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಗ್ಯಾರೇಜ್ ಸಿಬ್ಬಂದಿ ಒಬ್ಬರು ತಂದಿದ್ದು ಉಪಹಾರ ಮಾಡಲು ರಸ್ತೆ ಬದಿಗೆ ನಿಲ್ಲಿಸಿ ಹೋಗಿದ್ದರೆಂದು ತಿಳಿದು ಬಂದಿದೆ.

ವಿಷಯ ತಿಳಿಯುತ್ತಲೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿದ್ದಾರೆ. ಸದಾ ಜನರ ಓಡಾಟ ವಾಹನ ಸಂಚಾರದಲ್ಲಿ ತುಂಬಿರುತ್ತಿದ ರಸ್ತೆ ಯಲ್ಲಿ ಯಾವುದೆ ಸಾರ್ವಜನಿಕರಿಲ್ಲದಿರುವುದು ಅದೃಷ್ಟವೆ ಸರಿ ಎನ್ನುತ್ತಿದ್ದಾರೆ ಪ್ರತ್ಯಕ್ಷದರ್ಶಿಗಳು.
Prathidvani Yellapura