
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಪೊಲೀಸ್ ವಸತಿಗೃಹದಲ್ಲಿ ಗಣಪತಿ ಫೋಟೋ ಪಟ್ಟಿಯ ಮೇಲೆ ಹಾವಿನ ಮರಿಯೊಂದು ಪ್ರತ್ಯಕ್ಷವಾಗಿದ್ದು ಭಯದ ನಡುವೆಯು ಭಕ್ತಿ ಮೂಡಿತ್ತು.

ಪೊಲೀಸ್ ವಸತಿ ಗೃಹದ ದೀಪಕ್ ನಾಯ್ಕ ಎಂಬುವರ ಮನೆಯಲ್ಲಿ “ಸಿಲೋನ್ ಕ್ಯಾಟ್ ಸ್ನೇಕ್ ” ಎಂಬ ಹೆಸರಿನ ಹಾವು ಗಣಪತಿ ಫೋಟೋ ಮೇಲೆ ಸಿಂಬೆ ಸುತ್ತಿ ಮಲಗಿತ್ತು ತಕ್ಷಣ ಸ್ನೇಕ್ ಅಕ್ಬರ್ ಗೆ ಮಾಹಿತಿ ಮುಟ್ಟಿಸುತ್ತಲೆ ಸ್ಥಳಕ್ಕೆ ಆಗಮಿಸಿ ಹಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಡಲಾಯಿತು.

