
ಯಲ್ಲಾಪುರ : ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಭರತನಹಳ್ಳಿಯ ಸ.ಹಿ.ಪ್ರಾ ಶಾಲಾ ಶಿಕ್ಷಕಿಯಾಗಿದ್ದ ಸವಿತಾ ಪ್ರೇಮಚಂದ್ರ ಗೋಂದಿ (38) ಮಾವಿನಕಟ್ಟೆಯ ತಮ್ಮ ಸ್ವಗೃಹದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಸಂಭವಿಸಿದೆ.

ಅನೇಕ ವರ್ಷಗಳಿಂದ ಥೈರಾಯ್ಡ್ ಖಾಯಿಲೆಯಿಂದ ಬಳಲುತ್ತಿದ್ದ ಇವರು ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ನೇಣಿಗೆ ಶರಣಾಗಿದ್ದಾರೆ.
ಓರ್ವ ಸಹೋದರ, ಮೂವರು ಸಹೋದರಿಯರು ಹಾಗೂ ತಾಯಿ ಅಲ್ಲದೇ ಅಪಾರ ಸಂಖ್ಯೆಯ ಬಂಧುಬಳಗ, ಶಿಷ್ಯರನ್ನು ಇವರು ಅಗಲಿದ್ದಾರೆ.
Prathidvani Yellapura