
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ಯಲ್ಲಾಪುರ, ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು, ಪ್ರಶಿಕ್ಷಣಭಾರತಿ (ಶಿಕ್ಷಕರ ಪ್ರಶಿಕ್ಷಣ ಪ್ರಕಲ್ಪ) ನಿರಂತರ ಪ್ರಶಿಕ್ಷಣ ವರ್ಗ, ವಿಶ್ವದರ್ಶನ ಶಿಕ್ಷಣ ಸಂಸ್ಥೆ ಯಲ್ಲಾಪುರ ಇವುಗಳ ಆಶ್ರಯದಲ್ಲಿ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸಭಾಭವನದಲ್ಲಿ ಮೇ 25 ರಂದು ಎರಡು ದಿನಗಳ ಶಿಕ್ಷಕರ ಕಾರ್ಯಗಾರವನ್ನು ಉದ್ಘಾಟಿಸಲಾಯಿತು.

ಶಿಕ್ಷಕರ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕಿರಣ್ ರಾಮ್ “ನೈಜ ಇತಿಹಾಸ” ಎಂಬ ವಿಷಯ , ಆನಂದ ಪಾಟೀಲ್ ರಾಷ್ಟೋತ್ತಾನ ವಿದ್ಯಾ ಕೇಂದ್ರ ಧಾರವಾಡ ಇವರು “ಓಇP-೨೦೨೦” ಎಂಬ ವಿಷಯ, ರೇವತಿ, ಕ್ರಿಯಾ ಸಮಿತಿ ಸದಸ್ಯರು ಪ್ರಶಿಕ್ಷಣ ಭಾರತೀ ಇವರು “ಪಂಚಮುಖಿ ಶಿಕ್ಷಣದ ಅನುಷ್ಠಾನ” ಹಾಗೂ “ಭಾರತದ ದರ್ಶನ” ಎಂಬ ವಿಷಯ, ಬಸವರಾಜ್ ಟಿ ಎಸ್, ರಾಜ್ಯ ಸಂಚಾಲಕರು ಪ್ರಶಿಕ್ಷಣ ಭಾರತೀ ಇವರು “ಶಿಕ್ಷಣದಲ್ಲಿ ಭಾರತೀಯತೆ” ಎಂಬ ವಿಷಯ, ಎಂ ಎನ್ ಹೆಗಡೆ ನಿವೃತ್ತ ಪ್ರಾಧ್ಯಾಪಕರು ಇವರು “ಆದರ್ಶ ಶಿಕ್ಷಕ” ಎಂಬ ವಿಷಯದ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.
ವಿನಾಯಕ್ ಭಟ್ ಸಂಸ್ಕೃತ ಅಧ್ಯಾಪಕರು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಧಾರವಾಡ ದೀಪ ಬೆಳಗಿಸಿ ಉದ್ಘಾಟನಾ ನುಡಿಗಳನ್ನು ಆಡಿದರು . ಗಣ್ಯರಿಂದ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಪುಷ್ಪಾ ಹೆಗಡೆ ಪ್ರಾರ್ಥನಾ ಗೀತೆಯನ್ನು ಹಾಡಿದರು, ಮಹಾದೇವಿ ಭಟ್, ಪ್ರಾಂಶುಪಾಲರು ವಿಶ್ವದರ್ಶನ ಕೇಂದ್ರೀಯ ಶಾಲೆ ಯಲ್ಲಾಪುರ ಇವರು ಗಣ್ಯರ ಸ್ವಾಗತ ಹಾಗೂ ಪರಿಚಯವನ್ನು ಮಾಡಿದರು. ದತ್ತಾತ್ರೇಯ ಗಾಂವ್ಕರ್, ಪ್ರಾಂಶುಪಾಲರು ವಿಶ್ವದರ್ಶನ ಪದವಿಪೂರ್ವ ಕಾಲೇಜು, ಅಧ್ಯಕ್ಷೀಯ ನುಡಿಗಳನ್ನು ಆಡಿದರು. ವನಿತಾ ಬಾಗ್ವತ್ ವಂದನಾರ್ಪಣೆ ನೆರವೇರಿಸಿದರು
Prathidvani Yellapura