
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ….
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಲ್ಲಿ ಅತ್ಯಾಧುನಿಕ ವ್ಯವಸ್ಥೆಯುಳ್ಳ ಹೈಟೆಕ್ ಬಸ್‌ನಿಲ್ದಾಣ ಸಚಿವ ಶಿವರಾಮ ಹೆಬ್ಬಾರ್ ಪ್ರಯತ್ನದ ಫಲವಾಗಿ ನಿರ್ಮಾಣಗೊಂಡಿದ್ದು ನಂತರದ ದಿನಗಳಲ್ಲಿ ಕೆಲವೊಂದು ವ್ಯವಸ್ಥೆಗಳು ಸರಿಯಾದ ನಿರ್ವಹಣೆ ಇಲ್ಲದೇ ಸೊರಗುತ್ತಿರುವ ಕುರಿತು ಸುದ್ದಿ ಕೇಳಿಬರುತ್ತಿತ್ತು. ಸಮಸ್ಯೆ ಬಂದಾಗಲೆಲ್ಲಾ ಘಟಕದ ವ್ಯವಸ್ಥಾಪಕರೂ ಸಹ ಸ್ಪಂದಿಸಿ ಸಮಸ್ಯೆ ಬಗೆಹರಿಸುತ್ತಿದ್ದರು.

ಇದೀಗ ಹೊಸ ಸಮಸ್ಯೆ ತಲೆ ಎತ್ತಿದೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮತ್ತು ಸಿಬ್ಬಂದಿಗಳಿಗೆ ದಾಹ ತಣಿಸಲು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಉಚಿತ ಸೇವೆ ಒದಗಿಸಲಾಗುತ್ತಿತ್ತು. ಆದರೆ ಇತ್ತೀಚಿಗೆ ನೀರಿನ ಘಟಕ ದುರಸ್ಥಿಯಾಗಿದ್ದು ಅನೇಕ ದಿನಗಳಿಂದ ಕಾರ್ಯ ನಿರ್ವಹಿಸದೇ ಪ್ರಯಾಣಿಕರು ಮತ್ತು ಸಿಬ್ಬಂದಿಗಳಿಗೆ ಕುಡಿಯುವ ನೀರು ಲಭಿಸದೇ ಹಣ ತೆತ್ತು ನೀರು ಕೊಂಡುಕೊಳ್ಳಬೇಕಾದ ದುರವಸ್ಥೆ ಬಂದಿದೆ.

ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಪ್ರಯಾಣಿಕರು ಸಾಕಷ್ಟು ಪ್ರಮಾಣದ ನೀರನ್ನು ಉಚಿತವಾಗಿ ಪಡೆಯಬಹುದಾಗಿತ್ತು. ಆದರೆ ಈಗ ಲೀ ನೀರಿಗೆ 2೦ರೂ ತೆತ್ತು ನೀರು ಖರೀದಿಸಬೇಕಾಗಿದೆ. ಸರ್ಕಾರದ ಸೌಲಭ್ಯವಿದ್ದೂ ವ್ಯವಸ್ಥೆ ಸರಿಪಡಿಸದೇ , ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಹಾಳುಗೆಡವಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ತಂದಿದೆ. ಶೀಘ್ರವೇ ಸಮಸ್ಯೆ ಬಗೆಹರಿದು ಕಡಿಮೆ ಹಣದಲ್ಲಿ ಪ್ರಯಾಣಿಕರ, ಸಿಬ್ಬಂದಿಗಳ ದಾಹ ತಣಿಯುವಂತಾಗಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಆತ್ಮೀಯ ಓದುಗರ ಗಮನಕ್ಕೆ
ಪ್ರತಿಧ್ವನಿ ಯಲ್ಲಾಪುರ ನಿಮ್ಮಿಂದ ವಿಶೇಷ ಲೇಖನವನ್ನು ಆಹ್ವಾನಿಸುತ್ತಿದೆ. ಪ್ರಸಕ್ತ ವಿದ್ಯಮಾನಗಳು, ಪ್ರೇಕ್ಷಣೀಯ ಸ್ಥಳಗಳ ಮಾಹಿತಿ, ಇನ್ನಿತರ ಪ್ರಮುಖ ವಿಷಯಗಳ ಕುರಿತು ನೀವು ಬರೆಯಲು ಪ್ರಾರಂಭಿಸಿ ನಿಮ್ಮ ಲೇಖನವನ್ನು ನಮ್ಮ ಪ್ರತಿಧ್ವನಿ ಯಲ್ಲಾಪುರ ವೆಬ್ ನಲ್ಲಿ ಪ್ರಕಟಿಸಲಾಗುವುದು.
>> ನಿಮ್ಮ ಲೇಖನ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತೆ ಮತ್ತು ಜಾಗೃತಗೊಳಿಸುವಂತಿರಬೇಕು.
>>>ಯಾವುದೆ ವ್ಯಕ್ತಿ, ಧರ್ಮ, ಜಾತಿ, ಸಂಘ ಸಂಸ್ಥೆಗಳ ಹಾಗು ರಾಜಕೀಯ ಪಕ್ಷ ಅಥವ ವ್ಯಕ್ತಿಗಳ ಭಾವನೆಗೆ ದಕ್ಕೆಯಾಗುವಂತಿರಬಾರದು.
>>>ಮೊಬೈಲ್ ನಲ್ಲೆ ಟೈಪ್ ಮಾಡಿ ಕಳಿಸಬೇಕು.
>>>ನಿಮ್ಮ ಹೆಸರು, ವಿಳಾಸ, ಮತ್ತು ನಿಮ್ಮ ಭಾವಚಿತ್ರ ಕಡ್ಡಾಯವಾಗಿ ಕಳಿಸಬೇಕು.
>>>ನಿಮ್ಮ ಲೇಖನವನ್ನು ” ಪ್ರತಿಧ್ವನಿ ಯಲ್ಲಾಪುರ ಅತಿಥಿ ಬರಹ” ದ ಅಡಿಯಲ್ಲಿ ಪ್ರಕಟಿಸಲಾಗುವುದು.
>>>ವಿ.ಸೂ<<< ನಿಮ್ಮ ಲೇಖನ ಯಾವಾಗ ಪ್ರಕಟಿಸಬೇಕು ಅಥವ ಬೇಡವೊ ಎಂಬ ನಿರ್ಧಾರ ಪ್ರತಿಧ್ವನಿ ಸಂಪಾದಕರ ಇಚ್ಚೆಯಾಗಿರುತ್ತದೆ.
ಮತ್ತೇಕೆ ತಡ ನೀವು ಬರೆಯಿರಿ
ಈ ವಾಟ್ಸಪ್ ಸಂಖ್ಯೆಗೆ ಕಳುಹಿಸಿ
9113096085, 8088255121

Prathidvani Yellapura