

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಬೆಲ್ ರಸ್ತೆಯಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ಸಭಾ ಭವನದ ಎದುರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳ ಜ್ಞಾನ ದಾಹ ನೀಗಿಸುತ್ತಾ ಗ್ರಾಮೀಣ ಭಾಗದಲ್ಲು ಹೈಟೆಕ್ ಜ್ಞಾನ ಸಂಪಾದನೆ ಸಾದ್ಯ ಎಂಬುದನ್ನು ” ಯೋಗಿ ಟಾಪ್ಪಸ್೯ ಪಾಯಿಂಟ್ ” ಸಾದ್ಯವಾಗಿಸಿ ತೋರುತ್ತ ಬಂದಿದೆ.

ಇದೀಗ ಸಾದನೆಯ ಹಾದಿಗೆ ಮತ್ತಷ್ಟು ಸಾದನೆಗಳು ಸೇರ್ಪಡೆಯಾಗಿ ಯಲ್ಲಾಪುರದ ಗೌರವ ಮತ್ತಷ್ಟು ಹೆಚ್ಚಿಸಿದೆ.
ಸದ್ಯ ಕೋಚಿಂಗ್ ಸೆಂಟರ್ ನಲ್ಲಿ ಮಾರ್ಗದರ್ಶನ ಪಡೆಯುತ್ತಿರುವ ವಿದ್ಯಾರ್ಥಿಗಳು ಇತರೆ ಕೋಚಿಂಗ್ ಸೆಂಟರ್ ಗಳು ಮೂಗಿನ ಮೇಲೆ ಬೆರಳಿಡುವಂತಹ ಬೆರಗು ಮೂಡಿಸಿದ್ದಾರೆ. ಸೈನಿಕ, ನವೋದಯ, ಮೂರಾರ್ಜಿ ಶಾಲೆಗಳಿಗೆ ವಿದ್ಯಾರ್ಥಿಗಳು ಆಯ್ಕೆಯಾಗುವುದರ ಮೂಲಕ ದಾಖಲೆ ಬರೆದಿದ್ದಾರೆ.
ಯಾವುದಾದರು ಕೋಚಿಂಗ್ ಸೆಂಟರ್ ನಲ್ಲಿ ಮಕ್ಕಳು ಯಾವುದಾದರೊಂದು ವಿಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ರ್‍ಯಾಂಕ್ ಗಳಿಸುವುದೆ ಕಷ್ಟವಾಗಿರುವಾಗ ಇಂತಹ ಕಠಿಣ ಸವಾಲನ್ನು ಸ್ವೀಕರಿಸಿದ ಯೋಗಿ ಟಾಪಸ್೯ ವಿದ್ಯಾರ್ಥಿಗಳು 2022-23 ನೆ ಸಾಲಿನಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪರೀಕ್ಷೆಗಳಾದ
•• ಆಲ್ ಇಂಡಿಯಾ ಸೈನಿಕ್ ಸ್ಕೂಲ್ಸ್ ಎಂಟರೆನ್ಸ್ ಎಕ್ಸಮ್ (AISSEE)
•• ಜವಹಾರ ವಿದ್ಯಾ ನವೋದಯ (JNV)
•• ಮೂರಾರ್ಜಿ ದೇಸಾಯಿ ಪರೀಕ್ಷೆ
ಮೇಲಿನ ಮೂರು ವಿಭಾಗಗಳಲ್ಲಿಯು ಆಯ್ಕೆಯಾಗುವುದರೊಂದಿಗೆ ವಿಶೇಷ ದಾಖಲೆ ಸೃಷ್ಟಿಸಿದ್ದಾರೆ.

ಯಾವುದೇ ಸಾಧನೆಗಳು ಸುಲಭ ಸಾದ್ಯವಲ್ಲ ಅದಕ್ಕೆ ಹೆಚ್ಚಿನ ಶಿಸ್ತು ಪರಿಶ್ರಮ ಮಾರ್ಗದರ್ಶನ ಬಹುಮುಖ್ಯ ಅದು ಸಾದ್ಯವಾಗಿದ್ದು ” ಅಂತರಾಷ್ಟ್ರೀಯ ಗುಣಮಟ್ಟದ ಕೋಚಿಂಗ್ ಟ್ರೈನರ್ ಯೋಗೆಶ್ ಶಾನಬಾಗ್ ಮತ್ತು ಕ್ರಿಯಾಶೀಲ ತಂಡದ ಪರಿಶ್ರಮ ಇದಕ್ಕೆಲ್ಲಾ ಕಾರಣೀಕರ್ತರಾಗಿದ್ದಾರೆ.

ಸೈನಿಕ್ ಸ್ಕೂಲ್ -ಗುಜರಾತ್ ಶಾಲೆಗೆ ಆಯ್ಕೆ


ಯೋಗಿತಾ ಶರಣಪ್ಪ ಬೇವಿನಕಟ್ಟಿ
ಶಶಾಂಕ್.ಡಿ ಚಂದ್ರೆಗೌಡ,ಕಿರವತ್ತಿ
ನವೋದಯ ಮಳಗಿ ಶಾಲೆಗೆ ಆಯ್ಕೆ

1) ಶ್ರೀಪ್ರಭಾ ಪ್ರಸನ್ನ ಭಾಗವತ್ :- ಶಿರಸಿ , ಕಲ್ಲಿ
2) ಸಮನ್ವಿ ನಾಯ್ಕ್ :- ಶಿರಸಿ, ಕಲ್ಲಿ
3) ಪ್ರಥ್ವಿ ಉಮೇಶ್ ಬಾಂದೆಕರ:- ಯಲ್ಲಾಪುರ
4) ಶಾಲುನ್ಯ ಭೋವಿವಡ್ಡರ, ಯಲ್ಲಾಪುರ
5) ರಕ್ಷಿತಾ ರಾಠೋಡ್:- ಅಂಕೋಲಾ
6) ಆದಿತ್ಯ ಪಾಟನಕರ :- ಶಿರಸಿ
ಮೂರಾರ್ಜಿ ದೇಸಾಯಿ ಶಾಲೆಗೆ ಆಯ್ಕೆ
ಇಷ್ಟೆಲ್ಲಾ ಸಾಧನೆ ಅಷ್ಟು ಸುಲಭದ ಮಾತಲ್ಲ ಮಕ್ಕಳನ್ನು ಪೋಷಕರಿಗಿಂತ ಹೆಚ್ಚು ಜವಾಬ್ದಾರಿಯಿಂದ ತರಭೇತಿ ನೀಡಿ ಮಕ್ಕಳ ಮನಸ್ಸಿನ ಮಟ್ಟ ಜ್ಞಾನರ್ಜನೆಯ ಗುಣಮಟ್ಡ ಅರಿತು ಅದಕ್ಕೆ ತಕ್ಕನಾದ ತೆರದಲ್ಲಿ ತಪಸ್ಸಿನ ರೂಪದಲ್ಲಿ ವಿದ್ಯಾರ್ಥಿಗಳನ್ನು ಸವಾಲಿಗೆ ಸುದ್ದಪಡಿಸುವ ಬದ್ದತೆ ತೋರುವ ಯೋಗೇಶ್ ಶಾನಬಾಗ್ ಅವರ ನಿರಂತರ ಪ್ರಯತ್ನ ತಪಸ್ಸಿನ ಫಲವೆ ಪ್ರತಿ ವರ್ಷ ಸಾಧನೆಯ ಮುತ್ತುಗಳು ಕೋಚಿಂಗ್ ಸೆಂಟರ್ ನಿಂದ ಸಮಾಜಕ್ಕೆ ಮತ್ತು ಪೋಷಕರ ಮಡಿಲಿಗೆ ನೀಡುವ ಕಾರ್ಯವಾಗುತ್ತಿದೆ.

ಯೋಗೇಶ್ ಶಾನಬಾಗ್ ಅವರ ಕೋಚಿಂಗ್ ವಿಶೇಷತೆಗಳೆಂದರೆ
1) ತಮ್ಮದೇ ವಿಭಿನ್ನ ಶೈಲಿಯಲ್ಲಿ ಮಕ್ಕಳಿಗೆ ನಕ್ಕು ನಲಿಸುತ್ತ ಗಣಿತವನ್ನು ಕಲಿಸುವುದು.
2) ನವೋದಯದ ಪಠ್ಯ ಕಲಿಸುತ್ತಲೇ, ಮುಂದಿನ ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಾದ UPSC, KAS ಮತ್ತು IAS ಪರೀಕ್ಷೆ ಗಳಿಗೆ ಮಕ್ಕಳಿಗೆ ಹುರಿದುಂಬಿಸುವುದು
3) ಕಠಿಣ ಗಣಿತವನ್ನು ಟ್ರಿಕ್ಸ್ ಮುಖಾಂತರ ಮಕ್ಕಳಿಗೆ ಅರ್ಥ ಮಾಡಿಸುವುದು
4) ಮಕ್ಕಳಿಗೆ ಸ್ಟೇಜ್ ಫಿಯರ್ ತೆಗೆಯುವುದು
5) ಪ್ರೀತಿಯಿಂದ, ಆತ್ಮವಿಶ್ವಾಸ ತುಂಬುತ್ತಾ ಕಲಿಸುವುದು
6) ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತ ಅವರಿಗೆ ಕಲಿಕೆ ಸರಳ ಮಾಡುವುದು
7) ಪಾಲಕರಿಗೆ ಹೊರೆ ಆಗದಂತೆ ಕಡಿಮೆ ಫೀಸ್ ನಲ್ಲಿ ಕಲಿಕೆ
ಹೈಟೆಕ್ ನಗರಗಳಲ್ಲಿ ಇರಬೇಕಾದ ಕೋಚಿಂಗ್ ಸೆಂಟರ್.ಲಕ್ಷ ಲಕ್ಷ ಹಣ ಗಳಿಸಬಹುದಾದ ಸಾದ್ಯತೆ ಇರುವ ಕೋಚಿಂಗ್ ಗುಣಮಟ್ಟ. ಅಂತರಾಷ್ಟ್ರೀಯ ಟ್ರೈನರ್ ಆಗಿ ದೇಶವಿದೇಶ ಸುತ್ತುತ್ತ ಹಣ ಗಳಿಸಬಹುದಾದ ಮಾರ್ಗ ಇದ್ದರು ತನ್ನೂರಿನ ಮಕ್ಕಳಿಗೆ ತನ್ನಿಂದಾಗುವ ಸೇವೆಯನ್ನು ಕನಿಷ್ಟಮಟ್ಟದ ಶುಲ್ಕದೊಂದಿಗೆ ನಡೆಸುತ್ತಿರುವುದು ಗಮನಾರ್ಹ ಸಂಗತಿ ಮತ್ತು ಅಭಿನಂದನೆಗೆ ಅರ್ಹ ವ್ಯಕ್ತಿತ್ವವಾಗಿದೆ.

ಈಬಾರಿ ಇನ್ನೂ ಹೊಸ ಪ್ರಯೋಗದೊಂದಿಗೆ
ನವೋದಯ, ಸೈನಿಕ್ ಮತ್ತು ಮೂರಾರ್ಜಿ ಗೆ ವೀಕೆಂಡ್ ತರಗತಿಗಳ ಜೊತೆಗೆ ಪರ್ಸನಲ್ ಕೋಚಿಂಗ್ ಕೂಡ ಹಮ್ಮಿಕೊಳ್ಳಲಾಗಿದೆ.
ಪ್ರಸ್ತುತ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ರ‍್ಯಾಂಕ್ ಸಂಪಾದಿಸಿ ಆಯ್ಕೆಯಾಗುದು ಕಷ್ಟದಾಯಕವಾಗಿದೆ.
ಪ್ರತಿ ವರ್ಷ ನವೋದಯ ಪರೀಕ್ಷೆಗೆ 25 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ.
ಉತ್ತರಕನ್ನಡ ಜಿಲ್ಲೆಯಾದ್ಯಂತ 5000 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಅದರಲ್ಲಿ ಕೇವಲ 80 ಮಕ್ಕಳು ಮಾತ್ರ ಉಚಿತ ಸೀಟ್ ಗಿಟ್ಟಿಸಿಕೊಳ್ಳುತ್ತಾರೆ.
ಸುಮಾರು 2 ಲಕ್ಷ ವಿದ್ಯಾರ್ಥಿಗಳು ಸೈನಿಕ್ ಪರೀಕ್ಷಗೆ ಕುಳಿತುಕೊಳ್ಳುತ್ತಾರೆ
ಅಲ್ಲದೆ ಸಹಸ್ರಾರು ಮಂದಿ ವಿದ್ಯಾರ್ಥಿಗಳು ಮೂರಾರ್ಜಿ ಪರೀಕ್ಷೆ ಬರೆಯುತ್ತಾರೆ ಅಂತವರ ಮದ್ಯದಲ್ಲಿ ಪ್ರಬಲವಾದ ಪೈಪೋಟಿ ನೀಡಿ ಗೆಲ್ಲುವುದೆಂದರೆ ನಿಜವಾದ ಸಾಧನೆಯಾಗಿದೆ.
ರಾಷ್ಟ್ರಮಟ್ಟದ ಮೈಂಡ್ ಟ್ರೈನರ್ ಆಗಿರುವ ಯೋಗೇಶ್ ಶಾನಭಾಗ ಸಾಧನೆಗಳು :-
ಕಳೆದ 4 ವರ್ಷಗಳಲ್ಲಿ ಯೋಗಿ ಟಾಪ್ಪರ್ಸ್ ವತಿಯಿಂದ 14 ಜನರು ನವೋದಯ ಕ್ಕೆ ಸೆಲೆಕ್ಟ್ ಆಗಿದ್ದು 27 ಜನರು ಮೂರಾರ್ಜಿಗೆ ಆಯ್ಕೆ ಆಗಿದ್ದು 2023 ರಲ್ಲಿ ನವೋದಯ, ಸೈನಿಕ ಮತ್ತು ಮೂರಾರ್ಜಿ ಮೂರೂ ವಿಭಾಗಗಳಲ್ಲಿ ಆಯ್ಕೆ ಆಗಿ ದಾಖಲೆ ಸೃಷ್ಟಿಸಿದ್ದಾರೆ
ಯಲ್ಲಾಪುರ ದಂತಹ ಸಣ್ಣ ತಾಲೂಕು ಕೇಂದ್ರದಲ್ಲಿ ದೇಶಕ್ಕೆ ಉತ್ತಮೋತ್ತಮ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿರುವ ” ಯೋಗಿ ಟಾಪ್ಪಸ್೯ ಕೋಚಿಂಗ್ ಸೆಂಟರ್” ಯಲ್ಲಾಪುರ ನೆಲದ ವಿದ್ಯಾ ಕ್ಷೇತ್ರದ ಹೆಮ್ಮೆಯ ಪ್ರತೀಕವಾಗಿದೆ.
ಬನ್ನಿ ಮತ್ತೇಕೆ ತಡ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಂಪರ್ಕಸಿ ನಿಮ್ಮ ಮಕ್ಕಳ ಬಂಗಾರದ ಭವಿಷ್ಯ ರೂಪಿಸಿ ನಿಮ್ಮ ಮೊದಲ ಆಯ್ಕೆ ಯೋಗಿ ಟಾಪ್ಪಸ್೯ ಆಗಿರಲಿ.

Prathidvani Yellapura