Breaking News

ಯಲ್ಲಾಪುರದ ಇಳೆಗೆ ಮಳೆಯ ಸ್ಪರ್ಷ ಭೂರಮೆಯ ಹಸಿರಿಗೆ ಎಲ್ಲಿಲ್ಲದ ಹರ್ಷ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ಪಟ್ಟಣದಲ್ಲಿ ಮಂಗಳವಾರ ಮದ್ಯಾಹ್ನದ ವೇಳೆಗೆ ಗುಡುಗು ಸಿಡಿಲಿನ ಸಹಿತ ಮಳೆ ಸುರಿದಿದ್ದು ಕಾದು ಕೆಂಡವಾಗಿದ್ದ ಭೂಮಿಗೆ ತಂಪೆರೆದಂತಾಗಿದೆ.


ಪಟ್ಟಣದಲ್ಲಿ ಮಂಗಳವಾರ ಮೋಡಕವಿದ ವಾತಾವರಣವಿದ್ದು ಆಗಾಗ ಗುಡುಗಿನ ಸದ್ದು ಕೇಳಿಸುತ್ತಿತ್ತು.2 ಗಂಟೆ ಸುಮಾರಿಗೆ ಸಿಡಿಲು ಗುಡುಗು ಜೋರಾಗುತ್ತಲೆ ಮಳೆ ಜೋರಾಗಿ ಧರೆಗಿಳಿಯಿತು. ಭೂಮಿಗೆ ಬಿದ್ದ ಈ ವರ್ಷದ ಮೊದಲ ಮಳೆ ಇದಾಗಿದ್ದು ಮಣ್ಣಿನ ಸುವಾಸನೆ ಕೆಲಕಾಲ ಜನರನ್ನ ಮಂತ್ರಮುಗ್ದವಾಗಿಸಿತ್ತು.

ಒಣಗಿ ಬಾಯ್ಬಿಟ್ಟ ಗಿಡಮರಗಳಲ್ಲಿ ಹಸಿರು ಜೀವ ನಕ್ಕು ನಲಿದಂತೆ ಕಂಡುಬಂತು.
ಒಟ್ಟಿನಲ್ಲಿ ಯುಗಾದಿ ಹೊಸ್ತಿಲಲ್ಲಿ ಮಳೆ ಭೂಮಿಗೆ ಸ್ಪರ್ಷಿಸುವುದು ವಾಡಿಕೆ ಅದರಂತೆ ಮಳೆ ಇಳೆಗೆ ತಂಪೆರೆದಿದೆ ಇದರಿಂದ ಕೆಲವು ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಪ್ಪಿಸುತ್ತದೆ ಎಂಬುದಾಗಿದ್ದು ಮಳೆಯ ಆಗಮನ ಶುಭಪ್ರದವಾದಂತಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *