Breaking News

ಅಭ್ಯರ್ಥಿಗಳು ಸೊಸೈಟಿ ಚುನಾವಣೆ ಎದುರಿಸಿದರೆ ಸಾಲದು ಮತ ಪೆಟ್ಟಿಗೆ ಕಾಯಲು ಸಿದ್ದರಿರಬೇಕು..ಪಾಳಿ ಪ್ರಕಾರ..!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ಕಳೆದ ಕೆಲವು ದಿನಗಳ ಹಿಂದೆ ಯಲ್ಲಾಪುರ ತಾಲೂಕಿನ ಆನಗೋಡು ಮತ್ತು ಎಲ್.ಎಸ್.ಎಂ.ಪಿ ಸೊಸೈಟಿ ಚುನಾವಣೆ ನಡೆದಿತ್ತು ಅದರಲ್ಲಿ ಕೆಲವರು ತಮ್ಮ ಮತಗಳನ್ನು ಮಾನ್ಯ ಮಾಡುವಂತೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೆ ಚುನಾವಣೆ ನಡೆದಿದೆ ನ್ಯಾಯಾಲಯದ ಮೆಟ್ಟಿಲು ಹತ್ತಿದ ಸದಸ್ಯರಿಗು ಮತ ಚಲಾಯಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು ಆದರೆ ಆ ಮತಗಳು ಸೇರಿದಂತೆ ಎಣಿಕೆ ನಡೆಯದೆ ಮತ ಪೆಟ್ಟಿಗೆಗಳನ್ನು ಯಲ್ಲಾಪುರದ ಉಪ ಖಜಾನೆಯಲ್ಲಿ ಇಡಲಾಗಿದೆ.

ಮತಪೆಟ್ಟಿಗೆ ಇಟ್ಡಿರುವ ಉಪ ಖಜಾನೆ ಕಚೇರಿ ಹೊರಗೆ ಹಗಲು ಕಾಯುತ್ತಿರುವುದು
ಉಪ ಖಜಾನೆ ಕಚೇರಿ ಮುಂಬಾಗ ರಾತ್ರಿ ವೇಳೆಯಲ್ಲಿ ಕಾವಲು ಕಾಯುತ್ತಿರುವುದು.

ಸ್ವಾರಸ್ಯ ಎಂದರೆ ಚುನಾವಣೆ ನಡೆದ ದಿನದಿಂದ ಪಾಳಿ ಪ್ರಕಾರದಲ್ಲಿ ಮತ ಪೆಟ್ಟಿಗೆಗಳನ್ನು ಅಭ್ಯರ್ಥಿಗಳ ಪರವಾಗಿ ಕಾಯುತ್ತಿರುವ ವಿಷಯ ಅತ್ಯಂತ ಕುತೂಹಲ ಕೆರಳಿಸಿದೆ.
ಇದೇ ಪ್ರಕರಣದ ವಿಚಾರಣೆ ಜೂ, 26 ರಂದು ಅಂದರೆ ಇಂದು ನಡೆಯಲಿದ್ದು ನ್ಯಾಯಾಲಯದ ಆದೇಶದಂತೆ ಮುಂದಿನ ಪ್ರಕ್ರಿಯೆ ಜರುಗಲಿದೆ. ನ್ಯಾಯಸ್ಥಾನ ಈ ವಿಚಾರವನ್ನು ಇನ್ನಷ್ಟು ದಿನ ಮುಂದೂಡಿದರೆ ಉಪ ಖಜಾನೆ ಬಳಿ ಮತಪೆಟ್ಟಿಗೆ ಕಾಯುವ ಸರಪಳಿ ಸೇವೆ ಮತ್ತೆ ಮುಂದುವರೆಯಲಿದೆ.


ಹಗಲು ರಾತ್ರಿ ಮತಪೆಟ್ಟಿಗೆ ಕಾಯಲು ಪೊಲೀಸರು ಇದ್ದರು ಇವರ ಸರ್ಪಗಾವಲು ಇರುವುದಕ್ಕು ಬಲವಾದ ಕಾರಣವಿದೆ. ಸೊಸೈಟಿ ಚುನಾವಣೆಗಳು ಲೋಕಸಭೆ,ವಿಧಾನಸಭೆ ಚುನಾವಣೆಗಳಿಗಿಂತ ಪ್ರತಿಷ್ಟೆಯ ಕಣವಾಗಿ ಮಾರ್ಪಟ್ಟಿದೆ. ಆನಗೋಡು ಸೊಸೈಟಿಗೆ ನಾರಾಯಣ ಭಟ್ಟ ಅಗ್ಗಾಶಿ ಕುಂಬ್ರಿ ತಂಡಕ್ಕು ಶಾಸಕ ಹೆಬ್ಬಾರ್ ಬೆಂಬಲಿತರ ತಂಡದ ನಡುವೆ ಪೈಪೋಟಿ ಏರ್ಪಟ್ಟಿದೆ. ಪಟ್ಟಣದ ಎಲ್ಎಸ್ಎಂಪಿ ಸೊಸೈಟಿಗೆ ನಾಗರಾಜ್ ಕವಡಿಕೆರೆ ತಂಡಕ್ಕು ಹೆಬ್ಬಾರ್ ಬೆಂಬಲಿತ ತಂಡಕ್ಕು ಪೈಪೋಟಿ ಇದೆ. ಇದೇ ಕಾರಣಕ್ಕಾಗಿ ಶಾಸಕರ ಬೆಂಬಲಿತರಿಂದ ಮತ ಪೆಟ್ಟಿಗೆಯಲ್ಲಿ ಬದಲಾವಣೆ ಆಗಿಬಿಡಬಹುದೇನೊ ಎಂಬ ಗುಮಾನಿಯಿಂದ ಪಾಳಿಯ ಪ್ರಕಾರ ಕಾವಲು ಕಾಯುತ್ತಿದ್ದಾರೆ
ಪಲಿತಾಂಶ ಹೊರ ಬಂದಮೇಲೆ ಕಾವಲು‌ ಕಾದಿದ್ದು ಅರ್ಥವೊ ವ್ಯರ್ಥವೊ ತಿಳಿಯುವುದು. ಅಂತು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿರುವುದಂತು ಪಟ್ಟಣಾದಾದ್ಯಂತ ಕುತುಹಲ ಮೂಡಿಸಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *