
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ……
ಪ್ರತಿಧ್ವನಿ, ಯಲ್ಲಾಪುರ:ಬರಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಗಟಾನುಗಟಿಗಳು ಆರ್ಥಿಕವಾಗಿ ಸಬಲರಾಗಿರುವವರ ಮುಂದೆ ಜೆಡಿಎಸ್ ಸೆಣಸಾಡಿ ಗೆಲುವು ಸಾಧಿಸುವುದು ಸುಲಭದ ಮಾತಲ್ಲ ಆದರು ಡಾ,ನಾಗೇಶ್ ನಾಯ್ಕ ಕಾಗಾಲ ಅವರು ಮಾಜಿ ಮುಖ್ಯಮಂತ್ರಿ ಹೆಚ್,ಡಿ ಕುಮಾರಸ್ವಾಮಿಯವರ ಜನಪರ ಯೋಜನೆಗಳನ್ನೆ ಶ್ರೀರಕ್ಷೆಯಾಗಿಸಿಕೊಂಡು ಕಣಕ್ಕಿಳಿಯುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಜಿ.ಕೆ.ಪಟಗಾರ್ ಹೇಳಿದರು.
ಅವರು ಪಟ್ಟಣದ ದಾವುದ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಜೆಡಿಎಸ್ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.

ಬರಲಿರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಸರ್ಕಾರ ರಚಿಸುವುದು ಶತಸಿದ್ದ ಅದಕ್ಕೆ ರಾಜ್ಯದ ಜನರ ನಾಡಿಮಿಡಿತ ಅರ್ಥವಾಗುತ್ತಿದೆ. ಜನತಾಜಲಧಾರೆ, ಪಂಚರತ್ನ ಯೋಜನೆಗಳು ಜನರಿಗಾಗಿಯೆ ರೂಪಿಸಿರುವುದು ಜನರ ಒಲವು ಜನತಾದಳದ ಪರವಾಗಿದೆ. ಭವಿಷ್ಯದ ಅಭಿವೃದ್ಧಿ ಕರ್ನಾಟಕಕ್ಕಾಗಿ ಜನತಾದಳ ಬೆಂಬಲಿಸಿ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜನತಾದಳ ಸಂಭವನೀಯ ಅಭ್ಯರ್ಥಿ ರಾಜ್ಯ ಪ್ರಧಾನಕಾರ್ಯದರ್ಶಿ ಡಾ,ನಾಗೇಶ್ ನಾಯ್ಕ ಕಾಗಾಲ ಹೇಳಿದರು.

ಜಿಲ್ಲಾ ಜನತಾದಳ ಹಿಂದುಳಿದ ವಿಭಾಗದ ಪ್ರಮುಖ ರಮೇಶ್ ನಾಯ್ಕ ಕರ್ಕಿ ಮಾತನಾಡಿ ಅಭಿವೃದ್ಧಿ ಪಥಕ್ಕೆ ಅನುವಾಗುವಂತೆ ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಅದಕ್ಕೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಗೇಶ್ ನಾಯ್ಕ್ ಅವರ ಗೆಲುವಿಗೆ ಶ್ರಮಿಸಬೇಕಿದೆ. ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಪ್ರಮುಖರಾದ ಸತೀಶ್ ಮಾನೆ, ಬಲೀಂದ್ರ ಗೌಡ, ರಜಾಕ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬೆನಿತ್ ಸಿದ್ದಿ, ಸೋಮೇಶ್ವರ ಗೌಡ, ಅಜರ್, ಜಾನ್ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
Prathidvani Yellapura