




ಪ್ರತಿಧ್ವನಿ ಯಲ್ಲಾಪುರ : ತಾಲೂಕು ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎಸ್.ಟಿ ಭಟ್ಟ ಅಂಗಾಂಗದಾನ ಮಾಡುವ ದೃಡ ನಿರ್ಧಾರ ಕೈಗೊಂಡು ಇತರರಿಗೆ ಮಾದರಿಯಾಗಿದ್ದಾರೆ.

ನಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಜೀವನದ ಮಹತ್ತರ ಉಡುಗೊರೆಯನ್ನು ಬೇರೆಯವರಿಗೆ ನೀಡಬಹುದಾಗಿದೆ.

ನೇತ್ರದಾನ ಮತ್ತು ಅಂಗದಾನದ ಮೂಲಕ ಒಬ್ಬ ಅಂಗಾಂಗ ದಾನಿ ಏಳು ಜೀವಗಳನ್ನು ಉಳಿಸಬಹುದಾಗಿದೆ. ಹೃದಯ, ಮೇದೋಜೀರಕ ಗ್ರಂಥಿ, ಯಕೃತ್ , ಮೂತ್ರಪಿಂಡ ಮತ್ತು ಶ್ವಾಸಕೋಶಗಳನ್ನು ದಾನ ಮಾಡಬಹುದಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ದಾನಿಯ ಮರಣಾನಂತರ ಅಂಗಾಂಗ ನೀಡಲಾಗುತ್ತದೆ. ಆದರೆ ಕೆಲವು ಅಂಗಾಂಗಳನ್ನು ದಾನಿಗಳು ಜೀವಂತವಿರುವಾಗ ದಾನ ಮಾಡಬಹುದಾಗಿದೆ. ಇದು ಸ್ವಯಂ ಪ್ರೇರಿತವಾಗಿದ್ದು ಯಾವುದೇ ಒತ್ತಡವಿರುವುದಿಲ್ಲ. ಅಂಗಾಂಗದಾನದ ಪ್ರತಿಜ್ಞೆಯನ್ನು ಈಗ ಸುಲಭಗೊಳಿಸಿದ್ದು https://notto.abdm.gov.in ಗೆ ಲಾಗಿನ್ ಆಗುವ ಮೂಲಕ ಸ್ವಯಂಪ್ರೇರಿತರಾಗಿ ಅಂಗಾಂಗದಾನದ ಪ್ರತಿಜ್ಞೆ ಮಾಡಬಹುದಾಗಿದೆ ಎಂದು ಅಂಗಾಂಗದಾನದ ಪ್ರತಿಜ್ಞೆ ಮಾಡಿರುವ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ ಭಟ್ಟ ತಿಳಿಸಿದ್ದಾರೆ.




Prathidvani Yellapura