
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತ ವ್ಯಾಪ್ತಿ ಹಾಗೂ ಚಂದಗುಳಿ ಪಂಚಾಯತ ವ್ಯಾಪ್ತಿಯ 60 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ರಾಘವೇಂದ್ರ ಭಟ್ಟ ನೇತೃತ್ವದಲ್ಲಿ ವಿ.ಎಸ್.ಪಾಟೀಲ ಸಮ್ಮುಖದಲ್ಲಿ ಮುಂಡಗೋಡದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.



ಕಿರವತ್ತಿ ಗ್ರಾ.ಪಂ ವ್ಯಾಪ್ತಿಯ ಬೈಲಂದೂರು ಗ್ರಾಮದ 25 ಕ್ಕೂ ಅಧಿಕ , ಯಲವಳ್ಳಿ ಗ್ರಾಮದ 20 ಕ್ಕೂ ಹೆಚ್ಚು, ಚಂದಗುಳಿ ಪಂಚಾಯತ ವ್ಯಾಪ್ತಿಯ ರಾಮನಕೊಪ್ಪ ವ್ಯಾಪ್ತಿಯ 15 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. ಕಿರವತ್ತಿ ಗ್ರಾ.ಪಂ ಸದಸ್ಯೆ ನಯನಾ ಬಾಬು ಶೆಂಡಗೆ, ಅವರ ಪತಿ ಬಾಬು ಶೆಂಡಗೆ, ಲಕ್ಕೀಬಾಯಿ ಬಾಗು ಪಟಕಾರೆ , ಪತಿ ಬಾಗು ಪಟಕಾರೆ , ಗ್ರಾ.ಪಂ ಸದಸ್ಯ ಜಾನು ಸೋನು ಪಾಂಡ್ರಮಿಶೆ ಹಾಗೂ ಸುನಿಲ್ ಕಾಂಬ್ಳೆ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ದಿನದಿಂದ ಪಕ್ಷದಿಂದ ಪಕ್ಕಕ್ಕೆ ಹಾರುವ ಪ್ರಕ್ರಿಯೆ ಸರ್ವೇ ಸಾಮಾನ್ಯವಾಗಿದ್ದು ಕಾಂಗ್ರೆಸ್ನಿಂದ ಬಿಜೆಪಿಗೆ, ಬಿಜೆಪಿಯಿಂದ ಕಾಂಗ್ರೆಸ್ ಅಥವಾ ಜೆಡಿಎಸ್ಗೆ ಕಾರ್ಯಕರ್ತರ ವಲಸೆ ಪ್ರತಿನಿತ್ಯ ಸಾಗಿದೆ. ವ್ಯಕ್ತಿಯನ್ನು ಅಭಿಮಾನಿಸುತ್ತಿದ್ದವರು ನಮ್ಮ ನಾಯಕ ಹೋಗಿರುವುದರಿಂದ ನಾವೂ ಹೋಗುತ್ತಿದ್ದೇವೆ ಎನ್ನುವವರೂ ಇದ್ದಾರೆ. ಪಕ್ಷದ ತತ್ವ ಸಿದ್ಧಾಂತಗಳಿಗೆ ಒಪ್ಪಿ ಹೋಗುವವರೂ ಇದ್ದಾರೆ. ಒಟ್ಟಿನಲ್ಲಿ ಚುನಾವಣೆಯ ಹೊಸ್ತಿಲಿನಲ್ಲಿ ಈ ಪ್ರಕ್ರಿಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
Prathidvani Yellapura