Breaking News

ಭಕ್ತಿ ಸಂಭ್ರಮಕ್ಕೆ ಸಾಕ್ಷಿಯಾದ ” ಯಲ್ಲಾಪುರ ಯುಗಾದಿ ಉತ್ಸವ “

ಜನಸಾಗರದ ನಡುವೆ ವಿಜ್ರಂಭಣೆಯಿಂದ ಜರುಗಿದ ಯಲ್ಲಾಪುರ ಯುಗಾದಿ ಉತ್ಸವದ ಶೋಭಾಯಾತ್ರೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ….

ಪ್ರತಿಧ್ವನಿ, ಯಲ್ಲಾಪುರ : ಹಿಂದೂಗಳ ಹೊಸ ವರ್ಷಾಚರಣೆ ಆರಂಭವಾಗುವುದು ಯುಗಾದಿಯಿಂದ. ಹೊಸ ಸಂವತ್ಸರದೊಂದಿಗೆ ಪ್ರಾರಂಭವಾಗುವ ಹೊಸ ವರ್ಷ ಯಲ್ಲಾಪುರದಲ್ಲಿ ಅತ್ಯಂತ ಸಂಭ್ರಮ ಸಡಗರ, ವಿಜೃಂಬಣೆಯಿಂದ ಆಚರಿಸಲಾಗುತ್ತದೆ.
ಯುಗಾದಿಗೂ ಮುನ್ನಾ ಉತ್ಸವದ ಸಂಭ್ರಮಕ್ಕೆ ಬೈಕ್ ರ‍್ಯಾಲಿ ಜಾಗೃತಿ ಮೂಡಿಸುತ್ತದೆ. ನಂತರ ಯುಗಾದಿಯಂದು ಭವ್ಯ ಶೋಭಾಯಾತ್ರೆ ಆಯೋಜಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಂಚಾಂಗ ಪಠಣದೊಂದಿಗೆ ಮುಕ್ತಾಯ ಕಾಣುತ್ತದೆ. ಅದರಂತೆ ಈ ವರ್ಷದ ಯುಗಾದಿಯನ್ನು ಕಳೆದೆರಡು ಕೋವಿಡ್ ವರ್ಷಗಳ ಯುಗಾದಿಗಿಂತ ವಿಜೃಂಬಣೆಯಿಂದ ಆಚರಿಸಲಾಯಿತು.

ಯುಗಾದಿ ಉತ್ಸವದ ಶೋಭಾಯಾತ್ರೆಗೆ ಕುಂಬಳಕಾಯಿ ಒಡೆಯುವ ಮೂಲಕ ಶುಭ ಚಾಲನೆ ನೀಡಿದ ಸಚಿವ ಹೆಬ್ಬಾರ್

ವಿಶೇಷವಾದ ಸ್ತಬ್ಧ ಚಿತ್ರಗಳ ಮೆರವಣಿಗೆ ಶೋಭಾಯಾತ್ರೆಗೆ ಕಳೆ ತಂದಿತ್ತು. ಅದರಲ್ಲೂ ತಿಲಕ್‌ಚೌಕದ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಿತು.

ಯುಗಾದಿ ಉತ್ಸವದ ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಯಾದ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನದ ತದ್ರೂಪ ಸ್ಥಬ್ದ ಚಿತ್ರ


ದಿ. ಡಾ. ಪುನೀತ್‌ರಾಜಕುಮಾರ್ ಮತ್ತು ರಾಜ್ ಬಿ ಶೆಟ್ಟಿ ತದ್ರೂಪಿಗಳು ಮೆರವಣಿಗೆಯ ಅಂದ ಹೆಚ್ಚಿಸಿದರು.

ಶೋಭಾ ಯಾತ್ರೆಯಲ್ಲಿ ನೋಡುಗರ ಗಮನ ಸೆಳೆದ ಜೂ. ಪುನಿತ್ ರಾಜಕುಮಾರ್

ತ್ರಿಶೂಲದ ಮೇಲೆ ಕುಳಿತ ಶಿವನ ಪಾತ್ರಧಾರಿ ನೋಡುಗರ ಮೆಚ್ಚುಗೆಗೆ ಪಾತ್ರರಾದರು.

ತ್ರಿಶೂಲದ ಮೇಲೆ ಆಸಿನನಾದ ಮುಕ್ಕಣ್ಣ ಪರಮೇಶ್ವರ

ಅರ್ಧನಾರೀಶ್ವರನ ಪಾತ್ರದಲ್ಲಿ ಗಿರೀಶ್ ಪೈ ಮಿಂಚಿದರು. ಇನ್ನುಳಿದಂತೆ ಮಿಕ್ಕಿ ಮೌಸ್‌ಗಳ ಮಧ್ಯೆ ಶಿವನು ಕುಳಿತ ದೃಶ್ಯ ವಿಶೇಷವೆನಿಸಿತ್ತು. ಅಪ್ಪುವಿನ ಫೋಟೋ ಹೊತ್ತ ಶಿವಾಜಿಯ ಮೂರ್ತಿಯು ಮೆರವಣಿಗೆಯಲ್ಲಿತ್ತು.

ಪರಶಿವನ ಅರ್ಧನಾರೀಶ್ವರ ಪಾತ್ರದಲ್ಲಿ ಮಿಂಚಿದ ಅಲಂಕಾರಿಕ ಕಲಾವಿದರಾದ ಗಿರೀಶ್ ಪೈ
ಮಿಕ್ಕಿಮೌಸ್ ಗೊಂಬೆಗಳ ನಡುವೆ ಪರಮೇಶ್ವರ ಕುಳಿತ ವಿಶೇಷ ದೃಶ್ಯ
ಆಂಜನೇಯನ ಭಾವಚಿತ್ರದಡಿ ವಿರಾಜಮಾನರಾದ ಹಿಂದು ಹೃದಯ ಸಾಮ್ರಾಟ ಶಿವಾಜಿ ಮಹಾರಾಜ ಅಷ್ಟೇ ಶ್ರೇಷ್ಠ ಸ್ಥಾನಗಳಿಸಿ ಕನ್ನಡಿಗರ ಹೃದಯ ಸಾಮ್ರಾಟನಾದ ಪುನಿತ್ ರಾಜ್ ಕುಮಾರ್ ಭಾವಚಿತ್ರ


ಕುಂದಾಪುರದಿAದ ಆಗಮಿಸಿದ ಭಜನಾ ತಂಡ ಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿ ಆದ್ಯಾತ್ಮ ವಾತಾವರಣ ಸೃಷ್ಟಿ ಮಾಡಿತ್ತು. ಚಂಡೆಯ ಸದ್ದು , ಅಂಕೋಲಾ ಝಾಂಜ್ ಶಬ್ಧಕ್ಕೆ ಮಹಿಳೆಯರು ಮಕ್ಕಳು ಹೆಜ್ಜೆ ಹಾಕಿದರು.

ಶೋಭಾಯಾತ್ರೆಗೆ ಆಧ್ಯಾತ್ಮ ಲೇಪನ ನೀಡಿದ ಕುಂದಾಪುರ ಭಜನಾ ತಂಡದವರ ನೃತ್ಯ ಸಹಿತ ಭಜನೆ
ದೈವಕಲೆ ಎಂದೇ ಹೆಸರಾದ ಯಕ್ಷಗಾನ ವೇಷಧಾರಿಗಳಾಗಿ ಕಂಡು ಬಂದ ಸ್ಥಳೀಯ ಯುವಕರು
ಅಂಕೋಲಾ ಯುವಕರ ಜಾಂಜ್ ವೈಭವ
ಯುಗಾದಿ ಉತ್ಸವದ ಶೋಭಾಯಾತ್ರೆಯಲ್ಲಿ ಚಂಡೆವಾದನ ಆಲಿಸಿದ ಸಚಿವ ಶಿವರಾಮ್ ಹೆಬ್ಬಾರ್

ಕಾಲ ಬದಲಾದಂತೆ ಯಾತ್ರೆಗಳ ಸ್ವರೂಪವೂ ಬದಲಾಗುತ್ತಾ ಸಾಗಿದೆ. ಅದಕ್ಕೆ ಉದಾಹರಣೆ ಎಂಬಂತೆ ಶೋಭಾಯಾತ್ರೆಯಲ್ಲಿ ಡಿಜೆಯ ಸಪ್ಪಳಕ್ಕೆ ಹೆಜ್ಜೆ ಹಾಕದವರೇ ಇಲ್ಲ. ವಯಸ್ಸಿನ ಅಂತರವಿಲ್ಲದೇ , ಹೆಣ್ಣು-ಗಂಡು ಬೇಧವಿಲ್ಲದೇ ಸಂಭ್ರಮದಲ್ಲಿ ನೃತ್ಯ ಮಾಡುತ್ತಾ ಶ್ರೀರಾಮ, ಭಾರತಮಾತೆ, ಶಿವಾಜಿ, ಭವಾನಿ, ಓಂಕಾರ, ಧರ್ಮರಕ್ಷಣೆಯ ವಾಕ್ಯಗಳಿಗೆ ಜೈಕಾರ ಕೂಗುತ್ತಾ ಶೋಭಯಾತ್ರೆಯು ಕೇಸರಿಮಯವಾಗಿ ಕಂಗೊಳಿಸಿತು.

ದಶ ದಿಕ್ಕುಗಳಿಗೆ ಜೈ ಶ್ರೀ ರಾಮ್ ಮೊಳಗಿಸಿದ ಡಿಜೆ
ದಶ ದಿಕ್ಕುಗಳಿಗೆ ಜೈ ಶ್ರೀ ರಾಮ್ ಮೊಳಗಿಸಿದ ಡಿಜೆ
ಶೋಭಾ ಯಾತ್ರೆಗೆ ಕಳೆ ತಂದ ಮಹಿಳೆಯರ ಕೇಸರಿ ಧಿರಿಸಿನ ರಂಗು
ಡಿಜೆ ಸದ್ದಿಗೆ ಸಂಭ್ರಮದ ಹೆಜ್ಜೆ
ಶೋಭಾ ಯಾತ್ರೆಗೆ ಡಿಜೆ ಸಿದ್ದತೆ ಮಾಡಿಕೊಂಡ ಯುವಕರಿಗೆ ಶುಭ ಕೋರಿದ ಸಚಿವ ಹೆಬ್ಬಾರ್


ಶೋಭಾಯಾತ್ರೆಯಲ್ಲಿ ಸಚಿವ ಶಿವರಾಮ ಹೆಬ್ಬಾರ್ ಭಾಗವಹಿಸಿ ಡಿಜೆ ಸದ್ದಿಗೆ ಹೆಜ್ಜೆ ಹಾಕಿ ನೋಡುಗರ ಗಮನ ಸೆಳೆದರು. ಇದೇ ಮೆರವಣಿಗೆಯಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಭಾಗವಹಿಸಿದ್ದು ಬರಲಿರುವ ಚುನಾವಣೆಯಲ್ಲಿ ಎದುರಾಳಿಗಳಾಗಲಿರುವ ಹೆಬ್ಬಾರ್- ವಿ.ಎಸ್. ಪಾಟೀಲ ಮುಖಾಮುಖಿಯಾಗಿ ಹಸ್ತಲಾಘವ ಮಾಡಿದರು. ಸಚಿವರ ಪತ್ನಿ ವನಜಾಕ್ಷಿ ಹೆಬ್ಬಾರ್ ಸಹ ಮಹಿಳೆಯರೊಂದಿಗೆ ಬೆರೆತು ಯುಗಾದಿ ಉತ್ಸವದ ಸಂಭ್ರಮಾಚರಣೆಯಲ್ಲಿ ಹೆಜ್ಜೆ ಹಾಕಿದರು.
ಅಂತಿಮವಾಗಿ ಗ್ರಾಮದೇವಿ ದೇವಸ್ಥಾನ ತಲುಪಿದ ಶೋಭಾಯಾತ್ರೆಯು ವೇದಮೂರ್ತಿ ಗೋಪಾಲಕೃಷ್ಣ ಭಟ್ಟ ಹಂಡ್ರಮನೆಯವರ ಪಂಚಾಗ ಪಠಣದೊಂದಿಗೆ ಮುಕ್ತಾಯ ಕಂಡಿತು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *