



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಹಿತ್ಲಳ್ಳಿ ಪಂಚಾಯತದ ಗೌತಮ ಸಿದ್ದಿ ಭಾರತೀಯ ಸೇನೆಗೆ(ಅಸ್ಸಾಂ ರೈಫಲ್ಸ್)ಗೆ ಆಯ್ಕೆಯಾಗಿದ್ದು ಅವರ ನಿವಾಸಕ್ಕೆ ಸಮುದಾಯದ ಯುವಕರು ಭೇಟಿ ನೀಡಿ ಅಭಿನಂದಿಸಿದ್ದಾರೆ.

ಹಿತ್ಲಳ್ಳಿಯ ಪುರ್ಲೆಮನೆ ನಿವಾಸಿಗಳಾದ ನಾಗೇಂದ್ರ ಸಿದ್ದಿ ಹಾಗೂ ಸುಶೀಲಾ ಸಿದ್ದಿಯವರ ಮಗನಾದ ಗೌತಮ ಸಿದ್ದಿ ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡಿದ್ದು ಆಗಸ್ಟ್ 2023 ರಲ್ಲಿ ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ.
ಸಿದ್ದಿ ಸಮಾಜದ ಯುವ ಮುಖಂಡರಾದ ಭಾಸ್ಕರ ಸಿದ್ದಿ, ಮಂಜುನಾಥ ಸಿದ್ದಿ, ಪರಶುರಾಮ ಸಿದ್ದಿ, ಸಂಗೀತಾ ಸಿದ್ದಿ, ರೂಪಾ ಸಿದ್ದಿ, ಹಾಗೂ ಕೃಷ್ಣ ಪೂಜಾರಿ ಇಳೇಹಳ್ಳಿ ಇವರುಗಳು ಗೌತಮ ಸಿದ್ದಿ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಿದ್ದಾರೆ.






Prathidvani Yellapura