



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ,ಯಲ್ಲಾಪುರ : ಜಗತ್ತೆ ನಿಬ್ಬೆರಗಾಗಿ ಕಣ್ಣರಳಿಸಿ ನೋಡುತ್ತಿದ್ದ ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಆಗಿದ್ದು ಪ್ರಪಂಚಾದ್ಯಂತ ಸಂಭ್ರಮಿಸಿದ್ದಾರೆ.
ವಿಕ್ರಮ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಆಗುತ್ತಲೆ ಜಗತ್ತಿನಾದ್ಯಂತ ಭಾರತದ ವಿಜ್ಞಾನಿಗಳ ಸಾಧನೆಗೆ ಪ್ರಶಂಸೆಗಳ ಮಹಾಪೂರವೆ ಹರಿದು ಬಂದಿದೆ.

ಯಲ್ಲಾಪುರದ ಅಂಬೇಡ್ಕರ್ ವೃತ್ತದಲ್ಲಿ ವಿಷನ್ ಯಲ್ಲಾಪುರದ ಬಳಗದ ವತಿಯಿಂದ ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ವಿಷನ್ ಯಲ್ಲಾಪುರ ಸಂಘಟನೆಯ ಅಧ್ಯಕ್ಷ ವಿಜಯ್ ಮಿರಾಶಿ ಮಾರ್ಗದರ್ಶನದಲ್ಲಿ ಪ್ರಮುಖ ಸತೀಶ್ ನಾಯ್ಕ್ ನೇತೃತ್ವದಲ್ಲಿ ಬಳಗದ ಎಲ್ಲಾ ಸದಸ್ಯರು ಮತ್ತು ಸಾರ್ವಜನಿಕರು ಸಂಭ್ರಮದಲ್ಲಿ ಪಾಲ್ಗೊಂಡರು.








Prathidvani Yellapura