



ಯಲ್ಲಾಪುರದ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಮದರ್ ಥೆರೆಸಾ ಆಂಗ್ಲಮಾಧ್ಯಮ ಶಾಲೆಯಲ್ಲಿ ಮಕ್ಕಳ ಬುದ್ದಿಮತ್ತೆ ಮತ್ತು ಕೈಚಳಕದಲ್ಲಿ ವಿವಿಧ ವಿನ್ಯಾಸದ ವಸ್ತು ಪ್ರದರ್ಶನ “ಸ್ಕೂಲ್ ಎಕ್ಸ್ ಪೋ” ಏರ್ಪಡಿಸಲಾಗಿತ್ತು.

ಶಾಲೆಯ ಮುಖ್ಯೋಪಾಧ್ಯಾಯ ಫಾ. ರಾಯ್ ಸ್ಟನ್ ಗೊನ್ಸಾಲ್ವಿಸ್ ನೇತೃತ್ವದಲ್ಲಿ ಕೆಡಿಇಎಸ್ ಸೆಕ್ರೆಟರಿ ಡಾ. ವಲೇರಿಯನ್ ಸೆಕ್ವೇರಿಯಾ ಮತ್ತು ಶಾಲಾ ಮೇಲ್ವಿಚಾರಕರಾದ ಫಾ.ಪೀಟರ್ ರ‍್ನೆರಿಯೋ ಉಪಸ್ಥಿತಿಯಲ್ಲಿ ವಸ್ತುಪ್ರದರ್ಶನ ಯಶಸ್ವಿಯಾಗಿ ನಡೆಯಿತು.

ವಿದ್ಯಾರ್ಥಿಗಳು ತಮ್ಮ ಬುದ್ದಿಮತ್ತೆ ಬಳಸಿ ತಯಾರಿಸಿದ ವೈಜ್ಞಾನಿಕ , ವಾಸ್ತುಶಿಲ್ಪ, ಸುಂದರ ವಿನ್ಯಾಸದ ಮತ್ತು ಅಂತರಿಕ್ಷಕ್ಕೆ ಸಂಬಂಧಿಸಿದ ಮಾದರಿಗಳು ಹೆಚ್ಚಾಗಿ ಕಂಡು ಬಂದವು.

ಪ್ರಸ್ತುತ ದಿನಮಾನಗಳಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಕೊರತೆ ಕಂಡು ಬರುತ್ತಿದ್ದು ಶುದ್ಧ ಕುಡಿಯುವ ನೀರನ್ನು ಪಡೆಯುವ ವಿಧಾನ ನೋಡುಗರ ಗಮನ ಸೆಳೆಯಿತು.

ಡೈನೋಸಾರಸ್, ರೋಬೋ ಇನ್ನಿತರ ಮಾದರಿಗಳು ವಸ್ತುಪ್ರದರ್ಶನದ ಕೇಂದ್ರ ಬಿಂದುಗಳಾಗಿದ್ದವು. ವಿದ್ಯಾರ್ಥಿಗಳು ತಯಾರಿಸಿದ ಮಾದರಿಯನ್ನು ವೀಕ್ಷಿಸಲು ಪೋಷಕರ ದಂಡೇ ಹರಿದು ಬಂದಿತ್ತು. ಪ್ರತಿ ವಿನ್ಯಾಸವನ್ನೂ ವಿವರಿಸುವ ವಿದ್ಯಾರ್ಥಿಗಳಲ್ಲಿ ತಮ್ಮ ತಯಾರಿಕೆಯ ಹೆಮ್ಮೆ ಇತ್ತು. ಶಾಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ವಸ್ತುಪ್ರದರ್ಶನದಲ್ಲಿ ತೊಡಗಿಸಿಕೊಂಡಿದ್ದರು.
Prathidvani Yellapura