Breaking News

ರವೀಂದ್ರ ನಗರದ ಆಂಜನೇಯನ ಸೇವೆಗೆ ಸಿದ್ದವಾಗಿ ಅರ್ಪಿತವಾದ ನೂತನ ಪಲ್ಲಕ್ಕಿ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ರವೀಂದ್ರನಗರದಲ್ಲಿ ನೆಲೆನಿಂತ ಪ್ರಭು ಶ್ರೀರಾಮನ ಬಂಟ ಪವನಸುತ ವೀರ ಆಂಜನೆಯನಿಗೆ ವಿಶೇಷ ಸೇವೆ ಸಲ್ಲಿಸುವ ಸದುದ್ದೇಶದಿಂದ  ಪಲ್ಲಕ್ಕಿ ಸಮರ್ಪಿಸುವ ಕಾಯಕಕ್ಕೆ ಒಂದು ಹೆಜ್ಜೆ ಮುಂದಿಟ್ಟು ಹನುಮ ಜಯಂತಿಗೆ ನೂತನ ಪಲ್ಲಕಿ ಆಂಜನೇಯನಿಗೆ  ಸಲ್ಲಿಸಿದಂತಾಗಿದೆ.

     ದಿನಾಂಕ 01..05..2023 ರಂದು ನಮ್ಮ ಶ್ರೀ ಆಂಜನೇಯ ದೇವಸ್ಥಾನದ ಪಲ್ಲಕ್ಕಿ ನಿರ್ಮಾಣ ಸಹಾಯಾರ್ಥವಾಗಿ ಶ್ರೀ ಗುರು ಸಿದ್ದೇಶ್ವರ ನಾಟ್ಯ ಸಂಘ ಮಂಡಲಗಿರಿ ಅವರಿಂದ ಚಿನ್ನದ ಗೊಂಬೆ ನಾಟಕ ಪ್ರದರ್ಶನ ಮಾಡಲಾಗಿತ್ತು ಅದರಿಂದ ಬಂದ ಉಳಿತಾಯದ ಹಣದಲ್ಲಿ ಪಲ್ಲಕ್ಕಿ ನಿರ್ಮಾಣ ಮಾಡಲು ನೀಡಲಾಗಿತ್ತು.

ಇದೀಗ ಬಹು ದಿನದ ಕನಸು ನನಸಾಗಿ ಪಲ್ಲಕ್ಕಿ ನಿರ್ಮಾಣ ಪೂರ್ಣಗೊಂಡಿದ್ದು ಹನುಮ ಜಯಂತಿ ಪ್ರಯುಕ್ತ  ಮಂಗಳವಾರ  ಬಿಕ್ಕು ಗುಡಿಗಾರ್ ಕಲಾ ಕೇಂದ್ರದಿಂದ ದೇವಸ್ಥಾನಕ್ಕೆ ತರಲಾಯಿತು.

ಈ ಸಂದರ್ಭದಲ್ಲಿ ಸಹಾಯ ಮಾಡಿದ ಮಂಡಲಗಿರಿ ನಾಟ್ಯ ಸಂಘದವರಿಗೂ ಸ್ಥಳಾವಕಾಶ ಮಾಡಿಕೊಟ್ಟ  ವೇಣುಗೋಪಾಲ್ ಮದ್ಗುಣಿ ಮತ್ತು ನಾಗರಾಜ್ ಮದ್ಗುಣಿ ಯವರಿಗೂ ನಮ್ಮ ಕರೆಗೆ ಓಗೊಟ್ಟು ಬಂದು ನಾಟಕ ವೀಕ್ಷಣೆ ಮಾಡಿದ ಎಲ್ಲಾ ಕಲಾಭಿಮಾನಿಗಳಿಗೂ ದೇವಸ್ಥಾನ ಕಮಿಟಿಯ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.

ಮುಂದಿನ ದಿನಗಳಲ್ಲಿ ದೇವಸ್ಥಾನ ಕಟ್ಟಡ ಜೀರ್ಣೋದ್ಧಾರ ಮಾಡುವ ಕೆಲಸ ಹಮ್ಮಿಕೊಂಡಿದ್ದು ಆ ಸಂದರ್ಭದಲ್ಲಿಯೂ ಸಹ  ತಮ್ಮೆಲ್ಲರಿಂದ ತನು ಮನ ಧನ ಸಹಾಯ ಸಹಕಾರ ನೀಡಿರೆಂದು ಕೇಳಿಕೊಳ್ಳುತ್ತೇವೆ ತಾವುಗಳು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಹುಸಿ ಮಾಡದೆ ಕಾಪಾಡಿಕೊಳ್ಳುತ್ತೇವೆ ಎಂದು ದೇವಸ್ಥಾನ ಕಮಿಟಿಯ ಎಲ್ಲಾ ಪದಾಧಿಕಾರಿಗಳು ಭಕ್ತ ಜನತೆಯಲ್ಲಿ ಮನವಿ ಮಾಡಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *