
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ತಾಲೂಕಿನ ಇಡಗುಂದಿ ಪಂಚಾಯತ ವ್ಯಾಪ್ತಿಯಲ್ಲಿ ಬರುವ ದೋಣಗಾರ ಸಮೀಪದ ತುಂಬಳ್ಳಿ ಬಳಿ ನಿಸರ್ಗ ರಮಣೀಯ ಬೆಟ್ಟದ ಮೇಲೊಂದು ಪಂಚಮುಖಿ ಆಂಜನೇಯ ಮತ್ತು ಓಶೋ ಪ್ರತಿಕೃತಿ ಕೆತ್ತನೆಯ ವಿಗ್ರಹ ಪ್ರತಿಷ್ಠಾಪನೆಯಾಗಿರುವ ಪರಿಸರದಲ್ಲಿ ದೃಡ ಸಂಕಲ್ಪವಿರುವ ಧ್ಯಾನಾಸಕ್ತರಿಗೆ ಜೀವನದ ಸತ್ಯ ಅರಿಯಲು ವ್ಯವಸ್ಥೆಯಾಗಿದೆ.

ಗಣಪತಿ ಸುಬ್ರಾಯ ತುಂಬಳ್ಳಿ ಎಂಬುವರು ಓಶೋ ಸಿದ್ಧಾಂತದ ಪ್ರತಿಪಾದಕರಾಗಿ ದ್ಯಾನಾಸಕ್ತರಿಗೆ ವ್ಯವಸ್ಥೆ ಕಲ್ಪಿಸುತ್ತಾ ಬಂದಿದ್ದಾರೆ.



ತುಂಬಳ್ಳಿ ಸಮೀಪದ ಪರಿಸರದಲ್ಲಿ ಬೆಟ್ಟದ ಮೇಲೆ ನಂಬಿ ಬರುವ ಭಕ್ತರಿಗೆ ಧ್ಯಾನಕ್ಕೆ ಪ್ರಶಸ್ಥವಾದ ಸ್ಥಳಾವಕಾಶವಿದ್ದು ಬೆಟ್ಟದಲ್ಲಿ ನಡೆದು ಸಾಗಲು 108 ತತ್ವಗಳನ್ನು ಆದರಿಸುವ ಮೆಟ್ಟಿಲುಗಳನ್ನು ಕೆತ್ತಲಾಗಿದೆ.

ಬೆಟ್ಟದ ತುಂಬೆಲ್ಲಾ ಪರಮೇಶ್ವರನಿಗೆ ಪ್ರಿಯವಾದ ಪತ್ರೆ ಗಿಡಗಳ ರಾಶಿಯೆ ತುಂಬಿದೆ ಅದಕ್ಕಾಗಿ ಬೆಟ್ಟದ ಪರಿಸರವನ್ನು “ಪತ್ರೆವನ” ಎಂದು ಕರೆಯಲಾಗುತ್ತಿದೆ.

ತುಂಬಳ್ಳಿ ಗಣಪತಿ ಅವರ ನಿವಾಸದಲ್ಲಿ ದ್ಯಾನಮಂದಿರವಿದ್ದು ಅಲ್ಲಿ ಸಂಕಲ್ಪ ಹೊತ್ತು ಸಾಗುವ ಜನರಿಗೆ ಕೌನ್ಸಿಲಿಂಗ್ ಮಾಡಲಾಗುತ್ತದೆ.

ಅಲ್ಲಿಂದ ಬೆಟ್ಟಕ್ಕೆ ತೆರಳಿ 108 ಮೆಟ್ಟಿಲು ಹತ್ತಬೇಕು ಹತ್ತುವ ಸಮಯದಲ್ಲಿ ಕೈಯ್ಯಲ್ಲಿ ಮಂತ್ರಾಕ್ಷತೆ ಹಿಡಿದು ದೃಡ ಸಂಕಲ್ಪ ಮಾಡುತ್ತಾ ಸಾಗಬೇಕು.

ಬೆಟ್ಟದ ತುದಿ ತಲುಪಿದ ನಂತರ ಅಲ್ಲಿನ ವಿಗ್ರಹಕ್ಕೆ ಪೂಜೆ ಸಲ್ಲಿಸಿ ದ್ಯಾನಿಸಬೇಕಿದೆ. ಬಹು ಸಮಯದಿಂದ ಈ ಪರಿಸರವು ದ್ಯಾನ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದು ಮತ್ತಷ್ಟು ಜನಮಾನಸಕ್ಕೆ ತೆರೆದುಕೊಳ್ಳುತ್ತಿದೆ.

ಒಶೋ ಸಿದ್ದಾಂತ ಮತ್ತು ಪಂಚಮುಕಿ ಆಂಜನೇಯನ ಶಕ್ತಿ ಕ್ರೂಡಿಕರಿಸಿಕೊಂಡ ಆದ್ಯಾತ್ಮ ಕೇಂದ್ರವಾಗಿ ತುಂಬಳ್ಳಿಯ ಪತ್ರೇವನ ದ್ಯಾನಸಕ್ತರನ್ನು ಕೈ ಬೀಸಿ ಕರೆಯುತ್ತಿದೆ. ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು mob-9482755942 land -9481231389 ಕರೆ ಮಾಡಬಹುದಾಗಿದೆ.

ಯಲ್ಲಾಪುರದ ” ಪತ್ರೇವನ ” ದಲ್ಲಿ ಓಶೋ ಧ್ಯಾನ ಪರಿಸರ ಸಂಕಲ್ಪ ಕ್ಷೇತ್ರ.
ನವೀನ ಮಾನವತೆಗೊಂದು
ವಿನೂತನ ಅವಕಾಶ.
ಮನಃ ಶಾಂತಿಗಾಗಿ
ಕುಟುಂಬದ ಸ್ವಾಸ್ಥ್ಯಕ್ಕಾಗಿ
ನೆಮ್ಮದಿಯ ನಿದ್ರೆಗಾಗಿ
ಶ್ರೇಷ್ಠ ಸಂತಾನಕ್ಕಾಗಿ
ಓಶೋ ಅವರ ಟೆರೋ ರೀಡಿಂಗ್
ಮತ್ತು ವೈಜ್ಞಾನಿಕ ಕೌನ್ಸಲಿಂಗ್
ಸಂಕಲ್ಪ ಕ್ಷೇತ್ರದಲ್ಲಿ ಪ್ರಾರ್ಥನೆ
ಸರಳ ಉಪಾಯದಲ್ಲಿ ನೆಮ್ಮದಿ ಕಾಣಲು
ಟೆರೋ ಜ್ಯೋತಿಷ್ಯ , ಕ್ಷೇತ್ರ ಪೂಜೆ
ಈ ಎಲ್ಲಾ ವಿವರಗಳಿಗಾಗಿ
ಸಂಪರ್ಕಿಸಿ :-
ಸ್ವಾಮಿ ಗಣೇಶ ( ಗಣಪತಿ ತುಂಬಳ್ಳಿ ಮನೆ)
ದೋಣಗಾರ (ಪೋ) ಇಡಗುಂದಿ
ಯಲ್ಲಾಪುರ (ತಾ) ಉತ್ತರ ಕನ್ನಡ(ಜಿ)
ಪಿನ್ – 581337
ವಿಸೂ…ಪ್ರತಿ ಗುರುವಾರ ವಿಶೇಷ
ಮೊಬೈಲ್ -9482755942
ಮನೆ ಸಂಖ್ಯೆ -9481231389
ನಮೋ ನಮೋ ವಿಶ್ವ ಶಾಂತಿಗೆ ನಮೋ ನಮಃ


Prathidvani Yellapura