
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ತೆರೆಯ ಮೇಲಿನ ಬಣ್ಣದ ಬದುಕಿಗೆ ಜೀವ ತುಂಬಿ ನಿರ್ವಹಿಸುವ ಪಾತ್ರಕ್ಕೂ ಮೆರುಗು ಬರಬೇಕೆಂದರೆ ಕಥೆಯನ್ನು ಬರೆದ ಲೇಖಕ ಅದಕ್ಕೆ ಜೀವ ತುಂಬಿರಬೇಕು. ಅಂತಹ ಉತ್ತಮ ನಾಟಕ ಕಥೆ ಬರೆದ ಶಿಕ್ಷಕ ವಿಜಯ್ ನಾಯಕರವರ ಬರವಣಿಗೆ ಶ್ಲಾಘನೀಯ ಮತ್ತು ಪರ ಊರಿನ ಕಲಾವಿದರೆನ್ನುವ ಬೇಧ ಭಾವವಿಲ್ಲದೇ ಗೌರವಿಸಿ ಸತ್ಕರಿಸಿ ನಾಟಕದ ಯಶಸ್ಸನ್ನು ಸನ್ಮಾನದ ಮೂಲಕ ಗೌರವಿಸಿದ ಸಂಘಟಕರಿಗೆ ಕೃತಜ್ಞತೆ ಸಲ್ಲಿಸುತ್ತೇವೆಂದು ನಾಟಕದ ಪಾತ್ರಧಾರಿ ಸುರೇಶ ಆರ್ ನಾಯಕ ಹೇಳಿದರು.
ಅವರು ಪಟ್ಟಣದ ನಿಸರ್ಗ ಮನೆಯಲ್ಲಿ ಪಟ್ಟಣದ ಮನರಂಜನಾ ಹವ್ಯಾಸಿ ಕಲಾಬಳಗದ ಅಡಿಯಲ್ಲಿ ನಡೆದ ‘ದುಷ್ಟಕೂಟದ ಸುಳಿಯಲ್ಲಿ’ ಎಂಬ ನಾಟಕದ ಯಶಸ್ಸನ್ನು ಸಂಭ್ರಮಿಸುವ ಸಭೆಯಲ್ಲಿ ಮಾತನಾಡಿದರು.

ಫೆ.14 ರಂದು ಪಟ್ಟಣದ ಕಾಳಮ್ಮನಗರದಲ್ಲಿ ದಿ.ನಾರಾಯಣ ಎಚ್ ನಾಯಕ ವೇದಿಕೆಯಲ್ಲಿ ಮನರಂಜನಾ ಹವ್ಯಾಸಿ ಕಲಾಬಳಗದಿಂದ ನಿವೃತ್ತ ಶಿಕ್ಷಕ ವಿಜಯ್ ಎಸ್ ನಾಯಕ ಬರೆದ ‘ದುಷ್ಟಕೂಟದ ಸುಳಿಯಲ್ಲಿ’ ಅರ್ಥಾತ್ ‘ಚಿಗುರಿದ ಕನಸು’ ಎಂಬ ಸಾಮಾಜಿಕ ಹಾಸ್ಯ ಬರಿತ ನಾಟಕ ಪ್ರದರ್ಶಿಸಿ ಯಶಸ್ಸು ಕಂಡ ಹಿನ್ನಲೆಯಲ್ಲಿ ಪಾತ್ರಧಾರಿಗಳಿಗೂ, ತೆರೆಮರೆಯಲ್ಲಿ ಕೆಲಸ ಮಾಡಿದ ಕಲಾವಿದರಿಗೂ ಸಹಕರಿಸಿದ ಪ್ರೋತ್ಸಾಹಕರಿಗೂ ಸಂಘಟಕರು ಗೌರವ ಸಲ್ಲಿಸಿ ಪುರಸ್ಕರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್ ಭಟ್ಟ, ಸರ್ಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಸಂಜೀವ ಹೊಸ್ಕೇರಿ, ನಾಟಕದ ನಿರ್ದೇಶಕ ಗೌರೀಶ್ ನಾಯಕ ಅಲಗೇರಿ, ಪ್ರವೀಣ್ ನಸಯಕ ಹಿಲ್ಲೂರು, ತಿಲೇಶ್ ನಾಯಕ ಹಿಲ್ಲೂರು, ನಿವೃತ್ತ ಶಿಕ್ಷಕರಾದ ರಮೇಶ್ ನಾಯಕ, ಸುಬ್ರಾಯ ನಾಯಕ, ಸಂತೋಷ ಕೊಳಗೇರಿ, ರಮಾನಂದ ನಾಯಕ, ಮಂಜುನಾಥ ಹೆಚ್ ನಾಯಕ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ಶಿಕ್ಷಕ ಹರೀಶ್ ನಾಯಕ ಸ್ವಾಗತಿಸಿದರು, ನಿವೃತ್ತ ಶಿಕ್ಷಕ ವಿಜಯ್ ನಾಯಕ ಪ್ರಾಸ್ತಾವಿಕ ನುಡಿದರು, ಶಿಕ್ಷಕ ರಾಘವೇಂದ್ರ ವಂದಿಸಿದರು ಕೇಬಲ್ ನಾಗೇಶ್ ನಿರೂಪಿಸಿದರು.



Prathidvani Yellapura