
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಪಟ್ಟಣದ ಶಾಸಕರ ಕಚೇರಿ ಸಮೀಪದ ಬದ್ದಿ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಬ್ರಾಂಡಡ್ ಮೊಬೈಲ್ಸ್,ಆಕ್ಸಸರೀಸ್,ವಾಚಸ್,ಸನ್ ಗ್ಲಾಸಸ್ ಮಾರಾಟದ ಬೃಹತ್ ಮಳಿಗೆ ಸೋಮವಾರ ವಿದ್ಯಯಕ್ತವಾಗಿ ಪ್ರಾರಂಭವಾಯಿತು.

“ಎವಿಎಂ ಗ್ಯಾಲಕ್ಸಿ ಹಬ್” ಪ್ರಾರಂಭಗೊಂಡಿದ್ದು ಯಲ್ಲಾಪುರ-ಮುಂಡಗೋಡು ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಪತ್ನಿ ವನಜಾಕ್ಷಿ ಹೆಬ್ಬಾರ್ ಜೊತೆಯಾಗಿ ಉದ್ಘಾಟಿಸಿದರು.

ಜಿಲ್ಲಾ ಪಂಚಾಯತ ಮಜಿ ಸದಸ್ಯ ಕಿರವತ್ತಿ ಮದನೂರು ಭಾಗದ ಪ್ರಭಾವಿ ಮುಖಂಡ ವಿಜಯ್ ಮಿರಾಶಿ ಪುತ್ರ ಅನಿಕೇತ್ ಮಿರಾಶಿ ಒಡೆತನದಲ್ಲಿ ಪ್ರಾರಂಭಿಸಲಾದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಪ್ರತಿಷ್ಠಿತ ಕಂಪನಿಗಳ ಮೊಬೈಲ್ ಫೋನ್ ಗಳು ಮತ್ತು ಅಂದ ಚಂದ ಗುಣಮಟ್ಟ ಕ್ಕೆ ಹೆಸರಾದ ಸನ್ ಗ್ಲಾಸಸ್ ಮತ್ತು ವಾಚಸ್ ಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ.

ಮಳಿಗೆ ಉದ್ಘಾಟಿಸಿದ ಶಾಸಕ ಶಿವರಾಮ ಹೆಬ್ಬಾರ್ ವಿಜಯ್ ಮಿರಾಶಿ ಕುಟುಂಬಕ್ಕೆ ವಿಶೇಷವಾಗಿ ಅನಿಕೇತ್ ಮಿರಾಶಿ ವ್ಯಾಪರೋದ್ಯಮದಲ್ಲಿ ತೊಡಗಿಕೊಂಡದ್ದಕ್ಕಾಗಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಮಿರಾಶಿ ಕುಟುಂಬಸ್ಥರು, ಅಭಿಮಾನಿಗಳು, ಹೆಬ್ಬಾರ್ ಅಭಿಮಾನಿಗಳು ಸ್ನೇಹಿತರು ಹಿತೈಷಿಗಳು ಊರಿನ ಗಣ್ಯರು ಇನ್ನಿತರರು ಆಗಮಿಸಿದ್ದರು.



Prathidvani Yellapura