Breaking News

ತಾಲೂಕಿನಲ್ಲಿ ಸುರಿಯುತ್ತಿರುವ ಬಾರಿ ಮಳೆ ಎಲ್ಲೆಲ್ಲಿ ಏನೇನು..!!!


ಯಲ್ಲಾಪುರ : ತಾಲೂಕಿನಲ್ಲಿ ಬಿಡದೆ ಸುರಿಯುತ್ತಿರುವ ಬಾರಿ ಮಳೆಗೆ ಹಳ್ಳ ಕೊಳ್ಳಗಳೆಲ್ಲಾ ಉಕ್ಕಿ ಹರಿಯಿತ್ತಿದೆ. ಜಿಲ್ಲಾಧಿಕಾರಿಗಳ ಅನುಮತಿ ಪಡೆದು ತಾಲೂಕಿನಲ್ಲಿ‌ ಇಂದು ಸೋಮವಾರ ಒಂದು ದಿನದ ಮಟ್ಟಿಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಅವರ ಅಭಿಪ್ರಾಯ ಪಡೆದು. ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ತಹಶಿಲ್ದಾರ ಶ್ರೀಕೃಷ್ಣ ಕಾಮಕರ ಈ ನಿರ್ಧಾರ ಪ್ರಕಟಿಸಿರುತ್ತಾರೆ.

ಬಿಡದೆ ಸುರಿದ ಮಳೆಗೆ ರವಿವಾರದ ಸಂತೆ ಮಾರುಕಟ್ಟೆಯಲ್ಲಿ ತರಕಾರಿ,ದವಸದಾನ್ಯ, ಹಣ್ಣು, ಪ್ಲಾಸ್ಟಿಕ್ ಸಾಮಾಗ್ರಿಗಳು, ಬಟ್ಟೆ, ತಿಂಡಿ ತಿನಿಸುಗಳ ವ್ಯಾಪಾರಸ್ಥರ ಗೋಳು ಹೇಳತೀರದಾಗಿತ್ತು.

ಹಾಗು ಹೀಗು ಮಳೆಯಲ್ಲೆ ನೆನೆದು ಸಂತೆ ವ್ಯಾಪಾರ ನಡೆಯಿತು. ಗ್ರಾಹಕರ ಸಂಖ್ಯೆ ಗಣನೀಯವಾಗಿ ಕಡಿಮೆ ಇತ್ತು.

ಸದ್ಯ ತರಕಾರಿ ಮಾರುಕಟ್ಟೆ ರಾಣಿಯಾಗಿರುವ ಟೊಮ್ಯಾಟೊ ಕೆಜಿಗೆ 120 ಆಗಿತ್ತು. ಇನ್ನಳಿದ ತರಕಾರಿ ಎಂದಿನಂತೆ80 ರಿಂದ 100 ರ ಆಸುಪಾಸಿನಲ್ಲಿತ್ತು,

ಮಳೆಯಲ್ಲು ಉತ್ತಮವಾದ ಹಣ್ಣುಗಳು ಮಾರುಕಟ್ಟೆ ಪ್ರವೇಶ ಮಾಡಿದ್ದವು ಸದ್ಯ ಸೇಬು ಕೆ‌ಜಿಗೆ 250 ಆಗಿದ್ದು ಅತಿಹೆಚ್ಚು ಬೆಲೆಯ ಹಣ್ಣಾಗಿದೆ.


ಒಂದೆಡೆ ಅಧಿಕ ಶ್ರಾವಣ ಪ್ರಾರಂಭ ವಾಗಿದ್ದರು ಮೀನು ಮತ್ತು ಮಾಂಸ ಮಾರುಕಟ್ಟೆಯಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಳೆ ಮೀನು ಕಾಟ್ಲ ರವು, ಬಾಳೆ, ಬಾಂಬೆ ಕಾಟ್ಲ, ಮುರುಗೋಡು ಮೀನು ಮಾರುಕಟ್ಟೆ ಆಕ್ರಮಿಸಿಕೊಂಡಿತ್ತು.


ಪಟ್ಟಣದ ಹುಬ್ಬಳ್ಳಿ ಕಡೆ ಸಾಗುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೆ ಇರುವ ಕವಳಿ ಗದ್ದೆ ಸಂಪೂರ್ಣ ಮುಳುಗಿ ನದಿಯಂತಾಗಿತ್ತು. ಇದೇ ಕಾರಣದಿಂದಾಗಿ ಕೆಲ ವರ್ಷಗಳಿಂದ ಇಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿಲ್ಲ.

ಬೆಡ್ಸಗದ್ದೆ ಬೊಂಡಗೇಸರ ಗ್ರಾಮಸ್ಥರ ಅಳಲು ಹೇಳತೀರದಾಗಿದ್ದು ಸಂಚಾರಕ್ಕೆ ಸಮರ್ಪಕ ರಸ್ತೆ ಇಲ್ಲದೆ ಆಟೋ ಕಾರು ಯಾವ ವಾಹನಗಳು ಬರಲು ಕಷ್ಟಕರವಾಗಿದೆ. ಕಳೆದೆರಡು ದಿನಗಳ ಹಿಂದೆ ಅನಸರೋಗ್ಯ ಪೀಡಿತ ವ್ಯಕ್ತಿಯೋರ್ವರನ್ಬು ಶಿರಸಿಯಿಂದ ಆಂಬುಲೆನ್ಸ್ ಕರೆ ತಂದರು ರಸ್ತೆ ಸಂಪರ್ಕವಿಲ್ಲದೆ ಪ್ಲಾಸ್ಟಿಕ್ ಚೇರ್ ನಲ್ಲಿ ಕುಳ್ಳಿರಿಸಿ ಹೊತ್ತು ಸಾಗಿಸಿದ್ದಾಗಿತ್ತು.

ಇದೇ ಪರಿಸರದಲ್ಲಿ ಕೆರೆಯೊಂದನ್ನು ವ್ಯಕ್ತಿಯೋರ್ವ ಅತಿಕ್ರಮಣ ಮಾಡಿದ್ದು ಅವೈಜ್ಞಾನಿಕ ಕೆಲಸದಿಂದ ನಮ್ಮ ಗದ್ದೆಗಳಿಗೆ ನೀರುನುಗ್ಗಿದೆ ಎಂದು ಕೇಶವ ದುರ್ಗಾ ಗಾಂವ್ಕರ್ ಎಂಬುವರು ಅಳಲು ತೋಡಿಕೊಂಡರು

ರಸ್ತೆ ಕಡೀಕರಣವಾಗಿದ್ದು ಮಳೆಗಾಲದ ಪೂರ್ವದಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಲಾಗಿತ್ತು ಆದರೆ ಅಷ್ಟರಲ್ಲಿ ಮಳೆ ಪ್ರಾರಂಭವಾಗಿ ಈ ರೀತಿ ಕೆಸರಾಗಿದೆ ಸದ್ಯ ಮಳೆ ವಿಪರೀತ ಬೀಳುತ್ತಿದ್ದು ಮಣ್ಣನ್ನು ತೆಗೆಸಲು ಸಾದ್ಯವಾಗುತ್ತಿಲ್ಲ ಮಳೆಯ ಪ್ರಮಾಣ ಕಡಿಮೆಯಾಗುತ್ತಲೆ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಹಾಗು ಗದ್ದೆಗಳಿಗೆ ನೀರು ನುಗ್ಗಿರುವ ಕುರಿತು ಇದೀಗ ತಿಳಿದು ಬಂದಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಕಲ್ಪನ ಗಜು ನಾಯ್ಕ್ , ಪಟ್ಟಣ ಪಂಚಾಯತ ಸದಸ್ಯರು, ಯಲ್ಲಾಪುರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *