Breaking News

ಸೋಲನ್ನು ಸವಾಲಾಗಿ ಸ್ವೀಕರಿಸಿ ಮೇಲೆದ್ದು ಬರಲಿದೆ ಬಿಜೆಪಿ. ಭಾರತ ಸ್ವರ್ಣಪಥದತ್ತ ಸಾಗಿ 9 ವರ್ಷ.. ಸಿ.ಟಿ.ರವಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ-ಸಾವಿಗೆ ಹೆದರದ ಬಿಜೆಪಿ ಸೋಲಿಗೆ ಹೆದರುವ ಮಾತೆ ಇಲ್ಲ ಸೋಲನ್ನು ಸವಾಲಾಗಿ ಸ್ವೀಕರಿಸಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ತರುವುದಂತು ಶತಸಿದ್ದ. ದೇಶವನ್ನು ಸ್ವರ್ಣಪಥದತ್ತ ಕೊಂಡೊಯ್ಯಲು ಪ್ರಾರಂಭಿಸಿ  ಒಂಬತ್ತು ವರ್ಷ ಸಂದಿದೆ ಅದು ಪ್ರಧಾನಿ ಮೋದಿ  ನೇತೃತ್ವದ ಕೇಂದ್ರ ಸರ್ಕಾರಕ್ಕೆ ಎಂಬುದು ಕಾರ್ಯಕರ್ತರಾದ ನಮ್ಮೆಲ್ಲರ ಹೆಮ್ಮೆ . ದೇಶದ ಇಟ್ಟ ಕಡೆಯ ಮನುಷ್ಯನಿಗೆ ಸರ್ಕಾರಿ ಸೌಕರ್ಯಗಳು ತಲುಪಿಸಿ ನೀತಿ ಅಧಿಕಾರವನ್ನು ಜನರಿಗೆ ತಲುಪಿಸಿದ ಹೆಮ್ಮೆಯ ಸರ್ಕಾರಕ್ಕೆ ಒಂಬತ್ತುವರ್ಷವಾಗಿದೆ.  ದೇಶಕ್ಕೆ ಜಗತ್ತಿನಲ್ಲಿ  ಹೆಮ್ಮೆಯ ಸ್ಥಾನ ದೊರಕಿಸಿದ್ದು ನಮ್ಮ ಪ್ರದಾನಿ ಮೋದಿಯವರು.  ಆತ್ಮ ನಿರ್ಬರ ಭಾರತ ಕಂಡಿದ್ದು ಜನ ಹಿತ ಸರ್ಕಾರದಿಂದ  ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.


   ಅವರು ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ನಡೆದ ಮೋದಿ ಸರ್ಕಾರದ ಒಂಬತ್ತು ವರ್ಷಗಳ ಪೂರ್ಣಗೊಳಿಸಿದ ಹಾಗು  ಘಟ್ಟದ ಮೇಲಿನ ತಾಲೂಕುಗಳ ಕಾರ್ಯಕರ್ತ ಸಮಾವೇಶ ಉದ್ಘಾಟಿಸಿ ಮಾತನಾಡಿದರು.


    ರಾಜ್ಯದಲ್ಲಿ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿರುವುದು ಸತ್ಯವೆ ಆದರು ಗೆದ್ದಿರುವುದು ಮಾತ್ರ ಕಾಂಗ್ರೆಸ್ ಅಲ್ಲ ಬದಲಾಗಿ ಗ್ಯಾರಂಟಿ ಕಾಡ್೯ ಗೆದ್ದಿದೆ ಪ್ರಜಾಪ್ರಭುತ್ವ ದಲ್ಲಿ ಮೌಲ್ಯಾಧಾರಿತ ರಾಜಕಾರಾಣ ಮಾಡದೆ ಹೀನ ರಾಜಕಾರಣಕ್ಕೆ ಕಾಂಗ್ರೆಸ್ ಜನರ ಮನಸ್ಸಿನಲ್ಲಿ ನೀಚ ಸ್ಥಾನ ತಲುಪಿದೆ ಎಂದು ಉತ್ತರ ಕನ್ನಡ ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.


       ಅಧಿಕಾರಕ್ಕೆ ಬಂದು ತಮ್ಮ ತಮ್ಮ ಇಲಾಖೆಯ ವ್ಯಾಪ್ತಿ ಅಧಿಕಾರಿಗಳು ಯಾವುದನ್ನು ತಿಳಿಯದೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮಕ್ಕಳ  ಶಿಕ್ಷಣ ವಿಚಾರದಲ್ಲಿ ರಾಜಕೀಯ ಮಾಡಿ ಉತ್ತಮ ಪಠ್ಯಕ್ರಮವನ್ನು ಪರಿಷ್ಕರಿಸಿ ಉತ್ತಮ ಪಾಠಗಳನ್ನು ತೆಗೆಯುತ್ತಿರುವುದು ಖಂಡನೀಯ ಮತ್ತು ಮುಂದೆ ಜನವಿರೋದಿ ನೀತಿಗಳ ವಿರುದ್ಧ ಪ್ರತಿಭಟಿಸಲಿದ್ದೇವೆ ಎಂದು ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.


     ಬರಲಿರುವ ಭವಿಷ್ಯದ ದಿನಗಳಲ್ಲಿ ಚುನಾವಣೆಗಳ ಪರ್ವವೆ ಬರಲಿದ್ದು ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಬೇಕಿದೆ . ಆತ್ಮವಿರುವುದು ನಿಜವಾದ ಮೇಲೆ ಅವಲೋಕನ ಅಗತ್ಯವಿದೆ. ಸಂಣಘಟನೆ ಮತ್ತಷ್ಟು ಬಲವರ್ಧನೆ ಆಗಬೇಕಿದೆ ಎಂದು ಹಾಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಮಾಜಿ ಮಂತ್ರಿ ಶಿವರಾಮ ಹೆಬ್ಬಾರ್ ಹೇಳಿದರು.


       ಭಾರತದ ಕತ್ತು ಹಿಸುಕಿ ಸಂವಿಧಾನವನ್ನು ಅಮಾತಿನಲ್ಲಿಟ್ಟ ಕಾಂಗ್ರೆಸ್ ದೇಶದ ಭವಿಷ್ಯದ ಬಗ್ಗೆ ಮತನಾಡುವ ನೈತಿಕ ಹಕ್ಕಿಲ್ಲ ಅಂತಹ ಕರಾಳ ಸಂದರ್ಭ ಮತ್ತೆಂದು ಬರದಂತೆ ಹೋರಾಟದ ಮೂಲಕ ಪಕ್ಷವನ್ನು ಬಲವರ್ಧನೆಗೊಳಿಸಿ ದೇಶಕ್ಕೆ ಇಂದು ಗೌರವ ತಂದುಕೊಡುವ ಕೆಲಸವಾಗುತ್ತಿರುವುದು ಭಾರತೀಯ ಜನತಾ ಪಕ್ಷದ ಹೆಮ್ಮೆಯಾಗಿದೆ. ಉತ್ತಮ ಅಭಿವೃದ್ಧಿ ಕಾರ್ಯಮಾಡಿದ್ದ ವಿಶ್ವ ನಸಯಕ ಮೋದಿ ಸರ್ಕಾರ ಒಂಬತ್ತು ವರ್ಷ ಪೂರ್ಣಗೊಳಿಸಿದೆ ಎಂದು ಮಾಜಿ ಗೃಹ ಸಚಿವ ತೀರ್ಥಹಳ್ಳಿ ಶಾಸಕ  ಆರಗ ಜ್ಞಾನೇಂದ್ರ ಹೇಳಿದರು.


      ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ್ ನಾಯಕ, ಕಾರವಾರ ಮಾಜಿ ಶಾಸಕಿ ರೂಪಾಲಿ ನಾಯ್ಕ, ಹಳಿಯಾಳದ ಮಾಜಿ ಶಾಸಕ ಸುನಿಲ್ ಹೆಗಡೆ, ಉಡುಪಿ ಮಾಜಿ ಶಾಸಕ ಪ್ರಮೋದ್ ಮದ್ವರಾಜ್,  ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ, ಗೋವಿಂದ ನಾಯ್ಕ್, ರಾ.ವಿ.ಯೋ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ, ಯಲ್ಲಾಪುರ ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷೆ ಸುನಂದದಾಸ್, ಜಿಲ್ಲಾ ಪ್ರಭಾರಿ ಪ್ರಸನ್ನ ಕೆರೆಕೈ, ಸಹ ಪ್ರಭಾರಿ ಎನ್.ಎಸ್.ಹೆಗಡೆ , ಉಷಾ ಹೆಗಡೆ, ಘಟ್ಟದ ಮೇಲಿನ ತಾಲೂಕುಗಳ  ಮಂಡಲಾಧ್ಯಕ್ಷರುಗಳು, ಮೂರು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.


     ಪ್ರಭಾತ್ ಸುಬ್ರಹ್ಮಣ್ಯ ಭಟ್ ವಂದೇ ಮಾತರಂ ಗೀತೆ ಹಾಡಿದನು. ಗಿರೀಶ್ ಪಟೇಲ್ ಪ್ರಾಸ್ತಾವಿಕ ನುಡಿದರು. ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಪಕ್ಷದ ಸಂಘಟನೆ ಕುರಿತು ಮಾಹಿತಿ ನೀಡಿದರು. ಗುರುಪ್ರಸಾದ್ ನಿರೂಪಿಸಿದರು. ಉಷಾ ಹೆಗಡೆ ವಂದಿಸಿದರು.



ಕಾರ್ಯಕ್ರಮದ ಮದ್ಯದಲ್ಲಿ ಮಾಜಿ ವಿಧಾನಸಭಾದ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತಿನ ಮದ್ಯೆ ಕರೆಂಟ್ ಹೋಗಿತ್ತು ಆ ವೇಳೆ ಕಾಂಗ್ರೆಸ್ ಪಕ್ಷದ ಉಚಿತ ವಿದ್ಯುತ್ ಯೋಜನೆಗೆ 200 ಯುನಿಟ್  ಗಡಿ ಇರುವುದರಿಂದ ಕರೆಂಟ್ ಹೊಯ್ತು ಎಂಬ ಮಾತು ಸಭೆಯ ಮದ್ಯೆ ಕೇಳಿ ಬರುತ್ತಲೆ ಸಭೆ ನಗೆಗಡಲಲ್ಲಿ ತೇಲಿತು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *