Breaking News

ಮುರಿದು ಬಿದ್ದಿರುವುದು ಫಲಕವೆ ಆದರು ಗೌರವ ತಗ್ಗುವುದು ಇಲಾಖೆಗೆ ಅದರ ಅನ್ನ ತಿನ್ನುವ ಅಧಿಕಾರಿಗಳಿಗೆ..!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ಸರ್ಕಾರದ್ದು ಎಂದ ಕೂಡಲೇ ಆಲಸ್ಯ, ನಿರ್ಲಕ್ಷ್ಯ ಬೇಜವಾಬ್ದಾರಿ ಮತ್ತು ನನ್ನದಲ್ಲ ಎಂಬ ಭಾವ ಅದೇಕೋ ಬಹುಸಮಯದಿಂದ ಕೆಲವು ಇಲಾಖೆ ಮತ್ತು ಅಧಿಕಾರಿಗಳ ತಲೆಯಲ್ಲಿ ತುಂಬಿಬಿಟ್ಟಿದೆ. ಅದಕ್ಕೆ ತಾಜಾ ಉದಾಹರಣೆ; ಯಲ್ಲಾಪುರದ ಹಳೆಯ ತಹಸೀಲ್ದಾರ ಕಚೇರಿ ಆವರಣದಲ್ಲಿರುವ ಉಪ ಖಜಾನೆ ಕಚೇರಿಯ ನಾಮಫಲಕ ಬಹು ಸಮಯದಿಂದ ಮುರಿದು ಬಿದ್ದಿದ್ದು ಪ್ರತಿ ನಿತ್ಯ ಅದೇ ಕಚೇರಿ ಸಂಬಧಿಸಿದ ಅಧಿಕಾರಿಗಳು, ಸಿಬ್ಬಂದಿ ವರ್ಗ ಕಣ್ಣಾರೆ ನೋಡಿ ಸುಮ್ಮನಿರುತ್ತಾರೆಯೇ ವಿನಃ ದುರಸ್ಥಿ ಮಾಡುವ ಅಥವಾ ಮಾಡಿಸುವ ಕಡೆ ಗಮನವೇ ಹರಿಸಿಲ್ಲ ಎಂಬುದು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.


ವಿಷಯ ಸಣ್ಣದಾದರೂ ಒಳಗಿನ ಅರ್ಥ ವಿಸ್ತಾರವಾಗಿದೆ. ಯಾವುದೇ ವ್ಯಕ್ತಿ ತಮ್ಮ ಸ್ವಂತ ಮನೆಯ ಬೇಲಿಯ ಗೂಟ ಬಿದ್ದರೂ ಒಂದೇ ದಿನದಲ್ಲಿ ನಿಂತು ಸರಿಪಡಿಸುತ್ತಾನೆ. ಅದು ನನ್ನದು ಎಂಬ ಭಾವವಿರುವುದರಿಂದ . ಅದೇ ಸರ್ಕಾರದ ವ್ಯವಸ್ಥೆಯಲ್ಲಿ ಇಂತಹದೊAದು ಘಟನೆ ನಡೆದರೆ ಮೇಲಿನ ಎಲ್ಲ ಪದಗಳೂ ಅನ್ವಯಿಸುತ್ತದೆ. ಆಲಸ್ಯ, ನಿರ್ಲಕ್ಷ ಬೇಜವಾಬ್ದಾರಿ ಮತ್ತು ನನ್ನದಲ್ಲ ಎಂಬ ಭಾವ. ಇಂತಹ ಮನಸ್ಥಿತಿಯಿಂದ ಸಾರ್ವಜನಿಕರಾಗಲೀ, ಸರ್ಕಾರಿ ಅಧಿಕಾರಿ ಸಿಬ್ಬಂದಿಗಳಾಗಲ;ಈ ಹೊರಬರಬೇಕಿದೆ. ಎಲ್ಲವೂ ನಮ್ಮದೇ ಎಂಬ ಭಾವವಿದ್ದರೆ ಬಿದ್ದಿರುವ ಉಪಖಜಾನೆಯ ಫಲಕ ಎಂದೋ ಸರಿಯಾಗುತ್ತಿತ್ತು.
ಸಂಬಂಧಿಸಿದ ಕಚೇರಿಯ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಫಲಕ ಸರಿಪಡಿಸಬೇಕಿದೆ. ಇಲ್ಲವಾದಲ್ಲಿ ನಿಮಗೆ ವೃತ್ತಿ ನೀಡಿ ಅನ್ನ ನೀಡುತ್ತಿರುವ ಇಲಾಖೆಯ ಸ್ವತ್ತನ್ನು ಮತ್ತು ಘನತೆಗೆ ಧಕ್ಕೆ ತಂದರೆ ಅರ್ಥವಿಲ್ಲದಂತಾಗಲಿದೆ ಎಂಬುದು ಪ್ರತಿನಿತ್ಯ ಫಲಕವನ್ನು ನೋಡುತ್ತಿರುವ ಪ್ರಜ್ಞಾವಂತ ನಾಗರೀಕರ ಅಭಿಪ್ರಾಯವಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *