Breaking News

ಸಚಿವ ಹೆಬ್ಬಾರ್ ರಿಂದ ಯಲ್ಲಾಪುರದಲ್ಲಿ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆ

ಅಭಿವೃದ್ಧಿ ಕಡೆಗೆ ಹೆಬ್ಬಾರ್ ನಡಿಗೆ

ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ….

ಪ್ರತಿಧ್ವನಿ,ಯಲ್ಲಾಪುರ : ನನ್ನ ಸಾರ್ವಜನಿಕ ಜೀವನದ ಕೊನೆಯವರೆಗೂ ಬಡವರಿಗೆ ಅನ್ಯಾಯವಾಗಲು ಬಿಡುವುದಿಲ್ಲ, ಬಡವರಿಗೆ ಅನ್ಯಾಯ ಮಾಡುವುದೂ ಇಲ್ಲ. ಬಡತನ ನಿರ್ಮೂಲನೆಗೆ ಕಂಕಣಬದ್ಧನಾಗಿದ್ದೇನೆ. ಕಾರಣ ಬಡತನವನ್ನು ಅನುಭವಿಸಿ ಬಂದವನು ನಾನು. ಕಾರ್ಮಿಕರ ಶ್ರೇಯೋಭಿವೃದ್ದೀಗೆ ಶ್ರಮಿಸಿದ್ದೇನೆ. ಬರಲಿರುವ ಚುನಾವಣೆಯಲ್ಲಿ ನನ್ನ ಅಭಿವೃದ್ಧಿ ಕಾರ್ಯಗಳೇ ಮಾತನಾಡಲಿವೆ. 70 ಕೋಟಿಗೂ ಅಧಿಕ ಅಭಿವೃದ್ದಿ ಕಾಮಗಾರಿಗಳು ಮತ್ತು ಬೃಹತ್ ಕಟ್ಟಡಗಳ ಉದ್ಘಾಟನೆಯನ್ನು ನೆರವೇರಿಸಿದ್ದು ಎಷ್ಟು ಮಾಡಿದರೂ ಮತ್ತಷ್ಟು ಬಡವರಿಗಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ತುಡಿತ ನನ್ನೊಳಗಿದೆ. ಅದಕ್ಕಾಗಿ ನನ್ನ ಮಾಲೀಕರಾದ ನೀವು ಆಶೀರ್ವದಿಸಬೇಕಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ನನ್ನ ಉಸಿರಿರುವವರೆಗು ಬಡವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಹೆಬ್ಬಾರ್ ದಿಟ್ಟ ನುಡಿ


ಅವರು ಯಲ್ಲಾಪುರ ಪಟ್ಟಣ ವ್ಯಾಪ್ತಿಯ ಅನೇಕ ಅಭಿವೃದ್ದಿ ಕಾಮಗಾರಿಗಳ ಭೂಮಿಪೂಜೆ, ಉದ್ಘಾಟನೆ ಫಲಾನುಭವಿಗಳಿಗೆ ಟ್ಯಾಬ್ ಮತ್ತು ರಾತ್ರಿ ಧಿರಿಸು ವಿತರಿಸಿ ಕಾರ್ಮಿಕ ಕಲ್ಯಾಣ ಮಂಟಪ ಉದ್ಘಾಟಿಸಿ ಮಾತನಾಡಿದರು.

ಯಾರಿಗು ತಿಳಿಯದೆ ಎಲೆ ಮರೆಯಲ್ಲಿಯೆ ಇದ್ದು ಹೆಸರಿಗೆ ಮಾತ್ರ ಒಂದು ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕ ಇಲಾಖೆಯನ್ನು ಬೇರೆಲ್ಲಾ ಪ್ರಮುಖ ಇಲಾಖೆಗಳ ಸಾಲಿಗೆ ಕೊಂಡೊಯ್ದ ಕೀರ್ತಿ ಸಚಿವರಾದ ಶಿವರಾಮ್ ಹೆಬ್ಬಾರ್ ಅವರಿಗೆ ಲಭಿಸುತ್ತದೆ. ಮುಂದಿನ ನೂರಾರು ವರ್ಷಗಳ ಕಾಲ ಈ ಸೇವೆ ಇಲಾಖೆಯ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ. ಕೇವಲ ಕಾರ್ಮಿಕರ ಏಳಿಗೆ ಮಾತ್ರವಲ್ಲದೆ ಇಲಾಖೆಯಲ್ಲಿ ದುಡಿಯುವ ಅಧಿಕಾರಿಗಳಿಗು ಉನ್ನತ ಗೌರವ ಸ್ಥಾನಮಾನ ಲಭಿಸಿರುವುದು ಸಹ ಹೆಬ್ಬಾರ್ ಶ್ರಮದ ಫಲವಾಗಿದೆ. ಹುಟ್ಟಿನಿಂದ ಸಾವಿನ ವರೆಗು ಕಾರ್ಮಿಕರ ಬದುಕಿನಲ್ಲಿ ಇಲಾಖೆಯು ಎಲ್ಲಾ ವಿಧದಲ್ಲು ಪ್ರತಿ ಹಂತದಲ್ಲು ಜೊತೆಯಾಗಿರುವಂತಹ ದೇಶಕ್ಕೆ ಮಾದರಿಯಾಗಬಲ್ಲ ಯೋಜನೆ ಅನುಷ್ಟಾನಗೊಳಿಸಿ ಕೇಂದ್ರ ಸರ್ಕಾರದ ಪ್ರಶಂಸೆಗು ಪಾತ್ರವಾಗಿದೆ ಇದಕ್ಕೆಲ್ಲ ಕಾರಣೀಕರ್ತರಾದ ಸಚಿವ ಶಿವರಾಮ್ ಹೆಬ್ಬಾರ್ ಅವರ ಸೇವೆ ಅಜರಾಮರ. ನಾಗೇಶ್ ಡಿ.ಜಿ ಉಪ ಕಾರ್ಮಿಕ ಆಯುಕ್ತರು ಬೆಳಗಾವಿ ವಿಭಾಗ

ನೂತನವಾಗಿ ನಿರ್ಮಾಣವಾದ ಕಾರ್ಮಿಕ ಭವನ ಉದ್ಘಾಟಿಸಿದ ಸಚಿವರು
ಕಾರ್ಮಿಕ ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾಗಲೆಂದು ಟ್ಯಾಬ್ ವಿತರಣೆ


ಪಟ್ಟಣ ಪಂಚಾಯತ ಠರಾವಿನಲ್ಲಿ ಹೆಬ್ಬಾರ್ ನಗರವೆಂದು ನಾಮಕರಣ ಮಾಡಿ ಸರ್ಕಾರಕ್ಕೆ ಕಳುಹಿಸಿದ ನಂತರ ಕ್ಯಾಬಿನೆಟ್‌ನಲ್ಲಿ ಅನುಮೋದನೆ ಪಡೆದು 10 ಎಕರೆ ಭೂಮಿಯನ್ನು ಪಟ್ಟಣ ಪಂಚಾಯತಕ್ಕೆ ನೀಡಿದ್ದು ಅದು ನನ್ನ ಸ್ವಂತ ಆಸ್ತಿಯಲ್ಲ, ಬಡ ಮಧ್ಯಮವರ್ಗದವರ ಸೂರಿಲ್ಲದ ಕನಸು ನನಸಾಗಿಸಿ ಎಲ್ಲ ವರ್ಗದವರಿಗೂ ಅನುಕೂಲವಾಗುವಂತೆ ಕಲ್ಯಾಣ ಮಂಟಪ ನಿರ್ಮಿಸಿ ಬರಲಿರುವ ದಿನಗಳಲ್ಲಿ ಕಾಲೇಜು, ಕ್ರೀಡಾಂಗಣ, ವಾಣಿಜ್ಯ ಸಂಕೀರ್ಣ ಇನ್ನಿತರ ಮೂಲಭೂತ ವ್ಯವಸ್ಥೆಯನ್ನು ಒದಗಿಸುವ ಕಾರ್ಯ ನಡೆಯುತ್ತಿದ್ದು ವಿರೋಧಿಗಳಿಗೆ ಹೇಳಿಕೊಳ್ಳಲು ವಿಷಯವೇ ಇಲ್ಲದಾಗ ಎಲ್ಲವನ್ನೂ ಹೆಬ್ಬಾರ್ ನಗರಕ್ಕೇ ಮಾಡುತ್ತಿದ್ದಾರೆಂಬ ಮಾತುಗಳನ್ನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ನೂತನ ಆಡಳಿತ ಸೌಧ ಉದ್ಘಾಟಿಸಿ ಸಭಾ ಕೊಠಡಿಯೊಳಗೆ ಕುಳಿತು ಮತ್ತಷ್ಟು ಸೌಲಭ್ಯಗಳ ಅಳವಡಿಕೆಗೆ ಸೂಚನೆ ನೀಡಿದ ಸಂದರ್ಭ


ಗುರುವಾರ ಪಟ್ಟಣದಲ್ಲಿ 4.5 ಕೋಟಿ ವೆಚ್ಛದ ನೂತನ ಪ.ಪಂ ಕಾರ್ಯಾಲಯ, 2.5 ಕೋಟಿ ವೆಚ್ಛದ ನೂತನ ಕಾರ್ಮಿಕ ಇಲಾಖೆಯ ಕಾರ್ಯಾಲಯ, 8 ಕೋಟಿ ವೆಚ್ಛದ ತಾಲೂಕು ಆಡಳಿತ ಸೌಧ ,40 ಕೋಟಿ ವೆಚ್ಛದ G+2 ಮಾದರಿಯ ವಸತಿ ಮನೆ ಸಮುಚ್ಛಯ ಉದ್ಘಾಟಿಸಿದ್ದಲ್ಲದೇ 9 ಕೋಟಿ ವೆಚ್ಛದ ಬೃಹತ್ ಕಾರ್ಮಿಕ ಕಲ್ಯಾಣ ಮಂಟಪ ಉದ್ಘಾಟಿಸಿದ ಸಚಿವರು ಟಯೋಟ ಕಿರ್ಲೋಸ್ಕರ್ ಕಂಪನಿಯೊದಿಗೆ ಮಾತನಾಡಿ ಕ್ಷೇತ್ರದ 100 ಅಂಗನವಾಡಿಗಳಿಗೆ ಮಕ್ಕಳ ಆಟಿಕೆ ಸಾಮಾನುಗಳನ್ನು ಮಂಜೂರು ಮಾಡಿಸಿ ಸಾಂಕೇತಿಕವಾಗಿ ಪಟ್ಟಣದ ಗಣಪತಿಗಲ್ಲಿ ಮತ್ತು ರವೀಂದ್ರನಗರದ ಅಂಗನವಾಡಿಗಳಿಗೆ ಸಾಮಗ್ರಿಗಳನ್ನು ವಿತರಿಸಿದರು.

ಗಣಪತಿ ಗಲ್ಲಿ ಅಂಗನವಾಡಿ ಮಕ್ಕಳಿಗೆ ಆಟಿಕೆ ಕಲಿಕಾ ಸಾಮಾಗ್ರಿ ವಿತರಣೆ
ರವೀಂದ್ರ ನಗರ ಅಂಗನವಾಡಿಯಲ್ಲಿ ಮಕ್ಕಳಿಗೆ ಆಟಿಕೆ ಕಲಿಕಾ ಸಾಮಾಗ್ರಿ ವಿತರಣೆ
ಅತ್ಯಾಧುನಿಕವಾಗಿ ಸುಂದರವಾಗಿ ನಿರ್ಮಾಣವಾದ ಹೆಬ್ಬಾರ್ ನಗರದ ಕಲ್ಯಾಣ ಮಂಟಪ ಉದ್ಘಾಟಿಸಿದ ಸಂದರ್ಭ
ಹೆಬ್ಬಾರ್ ನಗರದಲ್ಲಿ ತಲೆ ಎತ್ತಿರುವ G+2 ಮಾದರಿ ವಸತಿ ಸಮುಚ್ಚಯವನ್ಮು ಸಚಿವರು ಉದ್ಘಾಟಿಸಿದರು.
ನೂತನವಾಗಿ ನಿರ್ಮಾಣವಾದ ಪಟ್ಟಣ ಪಂಚಾಯತ್ ಉದ್ಘಾಟನೆ
ವಿಶೇಷಚೇತನ ಆಯ್ದ ಫಲಾನುಭವಿಗಳಿಗೆ 45 ತ್ರಿಚಕ್ರ ವಾಹನ ವಿತರಣೆ

ಆಧುನಿಕ ಪ್ರಪಂಚದಲ್ಲಿ ಎಲ್ಲಾ ಉದ್ಯೋಗದಲ್ಲಿ ಹೈಟೆಕ್ ಮಾದರಿಗಳು‌ ಕೇವಲ ಖಾಸಗಿ ವಲಯದಲ್ಲಿ ಅಂದರೆ ಕೇವಲ ಕರ್ಪೊರೇಟ್ ವಲಯಕ್ಕೆ ಮಾತ್ರ ಸೀಮಿತ ಎಂಬ ಮಾತನ್ನು ಸುಳ್ಳಾಗಿಸಿ ಯಾವುದೆ ಐಷಾರಾಮಿ ಕಚೇರಿಗು ಕಡಿಮೆ ಇಲ್ಲದಂತೆ ಅತ್ಯಾಧುನಿ ವ್ಯವಸ್ಥೆ ಒಳಗೊಂಡ ಸುಸಜ್ಜಿತ ಸುಂದರ ತಾಲೂಕು ಆಡಳಿತ ಸೌಧ ನಿರ್ಮಿಸಿ ಕೊಟ್ಟ ಹಿರಿಮೆ ಸಚಿವರಾದ ಶಿವರಾಮ್ ಹೆಬ್ಬಾರ್ ಅವರಿಗೆ ಸಲ್ಲುತ್ತದೆ. ಕಂದಾಯ ಇಲಾಖೆ ವತಿಯಿಂದ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇಲಾಖೆಯ ಕಚೇರಿ ವಾತವರಣ ಮಾತ್ರ ಉತ್ತಮವಾಗಿದ್ದರೆ ಸಾಲದು ಸರ್ಕಾರಿ ಕೆಲಸಕ್ಕಾಗಿ ಬರುವ ಸಾರ್ವಜನಿಕರ ಕುಂದುಕೊರತೆಗೆ ಶೀಘ್ರವಾಗಿ ಸ್ಪಂಧಿಸಿ ಉತ್ತಮ ನಡವಳಿಕೆಯಿಂದ ಇಲಾಖೆಗೆ ಒಳ್ಳೆಯ ಹೆಸರು ತರುವುದು ಸಿಬ್ಬಂದಿಗಳ ಕಾರ್ಯ ಆಗಬೇಕಿದೆ. ದೇವರಾಜ್ ಆರ್, ಸಹಾಯಕ ಆಯುಕ್ತರು ಶಿರಸಿ ಉಪವಿಭಾಗ

ಉನ್ನತ ದರ್ಜೆಯ ಉತ್ತಮ ಆಡಳಿತ ಸೌಧ ನೀಡಿ ಕಂದಾಯ ಇಲಾಖೆಗೆ ನೀಡಿದ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ಶಿರಸಿ ವಿಭಾಗದ ಸಹಾಯಕ ಆಯುಕ್ತ ಆರ್.ದೇವರಾಜ್


ಎ.ಪಿ.ಎಂ.ಸಿ ಆವಾರದಲ್ಲಿ ತಾಲೂಕಿನ ಅರ್ಹ 45 ಮಂದಿ ವಿಶೇಷ ಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದರು. ನಂತರ ಪ.ಪಂ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ಮಾಡಿದರು. ಒಟ್ಟಿನಲ್ಲಿ ಯುಗಾದಿ ಸಂಭ್ರಮದ ಮರುದಿನವೇ ಪಟ್ಟಣದಾದ್ಯಂತ ಅಭಿವೃದ್ಧಿಯ ವರ್ಷಧಾರೆಗೈದ ಶಿವರಾಮ ಹೆಬ್ಬಾರ್ ಚುನಾವಣೆ ಘೋಷಣೆಯಾಗುವ ಹಿನ್ನೆಲೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ಮಾಡುತ್ತಾ ಕೊನೆಯ ಹಂತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ದೇವರಾಜ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಕುರಂದಕರ, ತಹಶಿಲ್ದಾರ ಶಂಕರಪ್ಪ, ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುನಂದದಾಸ್, ಉಪಾಧ್ಯಕ್ಷೆ ಶಾಮಿಲಿ ಪಾಟಣ್ಕರ್, ಮುಖ್ಯಾಧಿಕಾರಿ ಸಂಗನ ಬಸಯ್ಯ, ಸಾಮಾಜಿಕ ಕಾರ್ಯಕರ್ತ ವಿಜಯ್ ಮಿರಾಶಿ, ಯಲ್ಲಾಪುರ ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್, ಬೆಳಗಾವಿ ವಿಭಾಗದ ಕಾರ್ಮಿಕ ಇಲಾಖೆ ಉಪ ಆಯುಕ್ತ ನಾಗೇಶ್ ಡಿ.ಜಿ, ಸಹಾಯಕ ಆಯುಕ್ತರಾದ ಶ್ವೇತಾ ಶ್ರೀನಿವಾಸ್, ಜಿಲ್ಲಾ ಕಾರ್ಮಿಕ ಅಧಿಕಾರಿ ಅಕ್ಬರ್ ಎಚ್ ಮುಲ್ಲಾ, ಹಿರಿಯ ಕಾರ್ಮಿಕ ನಿರೀಕ್ಷಕ ಅಶೋಕ್ ಒಡೆಯರ್, ಸ್ಥಳೀಯ ಪ್ರಮುಖರಾದ ವಿಕಾಸ್ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಶಿರೀಫ್ ಪ್ರಭು, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್‌ಎಸ್ ಭಟ್, ಕಂದಾಯ ,ಕಾರ್ಮಿಕ, ಪಟ್ಟಣ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ ಇನ್ನಿತರ ಇಲಾಖೆಗಳ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗ ಮತ್ತು ಜನಪ್ರತಿನಿಧಿಗಳು, ಫಲಾನುಭವಿಗಳು, ಸಾರ್ವಜನಿಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ತಾಲೂಕಾಡಳಿತ ಮತ್ತು ಲೋಕೋಪಯೋಗಿ ಇಲಾಖೆಯ ವತಿಯಿಂದ ಗೌರವಾರ್ಪಣೆ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *