Breaking News

ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ಸಮಾಜಮುಖಿ ಕಾರ್ಯ – ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ

ಪ್ರತಿಧ್ವನಿ ಯಲ್ಲಾಪುರ : ಸಮಾಜದಲ್ಲಿ ಎಲ್ಲಾ ರಂಗದವರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಿ ಆದರಿಸುವುದು ಸಾಮಾನ್ಯ ಆದರೆ ಆಟೋರಿಕ್ಷಾ ಚಾಲಕರು ಮತ್ತು ಮಾಲಕರನ್ನು ಗೌರವಿಸುವ ಒಂದು ವಿಧಾಯಕ ಸಮಾಜ ಸೇವಾ ಕಾರ್ಯ ಹಮ್ಮಿಕೊಂಡಿರುವ ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ಅವರ ಸಾರ್ಥಕ ಕಾರ್ಯ ನಿರಂತರವಾಗಿ ನಿರ್ವಿಘ್ನವಾಗಿ ಸಾಗಲಿ. ಸಮಾಜದಲ್ಲಿ ಚಾಲಕ ವೃತ್ತಿ ಅತ್ಯಂತ ಶ್ರೇಷ್ಠ ಸ್ಥಾನವಾಗಿ ಮಾರ್ಪಾಡಾಗಿದೆ ದೇಶದ ಪ್ರಧಾನಿಯಿಂದ ಹಿಡಿದು ಸಾಮಾನ್ಯ ಅಧಿಕಾರಿಗಳು ಚಲಕನ ಅವಶ್ಯಕತೆ ಇದ್ದೇ ಇದೆ ಅಂತಹವರನ್ನು ಗುರುತಿಸಿ ಬೆನ್ನೆಲುಬಾಗಲು ಮುಂದಾಗುವ ಎಲ್ಲರಿಗು ನನ್ನ ವಂದನೆಗಳು ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು


     ಅವರು ಪಟ್ಟಣದ ಅಡಿಕೆ ಭವನದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಯಲ್ಲಾಪುರ ಆಟೋ ಚಾಲಕರ ಮತ್ತು ಮಾಲಕರಿಗೆ ಔತಣ,ಸಮವಸ್ತ್ರ, ಪಾಸಿಂಗ್, ಮತ್ತು ಪ್ರಿಂಟಿಂಗ್ ಹುಡ್ ವಿತರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


     ಇರುವುದೆಲ್ಲಾ ನನಗೆ ಬೇಕು ಎನ್ನುವ ಧನಿಕರ ಮದ್ಯೆ ನನಗೆ ಒಲಿದ ವರಮಾನದಲ್ಲಿ ಕೊಂಚ  ಬಡವರಿಗೆ ಸಮಾಜದಲ್ಲಿ ಸೇವೆ ಸಲ್ಲಿಸಿದರೆ ಅದು ಆತ್ಮ ತೃಪ್ತಿ ನೀಡಲಿದೆ ಇಂತಹ ಸಾರ್ಥಕ ಕಾರ್ಯ ‌ಮಾಡುವ ಕೈಂಕರ್ಯ  ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ಅವರ ಸೇವೆ ಸ್ಮರಣೀಯವಾದುದು ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿ.ಎಸ್.ಪಾಟೀಲ್ ಹೇಳಿದರು.


    ವೇದಿಕೆಯಲ್ಲಿ ಹತ್ತು ರಿಕ್ಷಾ ಚಾಲಕರ ಪತಿಗಳಿಗೆ ಅವರ ಸೇವೆ ಪರಿಗಣಿಸಿ ಶಾಲುಹೊದೆಸಿ ಗೌರವಿಸಿ ಸನ್ಮಾನಿಸಲಾಯಿತು.

ಭವಿಷ್ಯದಲ್ಲಿ ರಾಜಕೀಯ ರಂಗಕ್ಕೆ ಉದಯೋನ್ಮುಖ ನಾಯಕನ ಪ್ರವೇಶವಾಗುತ್ತಿದೆ ಸಮಾಜದೊಂದಿಗಿನ ಬದ್ದತೆ ಸೇವಾ ಮನೋಭಾವ ಬಡವರ ಬಗೆಗಿನ ಕಾಳಜಿ ಮುಂದೆ ಭವಿಷ್ಯದ ರಾಜಕೀಯ ರಂಗದಲ್ಲಿ ಮುಂದಾಗುವ ನಾಯಕತ್ವದ ಗುಣಗಳು ಅನಂತಮೂರ್ತಿ ಹೆಗಡೆಯವರಲ್ಲಿ ಕಾಣಿಸುತ್ತಿದೆ
ಪ್ರಮೋದ್ ಹೆಗಡೆ.
ಉಪಾಧ್ಯಕ್ಷ
ಪಂಚಾಯತ್ ರಾಜ್ ವಿಕೇಂದ್ರೀಕರಣ ಯೋಜನ ಸಮಿತಿ


     ಸಾಂಸ್ಕೃತಿಕ ರಾಯಭಾರಿ ಪ್ರಮೋದ್ ಹೆಗಡೆ,  ಹಿರಿಯ ಉದ್ಯಮಿ ಡಿ,ಶಂಕರ ಭಟ್, ಜಿಲ್ಲಾ ಆಟೋರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಶಿವರಾಜ್ ಮೇಸ್ತ , ಯಲ್ಲಾಪುರ ತಾಲೂಕಾಧ್ಯಕ್ಷ ಸಂತೋಷ್ ನಾಯ್ಕ್ ಅವರು ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ಜನಪರ ಸೇವೆಯ ಕುರಿತು ಅಭಿನಂದಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 10 ಸಾವಿರಕ್ಕು ಅಧಿಕ‌ಆಟೋ ರಿಕ್ಷಾಗಳಿಂದ ನೂರಾರು ಕೋಟಿ ತೆರಿಗೆ ಸಂಗ್ರಹವಾಗುತ್ತಿದ್ದರು ಆಟೋ ಚಾಲಕರಿಗೆ ಬಿಡಿಗಾಸಿನ ಸಹಾಯವನ್ನು ಸರ್ಕಾರ ಮಾಡದಿರುವುದು ದುರಂತ ಇಂತಹ ಕಷ್ಟಕಾಲದಲ್ಲಿ ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಕುಟುಂಬದ ಅಳಲನ್ನು ತೊಡೆದು ಹಾಕಲು ಬಂದ ಧೀಮಂತ ನಾಯಕ ಅನಂತಮೂರ್ತಿ ಹೆಗಡೆ ಅವರಾಗಿದ್ದಾರೆ ಅವರ ಓ ನಿಸ್ವಾರ್ಥ ಸೇವೆಗೆ ಯಲ್ಲಾಪುರ ತಾಲೂಕಿನ ಎಲ್ಲಾ ಆಟೋಚಾಲಕರ ಮಾಲಕರ ಕೃತಜ್ಞತೆಗಳು.
ಸಂತೋಷ್ ನಾಯಕ
ಯಲ್ಲಾಪುರ ತಾಲೂಕಿನ ಆಟೋ ಚಾಲಕ ಸಂಘದ ಪ್ರಮುಖ

ಸಾರ್ಥಕ ಸಮಾಜಸೇವಾ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಲು ಯಲ್ಲಾಪುರ ತಾಲೂಕಿನ ಆಟೋರಿಕ್ಷಾ ಚಾಲಕ ಮಾಲಕರ ವತಿಯಿಂದ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಉದ್ಯಮಿ ಬಾಲಕೃಷ್ಣ ನಾಯಕ್, ಅನಂತಮೂರ್ತಿ ಹೆಗಡೆ ಅವರ ಮಾತಪಿತೃಗಳಾದ ಮಹಾಬಲೇಶ್ವರ ಹೆಗಡೆ, ಶಾರದಾ ಭಟ್, ಉಪಸ್ಥಿತರಿದ್ದರು
     ನಯನ ಭಟ್ ಪ್ರಾರ್ಥಿಸಿದರು. ಚಾರಿಟಬಲ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಪ್ರಾಸ್ತಾವಿಕ ನುಡಿದರು. ಗಿರಿಧರ್ ಕಬ್ನಳ್ಳಿ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದ ನಂತರ ಎಲ್ಲರಿಗು ಭೋಜನದ ವ್ಯವಸ್ಥೆ ಮಾಡಲಾಗಿತ್ತು
ಟ್ರಸ್ಟ್ ಸಂಸ್ಥಾಪಕ ಮತ್ತು ಮುಖ್ಯಸ್ಥ ಅನಂತಮೂರ್ತಿ ಆಟೋ ಚಾಲಕರಿಗೆ ಸಮವಸ್ತ್ರ ನೀಡಿ ಇತರೆ ಸೌಲಭ್ಯಗಳನ್ನು ನೀಡುವುದನ್ನು ಹೇಳಿ ಕಾರ್ಯಕ್ರಮದ ನಂತರದಲ್ಲಿ ಅವರಿಗಾಗಿ ಆಯೋಜಿಸಿದ್ದ ಔತಣಕೂಟದಲ್ಲಿ ಜೋತೆಯಾಗಿ ಕುಳಿತು ಭೋಜನ ಸ್ವೀಕರಿಸಿ ಸೇವಾ ಸರಳತೆ ತೋರಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *