

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಪಟ್ಟಣದ ಪ್ರತಿಷ್ಠಿತ ” ಶ್ರೀ ಲಕ್ಷ್ಮೀ ನಾರಾಯಣ ವೆಂಕಟರಮಣ ಮಠ ” ದಲ್ಲಿ 42 ನೆ ಪ್ರತಿಷ್ಟಾ ವರ್ಧಂತಿ ಉತ್ಸವವು ಸತತ 5 ದಿನಗಳ ಕಾಲ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ಜರುಗಲಿದೆ. ಸದ್ಬಕ್ತರು ಸರ್ವ ಕಾರ್ಯಗಳಲ್ಲಿ ಪಾಲ್ಗೊಂಡು ಶ್ರೀ ಹರಿ ಶ್ರೀ ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಮಠದ ಆಡಳಿತ ಮಂಡಳಿ ಕರೆ ನೀಡಿದೆ.
ದಿನಾಂಕ 23 ರ ಶುಭ ರವಿವಾರದಂದು ಪರಮ ಪೂಜನೀಯ ಗುರುವರ್ಯರಾದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠಾಧೀಶ ಶ್ರೀಮದ್ ವಿಧ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರನ್ನು ಭವ್ಯ ಮೆರವಣಿಗೆಯಲ್ಲಿ ಶ್ರೀ ಮಠಕ್ಕೆ ಬರಮಾಡಿಕೊಳ್ಳುವುದು.
ಸ್ವಾಗತ ಮತ್ತು ವರ್ಧಂತಿ ಉತ್ಸವ ಕಾರ್ಯಕ್ರಮದ ವಿವರ.
ಅಧ್ಯಕ್ಷರು ಮತ್ತು ಅರ್ಚಕರಿಂದ ಶ್ರೀಗಳ ಪಾದಪೂಜೆ.
ಶ್ರೀಗಳಿಂದ ಆಶಿರ್ವಚನ ಮತ್ತು ಭೋಜನ ಪ್ರಸಾದ.
ದಿನಾಂಕ 24 ರ ಸೋಮವಾರ
ಮುಂಜಾನೆ 8 ಗಂಟೆಗೆ ಶ್ರೀ ದೇವತಾ ಪ್ರಾರ್ಥನೆ.
ಶ್ರೀ ಗಣಪತಿ ಪೂಜನ ಲಘು ವಿಷ್ಣು ಹವನ.
ಶ್ರೀ ಗುರು ಮಾರುತಿ ದೇವಸ್ಥಾನಕ್ಕೆ ಭೇಟಿ.
ಮದ್ಯಾಹ್ನ ಶ್ರೀಗಳಿಂದ ಶತಕಲಾಷಾಭಿಶೇಕ
ಪೂಜ್ಯ ಶ್ರೀಗಳಿಗೆ ಬಿಕ್ಷಾಸೇವೆ, ಪಾದಪೂಜೆ.
ಸಂಜೆ 8 ಗಂಟೆಗೆ ಶ್ರೀ ದೇವರ ಪಲ್ಲಕ್ಕಿ ಉತ್ಸವ ಅಷ್ಟಾವಧಾನ ಸೇವೆ.
ದಿನಾಂಕ 25 ರ ಮಂಗಳವಾರ
ಮುಂಜಾನೆ 10 ಗಂಟೆಗೆ ಶ್ರೀಗಳಿಂದ ತಪ್ತ ಮುದ್ರಾಧಾರಣೆ.
ದಿನಾಂಕ 26, 27 ,28 ರ ದಿನಗಳಲ್ಲಿ
ಪೂಜ್ಯ ಶ್ರೀಗಳಿಗೆ ಬಿಕ್ಷಾ ಸೇವೆ, ಪಾದಪೂಜೆ, ಅಧ್ಯಕ್ಷರಿಂದ ಶ್ರೀಗಳ ಪಾದಪೂಜೆ, ಸಮಾರೋಪ ಸಮಾರಂಭ ನಡೆಯಲಿದೆ. ಹಾಗು ಶ್ರೀಗಳ ಮುಂದಿನ ಮುಕ್ಕಾಂ ಪ್ರಯಾಣಕ್ಕಾಗಿ ಶ್ರೀ ಗಳಿಗೆ ಬೀಳ್ಕೊಡುಗೆ ಮತ್ತು ಶ್ರೀಗಳ ನಿರ್ದೇಶನದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.
ವಿಶೇಷವಾಗಿ ಶ್ರೀ ಮಠದಲ್ಲಿ ನಿತ್ಯವು ಶ್ರೀ ರಾಮನಾಮ ಜಪ ಅಭಿಯಾನ ನಡೆಸಲಿದ್ದು ಭಕ್ತರು ಸಕುಟುಂಬ ಸಪರಿವಾರದೊಂದಿಗೆ ಶ್ರೀ ಮಠದಲ್ಲಿ ಬಡೆವ ಎಲ್ಲಾ ಧಾರ್ಮಿಕ ಕೈಂಕರ್ಯದಲ್ಲಿ ಪಾಲ್ಗೊಳ್ಳುವಂತೆ
ಶ್ರೀ ಮಠದ ಆಡಳಿತ ಮಂಡಳಿ ಕೋರಿದೆ.



Prathidvani Yellapura