
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪ್ರತಿಯೊಬ್ಬರ ಬದುಕಿನಲ್ಲಿಯೂ ನಿವೃತ್ತಿ ಎಂಬುದು ಅನಿವಾರ್ಯವಾದರೂ, ವೃತ್ತಿಯ ಸಂದರ್ಭದಲ್ಲಿ ಅನುಸರಿಸಿದ ಬಧ್ಧತೆ ಮತ್ತು ಪ್ರಾಮಾಣಿಕತೆಗಳು ಏನೆಂಬುದು ಪ್ರಮುಖವಾಗಿರುತ್ತದೆ. ಪ್ರಸ್ತುತ ಕಾಲೇಜಿನಲ್ಲಿ ಕಳೆದ ೧೬ ವರ್ಷಗಳ ಕಾಲ ಉಪನ್ಯಾಸಕರಾಗಿ ಕರ್ತವ್ಯ ಬಧ್ಧತೆಯಿಂದ ಕಾರ್ಯನಿರ್ವಹಿಸಿದ ಸುಬ್ರಹ್ಮಣ್ಯ ಭಟ್ಟರು ನಿರ್ವತ್ತರಾದುದು ನಮಗೆಲ್ಲರಿಗೂ ಬೇಸರದ ಸಂಗತಿಯಾಗಿದ್ದು, ಇನ್ನು ಮುಂದೆಯೂ ಕ್ರಿಯಾಶೀಲರಾಗಿ ತಮ್ಮನ್ನು ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಆರ್.ಜಿ.ಹೆಗಡೆ ಬೆದೆಹಕ್ಕಲು ಹೇಳಿದರು.
ಅವರು ತಾಲೂಕಿನ ಮಂಚೀಕೇರಿಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2023-24 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ನಿವೃತ್ತ ಉಪನ್ಯಾಸಕ ಸುಬ್ರಹ್ಮಣ್ಯ ಭಟ್ಟ ಅವರ ಬೀಳ್ಕೊಡುಗೆ ಸಮಾರಂಭಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಾಲೇಜು ಅಭಿವೃದ್ಧಿ ಸಮಿತಿ, ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳಿಂದ ಬೀಳ್ಕೊಡುಗೆಯ ಗೌರವ ಸ್ವೀಕರಿಸಿ, ತಾವು ಕಾಲೇಜಿಗೆ ಕೊಡುಗೆಯಾಗಿ ನೀಡಿದ `ಡಯಾಸ್’ ಅನ್ನು ಪ್ರಾಂಶುಪಾಲರಿಗೆ ಹಸ್ತಾಂತರಿಸಿ ಮಾತನಾಡಿದ ನಿವೃತ್ತ ಕನ್ನಡ ಉಪನ್ಯಾಸಕ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಮಾತನಾಡಿ, 16 ವರ್ಷಗಳ ಕಾಲ ಮಂಚೀಕೇರಿಯಲ್ಲಿ ಈ ಪ್ರದೇಶದ ಜನತೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದವರು ತೋರಿದ ಅಭಿಮಾನ ಮರೆಯಲಾಗದು.
ವಿದ್ಯಾರ್ಥಿಗಳಿಗೆ ಸಕಾರಾತ್ಮಕ ಚಿಂತನೆ, ದೂರದೃಷ್ಟಿ ಯೋಚನೆ ಹಾಗೂ ಉತ್ತಮ ಗುರಿಗಳಿದ್ದರೆ ಒಳ್ಳೆಯ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಪ್ರಾAಶುಪಾಲ ಡಿ.ಜಿ.ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಂಪ್ಲಿ ಗ್ರಾ.ಪಂ ಅಧ್ಯಕ್ಷ ವಿನಾಯಕ ನಾಯ್ಕ, ಸದಸ್ಯ ಗಣೇಶ ರೋಖಡೆ, ಉಪನ್ಯಾಸಕರಾದ ಪಾಲಯ್ಯ ಬಿ.ಎನ್., ರಾಮಕೃಷ್ಣ ನಾಯಕ, ಅಂಕೋಲಾದ ಉಪನ್ಯಾಸಕ ಮಹೇಶ ನಾಯ್ಕ, ವಿದ್ಯಾರ್ಥಿಗಳ ಪರವಾಗಿ ಸುನಿತಾ ಮರಾಠಿ, ಹರ್ಷಿತಾ ಶೇಟ್, ರಕ್ಷಿತಾ ಹೂಗಾರ್, ಮಹಾಲಕ್ಷಿö್ಮÃ ನಾಯ್ಕ, ಸ್ಮಿತಾ ನಾಯ್ಕ ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಕುಮಾರ ಹೆಗಡೆ, ಸುರೇಶÀ ನಾಯ್ಕ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ನಾಯ್ಕ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊAಡ ಕಾರ್ಯಕ್ರಮದಲ್ಲಿ ಡಿ.ಜಿ.ಹೆಗಡೆ ಸ್ವಾಗತಿಸಿದರು. ಉಪನ್ಯಾಸಕರಾದ ಗೋಪಾಲ ಗೌಡ ಪ್ರಾಸ್ಥಾವಿಕ ಮಾತನಾಡಿದರು. ಎಂ.ವಿ.ಹೆಗಡೆ ನಿರ್ವಹಿಸಿದರು, ರಾಮಕೃಷ್ಣ ನಾಯಕ ವಂದಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ನೂತನ ವರ್ಷದ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಲಾಯಿತು. ರಾಮಕೃಷ್ಣ ನಾಯಕ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ಅಧ್ಯಕ್ಷನಾಗಿ ಆಯ್ಕೆಗೊಂಡ ಪ್ರಸನ್ನ ನಾಯ್ಕ, ಉಪಾಧ್ಯಕ್ಷೆಯಾದ ರಕ್ಷಿತಾ ಹೂಗಾರ್, ಕಾರ್ಯದರ್ಶಿಯಾದ ಮಹಾಲಕ್ಷಿö್ಮ ನಾಯ್ಕ, ಮತ್ತಿತರ ವಿವಿಧ ಸಮಿತಿಗಳ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು.

Prathidvani Yellapura