

ಪ್ರತಿಧ್ವನಿ,ಯಲ್ಲಾಪುರ – ಇತಿಹಾಸದಲ್ಲಿ ಕಂಡು ಕೇಳರಿಯದ ಬಿಸಿ ದಗೆ ಮಳೆಗಾಲದ ಸಂದರ್ಭದಲ್ಲಿ ಕಾಣುತ್ತಿರುವುದು ಇದೇ ಮೊದಲು, ಇದರ ಪರಿಣಾಮ ನೇರವಾಗಿ ಬೆಳೆಗಳ ಮೇಲಾಗುತ್ತಿದ್ದು ಈಗಾಗಲೆ ಅಡಿಕೆ ಗಿಡಗಳು ಬಲಿಯಾಗುತ್ತಿವೆ. ಮಿಳ್ಳೆಗಳೆಲ್ಲ ಉದುರುತ್ತಿದ್ದು ಎಷ್ಟೇ ನೀರು ಕೊಟ್ಟರು ಪ್ರಯೋಜನವಾಗುತ್ತಿಲ್ಲ. ತೆಂಗಿನ ಮರದ ಸಿಂಗಾರವು ಬಿಸಿಲ ದಗೆಗೆ ಬಲಿಯಾಗುತ್ತಿದ್ದು ಸುರುಳಿ ಸುತ್ತುತ್ತಿದೆ. ಈ ಎಲ್ಲಾ ಕಾರಣಗಳಿಂದ ತಾಲೂಕಿನ ರೈತಾಪಿ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರ ಅವರ ನೆರವಿಗೆ ದಾವಿಸಬೇಕಿದೆ ಅದಕ್ಕಾಗಿ ಯಲ್ಲಾಪುರ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ಸೂಕ್ತ ಪರಿಹಾರ ನೀಡಬೇಕಿದೆ ಎಂದು ರೈತ ಸಂಘದ ಹಿರಿಯ ಪಿ.ಜಿ ಭಟ್ಟ ಬರಗದ್ದೆ ಹೇಳಿದರು.

ಅವರು ಪಟ್ಟಣದ ನೌಕರರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಡಿಯಲ್ಲಿ ಹೇಳಿದರು.

ಸಕಾಲಕ್ಕೆ ಮುಂಗಾರು ಬಾರದೆ ಆಹಾರ ಬೆಳೆ ಮತ್ತು ವಾಣಿಜ್ಯ ಬೆಳೆಗಳಿಗೆ ಅಪಾರ ಹಾನಿಯಾಗಿದೆ ಮುಂದೆ ಮಳೆ ಬಂದರು ರೈತ ನಷ್ಡ ಅನುಭವಿಸುವುದನ್ನು ತಪ್ಪಿಸಲಾಗದು ಈ ಎಲ್ಲಾ ದೃಷ್ಟಿಯಿಂದ ಕಂದಾಯ , ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಸರ್ವೆ ನಡೆಸಿ ಸರ್ಕಾರಕ್ಕೆ ರೈತರಿಗಾಗಿರುವ ಸಮಸ್ಯೆಯನ್ನು ಪ್ರಾಮಾಣಿಕವಾಗಿ ನೀಡಿ ಪರಿಹಾರ ಒದಗಿಸಬೇಕಿದೆ. ಕಳೆದ ಸಾಲಿನ ಬೆಳೆ ವಿಮೆ ಸಾಕಷ್ಟು ರೈತರ ಕೈ ಸೇರಿಲ್ಲ ಪ್ರಸ್ತುತ ವರ್ಷದ ವಿಮೆ ಭರಣ ಮಾಡಿಕೊಳ್ಳುತ್ತಿಲ್ಲ ಈ ಬಗ್ಗೆಯು ಗಮನಹರಿಸಬೇಕೆಂದು. ಪ್ರಮುಖವಾಗಿ ಯಲ್ಲಾಪುರ ಬರಪೀಡಿತ ತಾಲೂಕು ಎಂದು ಘೋಷಿಸಬೇಕೆಂದು ಮತ್ತೋರ್ವ ರೈತ ಪ್ರಮುಖ ಜಿ.ಎಸ್ ಭಟ್ಟ ಕಾರೆಮನೆ ಆಗ್ರಹಿಸಿದರು.

Prathidvani Yellapura