Breaking News

ಅರಬೈಲ್ ಶಿವರಾಮ ಹೆಬ್ಬಾರ್ ಎಂಬ ಹೆಸರಿನ ನಾನು.. ಹೆಬ್ಬಾರ್ ಪ್ರಮಾಣ ವಚನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ರಾಜ್ಯದಲ್ಲಿ ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿ ಆಯ್ಕೆಯಾದ ಅರಬೈಲ್ ಶಿವರಾಮ ಹೆಬ್ಬಾರ್ ಸೋಮವಾರ ಅಧಿವೇಶನದ ಮೊದಲ ದಿನ ಪ್ರಮಾಣ ವಚನ ಸ್ವೀಕರಿಸಿದರು.
ಕಾಂಗ್ರೆಸ್ ಪಕ್ಷ ನಿಚ್ಛಳ ಬಹುಮತ ಪಡೆದು ಸರ್ಕಾರ ರಚಿಸಿದ್ದು ಸೋಮವಾರ ಕರೆದ ಮೊದಲ ಅಧಿವೇಶನದಲ್ಲಿ ಹಂಗಾಮಿ ಸ್ಪೀಕರ್ ಆರ್.ವಿ ದೇಶಪಾಂಡೆಯವರ ಸಮ್ಮುಖದಲ್ಲಿ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಸಂಸ್ಕಾರವಂತ ಸಜ್ಜನ ರಾಜಕಾರಣಿ ಹೆಬ್ಬಾರ್ ‌‌‌‌‌‌‌ ಪ್ರಮಾಣ ವಚನ ಸ್ವೀಕರಿಸಿದ ಅರಬೈಲ್ ಶಿವರಾಮ ಹೆಬ್ಬಾರ್ ಯಾವುದೆ ಹಮ್ಮು ಬಿಮ್ಮು ಇಲ್ಲದೆ ತೆರಳಿ ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದ ತಮ್ಮದೆ ಜಿಲ್ಲೆಯ ಹಿರಿಯ ರಾಜಕಾರಣಿ, ಕಾಂಗ್ರೆಸ್ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡಿದವರು ಆದ ಆರ್.ವಿ.ದೇಶಪಾಂಡೆ ಅವರ ಹಿರಿತನಕ್ಕೆ ತಲೆ ಬಾಗಿ ನಮಸ್ಕರಿಸಿ ಕೈ ಹಿಡಿದು ಶುಭಹಾರೈಕೆ ವಿನಿಮಯ ಮಾಡಿಕೊಂಡರು. ಹೆಬ್ಬಾರ್ ಅವರ ಈ ನಡೆ ಭವಿಷ್ಯದ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ. ಅಲ್ಲದೆ ಅಲ್ಪಸ್ವಲ್ಪ ಅಧಿಕಾರ ಲಭಿಸುತ್ತಲೆ ತನಗಿಂತ ಅನ್ಯರಿಲ್ಲ ಎಂಬ ಮನಸ್ಸಿನ ವ್ಯಕ್ತಿಗಳಿಗೆ ನೀತಿಪಾಠವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ದಿನ ನಿತ್ಯ ಕಲಿಯುವ ವಿದ್ಯಾರ್ಥಿಯಾಗಿರುತ್ತಾನೆ. ನಾನೆ ಮೇಲು ತನಗಿಂತ ಯಾರು ಇಲ್ಲ ಎಂಬ ಅಹಂಕಾರ ನಮ್ಮೊಂದಿಗೆ ಬಹಳ ಸಮಯ ನಿಲ್ಲುವುದಿಲ್ಲ ನಮ್ಮ ಸರಳತೆ, ನಮ್ಮ ಸನ್ನಡತೆ, ಸಂಸ್ಕಾರಗಳೆ ನಮ್ಮ ಕೈ ಹಿಡಿಯುವುದು ಅದಕ್ಕೆ ಹೆಬ್ಬಾರ್ ನಡೆದುಕೊಂಡ ರೀತಿ ಉತ್ತಮ ಸಂದೇಶ ಸಮಾಜಕ್ಕೆ ತಲುಪಲಿದೆ.

ಅದಕ್ಕಾಗಿಯೆ ಅಲ್ಲವೆ ಕಳೆದಬಾರಿ ಹೆಬ್ಬಾರ್ ಕಾಂಗ್ರೆಸ್ ನಲ್ಲಿದ್ದಾಗ ಚುನಾವಣೆಯಲ್ಲಿ ಮೋದಿ ಹವಾ ಆ ಮಟ್ಟದಲ್ಲಿದ್ದರು ಕಾಂಗ್ರೆಸ್ ನಿಂದಲು ಗೆದ್ದಿದ್ದರು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸುನಾಮಿಯೆ ಬಂದು ಅತಿರಥ ಮಹಾರಥರೆಲ್ಲ ಸೋಲುಂಡರು ಹೆಬ್ಬಾರ್ ಗೆಲುವಿನ ದಡ ಮುಟಿದ್ದಾರೆ ಅದಕ್ಕೆ ಹಣಬಲವೊ,ತೋಳ್ಬಲವೊ, ಅಧಿಕಾರ ಬಲವೊ,ಜಾತಿ ಬಲವೊ ಕಾರಣವಲ್ಲ ಹೆಬ್ಬಾರ್ ಅವರ ಸಂಸ್ಕಾರ ಬಲವೇ ಕಾರಣವಾಗಿದೆ ಎಂಬುದು ಪ್ರಜ್ಞಾವಂತ ಪ್ರಜೆಗಳ ಮಾತಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

2025 ನೆ ಸಾಲಿನ ಯಲ್ಲಾಪುರ ಗಣಪತಿಗಳ ದಿವ್ಯ ದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ 20 ಕ್ಕು ಅಧಿಕ ಕಡೆಗಳಲ್ಲಿ …

Leave a Reply

Your email address will not be published. Required fields are marked *