Breaking News

ಯಲ್ಲಾಪುರ ಅರ್ಬನ್ ಬ್ಯಾಂಕ್ ಗೆ 25 ರ ಸಂಭ್ರಮ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ: ಯಲ್ಲಾಪುರ ನೆಲದ ಶಕ್ತಿ ಮಾತೆ ತಾಯಿ ಗ್ರಾಮದೇವಿ ಅನುಗ್ರಹದಲ್ಲಿ ಆರ್ಥಿಕ ವಹಿವಾಟಿಗೆಂದು 25 ವರ್ಷಗಳ ಹಿಂದೆ ಸದುದ್ದೇಶದಿಂದ 3 ಲಕ್ಷದಿಂದ ಪ್ರಾರಂಭವಾದ ಪುಟ್ಟ ಸಂಸ್ಥೆಯೊಂದು ಬೃಹದಾಕಾರವಾಗಿ ಬೆಳೆದು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಆರು ಶಾಖೆಗಳನ್ನು ಹೊಂದಿದ್ದು ಪ್ರಸಕ್ತ ಆರ್ಥಿಕ ವರ್ಷದ ಕೊನೆಯಲ್ಲಿ 59 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು 70 ಲಕ್ಷ ಲಾಭ ಗಳಿಸಿದೆ. ದೈವಾನುಗ್ರಹದಿಂದ ಗ್ರಾಹಕರ ನಂಬಿಕೆ , ಸಿಬ್ಬಂದಿಗಳ ಶ್ರಮ, ಆಡಳಿತ ಮಂಡಳಿಯ ಭವಿಷ್ಯದ ಉತ್ತಮ ಚಿಂತನೆ ” ದಿ ಯಲ್ಲಾಪುರ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ” 25 ವಸಂತಗಳನ್ನು ಪೂರೈಸಿದೆ. ಈ ಸಂಬಂಧ ಶ್ರಮದ ಬದ್ದತೆಯ ಸಂಭ್ರಮವನ್ನು ಬೆಳ್ಳಿ ಹಬ್ಬದ ಸಮಾರಂಭದೊಂದಿಗೆ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಗ್ರಾಮದೇವಿ ದೇವಾಲಯದ ಅರ್ಚಕ ಪರಶುರಮ ಆಚಾರಿ ಹೇಳಿದರು.

ಅವರು ಪಟ್ಟಣದ ವೆಂಕಟರಮಣ ಮಠದಲ್ಲಿ ಕರೆದ ಸುದ್ಧಿಗೋಷ್ಟಿಯಲ್ಲಿ ಬೆಳ್ಳಿಹಬ್ಬದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ, ಕಾರ್ಯಕ್ರಮಗಳ ವಿವರ ನೀಡಿ, ಸೊಸೈಟಿಯ ಸಾಧನೆಗಳ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡುತ್ತಿದ್ದರು.


25 ವರ್ಷಗಳ ಹಿಂದೆ ತಾಲೂಕಿನ ಜನರಿಗೆ ಆರ್ಥಿಕ ವ್ಯವಹಾರದ ಅನುಕೂಲತೆ ಕಲ್ಪಿಸುವ ಸದುದ್ದೇಶದಿಂದ ಅನೇಕ ಪ್ರಮುಖ ಸಹಕಾರಿಗಳ ಮುಂದಾಳತ್ವದಲ್ಲಿ ಸೊಸೈಟಿ ಪ್ರಾರಂಭವಾಯಿತು. ನಂತರ ಗ್ರಾಹಕರ ವಿಶ್ವಾಸ ಮತ್ತು ನಂಬಿಕೆಗಳನ್ನು ಗಳಿಸಿದ ಸೊಸೈಟಿಯು 6 ಶಾಖಾ ಕಚೇರಿಗಳನ್ನು ತೆರೆದು ಆಯಾ ಪ್ರದೇಶದ ಗ್ರಾಹಕರಿಗೆ ಸಾಧ್ಯವಿದ್ದಷ್ಟು ಪ್ರಮಾಣದ ಆರ್ಥಿಕ ಸವಲತ್ತುಗಳನ್ನು ನೀಡುತ್ತ ಇದೀಗ ವಿವಿಧ ಬಗೆಯ ಸಾಲ ಸೌಲಭ್ಯಗಳನ್ನು ನೀಡುತ್ತಿದೆ ಎಂದು ವಿವರಿಸಿದರು.
ಸಂಘವು ಆರ್ಥಿಕ ವಹಿವಾಟಿನೊಂದಿಗೆ ಸಾಮಾಜಿಕ ಸೇವಾ ಕಾರ್ಯದಲ್ಲು ತೊಡಗಿಕೊಂಡು ಕಾರ್ಗಿಲ್ ಸಂತ್ರಸ್ಥರ ಪರಿಹಾರದ ನಿಧಿಗೆ ಧನ ಸಹಾಯ, ಸುನಾಮಿ ಸಂತ್ರಸ್ಥರಿಗೆ ಧನ ಸಹಾಯ, ಪ್ರವಾಹ ಸಂತ್ರಸ್ಥರಿಗೆ ನೆರವು ನೀಡಿದೆ.

ಕಳೆದ ವರ್ಷ ಕೊರೋನಾ ಸಂದರ್ಭದಲ್ಲಿ ತಾಲೂಕಿನ ಆಶಾ ಕಾರ್ಯಕರ್ತರಿಗೆ ಕಿಟ್ ವಿತಣೆ ಮಾಡಿದ ಮೊದಲ ಸಂಘವೆಂಬ ಹೆಮ್ಮೆಗೆ ಪಾತ್ರವಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ನಾರಾಯಣ ಭಟ್ ವಿವರಿಸಿದರು.


ಸಂಘದ ರಜತ ಮಹೋತ್ಸವ ಸಮಾರಂಭ ಮೇ.25 ರಂದು ಪಟ್ಟಣದ ವೆಂಕಟರಮಣ ಮಠದ ಸಭಾಭವನದಲ್ಲಿ ನಡೆಯಲಿದ್ದು, ಅಂದು ಬೆಳಿಗ್ಗೆ 9 ಗಂಟೆಗೆ ನವಚಂಡಿ ಹವನ, ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ವೇ.ಮೂ. ಗಣಪತಿ ಭಟ್ಟ ಕೋಲೀಬೇಣ ಇವರಿಂದ ಧಾರ್ಮಿಕ ಪ್ರವಚನ.
ಸಂಜೆ.4 ಗಂಟೆಗೆ ಬೆಳ್ಳಿಹಬ್ಬದ ಸಮಾರಂಭದ ಉದ್ಘಾಟನೆಯನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದಾರೆ, ಸಂಘದ ಅಧ್ಯಕ್ಷ ಪರಶುರಾಮ ಆಚಾರಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಹಕಾರ ರತ್ನ ಪುರಸ್ಕೃತ ಹಿರಿಯ ಸಹಕಾರಿಗಳಾದ ಆರ್.ಎನ್.ಹೆಗಡೆ ಗೋರ್ಸಗದ್ದೆ ಮತ್ತು ಜಿ.ಎನ್.ಹೆಗಡೆ ಹಿರೇಸರ, ಯು.ಕೆ ಸೌಹಾರ್ದ ಸಹಕಾರಿಯ ಅಧ್ಯಕ್ಷ ಪ್ರಮೋದ ಹೆಗಡೆ, ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ನಿರ್ದೇಶಕಿ ಸರಸ್ವತಿ ಎನ್.ರವಿ, ವೈ.ಟಿ.ಎಸ್.ಎಸ್ ಅಧ್ಯಕ್ಷ ರವಿ ಶಾನಬಾಗ, ಗ್ರಾಮದೇವಿ ದೇವಸ್ಥಾನದ ಧರ್ಮದರ್ಶಿ ರಾಜೇಂದ್ರಪ್ರಸಾದ ಭಟ್ಟ, ಮುಂತಾದವರು ಪಾಲ್ಗೊಳ್ಳುವರು.
ಇದೇ ಸಂದರ್ಭದಲ್ಲಿ ಸಂಘದ ಅಭಿವೃದ್ಧಿಗೆ ಕೊಡುಗೆ ನೀಡಿದ ಗಣ್ಯರಿಗೆ ಮತ್ತು ಸಂಘದಲ್ಲಿ ಉತ್ತಮ ವ್ಯವಹಾರ ಮಾಡಿದ ಸದಸ್ಯರಿಗೆ ಗೌರವ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಸಂಜೆ ವೀರಾಂಜನೇಯ ಯಕ್ಷಮಿತ್ರ ಮಂಡಳಿಯ ಕಲಾವಿದರಿಂದ `ಗಧಾಯುದ್ಧ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ, ರಾಘವೇಂದ್ರ ಆಚಾರ್ಯ ಜನ್ಸಾಲೆ ಭಾಗವತರಾಗಿ ಪಾಲ್ಗೊಳ್ಳುವರು ಎಂದು ವಿವರಿಸಿದರು.

ಸುದ್ಧಿಗೋಷ್ಟಿಯಲ್ಲಿ ರಜತಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ, ನಿರ್ದೇಶಕರಾದ ಸುರೇಶ ಅಣ್ವೇಕರ್, ನರಸಿಂಹ ಸಭಾಹಿತ, ಶಿವರಾಮ ಹೆಗಡೆ, ಸುಬ್ರಹ್ಮಣ್ಯ ಭಟ್ಟ, ಸುಶೀಲಾ ಬಾಂದೇಕರ್, ನಂದಿನಿ ಭಟ್ಟ ಹಾಗೂ ವ್ಯವಸ್ಥಾಪಕ ರಾಜೇಂದ್ರ ಭಟ್ಟ ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *