Breaking News

ಯಲ್ಲಾಪುರದಲ್ಲಿ ಅಡಕೆ ಕಳ್ಳರ ಬಂಧನ ಎರಡುವರೆ ಲಕ್ಷದ ಸ್ವತ್ತು ವಶಕ್ಕೆ.


ಯಲ್ಲಾಪುರ – ತಾಲ್ಲೂಕಿನ ಕೃಷ್ಣಗದ್ದೆ ಎಂಬಲ್ಲಿ ಮನೆಯ ಮುಂದೆ ಒಣಗಲು ಹಾಕಿದ್ದ ಕೆಂಪು ಅಡಕೆ ಕಳ್ಳತನವಾಗಿರುವ ಕುರಿತು ಯಲ್ಲಾಪುರ ಠಾಣೆಯಲ್ಲಿ ಜ.೧೫ರಂದು ಪ್ರಕರಣ ದಾಖಲಾಗಿತ್ತು. ಅದಕ್ಕೆ ಸಂಬAಧಿಸಿದAತೆ ಅಡಕೆ ಖದೀಮರನ್ನು ಮಾಲಿನ ಸಹಿತ ಯಲ್ಲಾಪುರ ಪೊಲೀಸರು ಹಿಡಿದಿದ್ದು ಕಳ್ಳರು ಅಂದರ್ ಆಗಿದ್ದಾರೆ.
ಜ.೧೪ ರಂದು ರಾತ್ರಿ ತಾಲೂಕಿನ ಕೃಷ್ಣಗದ್ದೆಯ ವಿಶ್ವೇಶ್ವರ ತಿಮ್ಮಪ್ಪ ಭಟ್ಟ ಎಂಬುವರ ಮನೆಯ ಮುಂದೆ ಒಣಗಲು ಹಾಕಿದ್ದ ಸುಮಾರು ೫೦,೦೦೦ರೂ ಮೌಲ್ಯದ ೧೩೦ ಕೆ.ಜಿ ಕೆಂಪು ಅಡಿಕೆಯನ್ನು ಯಾರೋ ಕದ್ದೊಯ್ದಿರುವ ಕುರಿತು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಯಲ್ಲಾಪುರ ಪೋಲೀಸರು ಹಲವು ಮಜಲುಗಳಲ್ಲಿ ತನಿಎ ಕೈಗೊಂಡು ಮಾ.೨೦ರಂದು ಚಿತ ಮಾಹಿತಿಯನ್ನಾಧರಿಸಿ ಅಡಿಕೆ ಕದ್ದ ಮೂವರು ಕಳ್ಳರನ್ನು ಬಂಧಿಸಿ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ದಾಂಡೇಲಿ ನಿವಾಸಿ ಮೌಲಾಲಿ ಸತ್ತರ ಸಾಬ ಜಮಾದಾರ(೩೧)ಹಾಗೂ ತಾಲೂಕಿನ ಸವಣೂರು ನಿವಾಸಿ ಸಾಹಿಲ್ ಶಬ್ಬೀರ್ ಗವಾರಿ(೧೯), ಹುಬ್ಬಳ್ಳಿಯ ಸಮೀರ್ ಮೆಹಬೂಬ ಸಾಬ ಹವಾಲ್ದಾರ(೨೧) ಎಂಬ ಮೂವರು ಕಳ್ಳರನ್ನು ಬಂಧಿಸಿ ಒಂದು ಕ್ವಿಂಟಾಲ್ ೩೦ ಕೆಜಿ ಕೆಂಪು ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ಸಿಫ್ಟ್ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಜಿಲ್ಲಾ ಪೋಲೀಸ್ ಅಧೀಕ್ಷಕ ನಾರಾಯಣ ಎಂ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ, ಜಗದೀಶ ಎಂ.ಎನ್, ಉಪಾಧೀಕ್ಷಕರಾದ ಗಣೇಶ ಕೆ.ಎಲ್ ಹಾಗೂ ಯಲ್ಲಾಪುರ ಪಿಐ ರಮೇಶ ಹಾನಾಪುರ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಹಮದ್ ಶಫಿ, ಗಿರೀಶ್ ಲಮಾಣಿ, ಪ್ರವೀಣ ಪೂಜಾರ, ಕರಣಕುಮಾರ, ಶೇಷು ಮರಾಠಿ, ನಾಗರಾಜ ನಾಯ್ಕ ಮತ್ತು ಮಹಿಳಾ ಸಿಬ್ಬಂದಿಗಳಾದ ಶೋಭಾ ನಾಯ್ಕ, ರೇಖಾ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *