
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನಾದ್ಯಂತ ಮೂರ್ನಾಲ್ಕು ದಿನಗಳಿಂದ ಬಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳೆಲ್ಲ ತುಂಬಿ ಹರಿಯುತ್ತಿದೆ. ತಂಪಾದ ಗಾಳಿ ಎಲ್ಲೆಡೆ ಬೀಸುತ್ತಿದೆ. ಮರದ ರೆಂಬೆ ಕೊಂಬೆಗಳು ಕೆಲವೆಡೆ ಬೃಹತ್ ಗಾತ್ರದ ಮರಗಳು ಧರೆಗುರುಳುತ್ತಿದೆ. ಜೋರಾದ ಗಾಳಿ ಬೀಸುತ್ತಿದೆ. ಈ ಎಲ್ಲಾ ಕಾರಣಗಳಿಂದ ಕನಿಷ್ಠ ಎರಡು ಅಥವ ಮೂರು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ಬಹುಮುಖ್ಯವಾಗಿ ಅಂಗನವಾಡಿಗಳಿಗೆ ಸರ್ಕಾರ ರಜೆ ಘೋಷಿಸುವುದು ಸೂಕ್ತವಾಗಿದೆ ಎಂಬುದು ಹಿರಿಯರ,ಪ್ರಾಜ್ಞರ, ಪೋಷಕರ ಹಾಗು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಒಂದೆಡೆ ಜೋರಾಗಿ ಸುರಿಯುವ ಮಳೆ ಕಂಡು ರಜೆ ಕೊಡಬಹುದಿತ್ತೇನೊ ಎಂದು ಯೋಚಿಸುವಷ್ಟರಲ್ಲಿ ಸ್ವಲ್ಪ ಸಮಯದ ನಂತರ ಮಳೆ ಕಡಿಮೆಯಾಗುವ ಲಕ್ಷಣ ಕಂಡು ರಜೆ ಕೊಡುವುದು ಬೇಡ ಎಂದು ನಿರ್ಧರಿಸುವಂತೆ ಪ್ರಕೃತಿಯ ಏರಿಳಿತ ನಡೆಯುತ್ತಲೆ ಇರುತ್ತದೆ. ಆದರೆ ಮಳೆ ಬೀಳುವ ದಿನದಲ್ಲಿ ಮತ್ತು ಮಳೆ ನಿಂತ ಮೇಲಿನ ದಿನಗಳಲ್ಲಿಯು ಅತ್ಯಂತ ಎಚ್ಚರಿಕೆಯ ಸಮಯವೆ ಆಗಿರುತ್ತದೆ. ಮಳೆ ಜೋರಾಗಿ ಬೀಳುವಾಗ ಆಗುವ ಅವಘಡದಂತೆಯೆ ಮಳೆ ಸಂಪೂರ್ಣ ನಿಂತ ಮೇಲು ನಡೆಯುತ್ತದೆ ಕೆಲವು ಲಡ್ಡಾದ ರೆಂಬೆ ಕೊಂಬೆಗಳು, ಶಾಲೆಯ ಕಟ್ಟಡದ ಮೇಲ್ಬಾಗದ ಹೆಂಚುಗಳು, ನೀರು ಜಿನುಗುತ್ತಿರುವ ಕಟ್ಟಡಗಳು ಮಳೆ ನೀರನ್ನು ಸಾಕಷ್ಟು ಕುಡಿದು ನಂತರದಲ್ಲಿ ಬಿದ್ದು ಅವಾಂತರ ಸೃಷ್ಟಿಸುವ ಸಾದ್ಯತೆ ಇರಲಿದೆ ಆ ಕಾರಣದಿಂದ ಮಳೆ ನಿಂತ ಮೇಲು ಎರಡು ದಿನ ರಜೆ ನೀಡಿ ಇಂತಹ ಸಮಸ್ಯೆಗಳನ್ನು ಪರಿಶೀಲಿಸಿ ಸಮಸ್ಯೆಗಳಿದ್ದರೆ ಪರಿಹರಿಸಿ ನಂತರ ಪಾಠ ಪ್ರವಚನ ಪ್ರಾರಂಭಿಸುವುದು ಸೂಕ್ತವಾಗಿದೆ. ಇಲ್ಲವಾದಲ್ಲಿ ನಡೆಯಬಾರದ ಅವಘಡ ಸಂಭವಿಸಿದರೆ ಹೊಣೆ ಯಾರು?

ಕೊಟ್ಟ ರಜೆಗಳನ್ನು ಶನಿವಾರ ರವಿವಾರದಲ್ಲಿ ಮುಂದೆ ಸರಿದೂಗಿಸುವುದು ದೊಡ್ಡ ಕಷ್ಟವೇನಲ್ಲ ಆದರೆ ಅವಘಡದಿಂದಾಗುವ ಅನಾಹುತ ಭವಿಷ್ಯದ ಓದಿನ ಮೇಲೆ ಮಕ್ಕಳಿಗೆ ಗಂಭೀರ ಪರಿಣಾಮ ಬೀರಲಿದೆ ಎಂಬುದು ಸತ್ಯದ ಸಂಗತಿಯಾಗಿದೆ.
ಮುಖ್ಯಾಂಶಗಳು ಮಳೆಯ ಪ್ರಮಾಣ ಹೆಚ್ಚಾಗಿದೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.
ಮಳೆಯ ಕಾರಣ ಗ್ರಾಮೀಣ ಭಾಗದ ಮಕ್ಕಳು ಸಕಾಲಕ್ಕೆ ಶಾಲೆಗೆ ಬರಲು ಕಷ್ಟವಾಗಲಿದೆ ಬಸ್ ಗಳು ಸರಿಯಾಗಿ ಇರುವುದಿಲ್ಲ ಬೈಕ್ ನಲ್ಲಿ ವೇಗವಾಗಿ ಬರಲು ಸಾದ್ಯವಿಲ್ಲ
ವಿಪರೀತ ಬೀಸುತ್ತಿರುವ ತಂಡಿ ಗಾಳಿಗೆ ಮಕ್ಕಳಲ್ಲಿ ಶೀತ ಕೆಮ್ಮು ಜ್ವರದ ಲಕ್ಷಣಗಳು ಕಾಣಿಸುತ್ತಿವೆ.
ಬಹಳ ವರ್ಷದ ಹಳೆಯ ಮರಗಳು, ಒಣಗಿದ ರೆಂಬೆಗಳು ಲಡ್ಡಾದ ಕೊಂಬೆಗಳು ಮಳೆ ಬರುವಾಗಲು ಬಂದು ನಿಂತ ಮೇಲು ಅಲಲ್ಲಿ ಬೀಳುತ್ತಿರುವುದನ್ನು ಗಮನಿಸಿದರೆ ಈ ಸಮಯದಲ್ಲಿ ಮಕ್ಕಳ ಓಡಾಟ ಅಷ್ಟು ಒಳ್ಳೆಯದಲ್ಲ.
ಅದೆಷ್ಟೋ ಮಕ್ಕಳ ಬಳಿ ರೈನ್ ಕೋಟ್ ಅಥವ ಛತ್ರಿಗಳು ಸಹ ಇಲ್ಲದಿರುವುದನ್ನು ಕಾಣಬಹುದು ಕೈಯಲ್ಲಿ ಹಿಡಿದ ಪುಸ್ತಕಗಳೆಲ್ಲಾ ನೆನೆಸಿ ತಾನು ತೊಯ್ದು ಶಾಲೆಗೆ ಬರುವುದನ್ನು ಗಮನಿಸಬೇಕಿದೆ.


Prathidvani Yellapura